Friday, Oct 30 2020 | Time 07:02 Hrs(IST)
Special Share

ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಶೀತಲಸಮರ, ಉಷ್ಣ ಸಮರ  ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್
ಶೀತಲಸಮರ, ಉಷ್ಣ ಸಮರ ಚೀನಾಗೆ ಅಗತ್ಯವಿಲ್ಲ ; ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಬೀಜಿಂಗ್, ಸೆ 23(ಯುಎನ್ಐ) ಚೀನಾ ಎಂದಿಗೂ ಆಧಿಪತ್ಯ ಸಾಧಿಸಲು ಬಯಸುವುದಿಲ್ಲ... ಶೀತಲ ಸಮರ ಇಲ್ಲವೇ ಉಷ್ಣ ಸಮರಗಳ ಅಗತ್ಯ ತಮಗಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ 75 ನೇ ವರ್ಷದ ಸಾಮಾನ್ಯ ಸಭೆ ಸಮಾವೇಶ ಉದ್ದೇಶಿಸಿ ಮಾತನಾಡಿ.... ಪೂರ್ವ ಲಡಾಖ್ ನಲ್ಲಿ ಚೀನಾ ಭಾರತ ಸೇನೆಗಳ ನಡುವೆ ಕಳೆದ ನಾಲ್ಕು ತಿಂಗಳಿಂದ ಮುಂದುವರಿದಿರುವ ಸಂಘರ್ಷ ಹಿನ್ನಲೆಯಲ್ಲಿ, ಭಿನ್ನಾಭಿಪ್ರಾಯಗಳಿಗೆ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಮೊದಲೇ ಮುದ್ರಿಸಲಾಗಿರುವ ವೀಡಿಯೊ ಭಾಷಣದಲ್ಲಿ ಜಿನ್ ಪಿಂಗ್ ತಿಳಿಸಿದ್ದಾರೆ.

ದೇಶೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಅಭಿವೃದ್ಧಿ ಮಾದರಿ ರೂಪಿಸುವ ಗುರಿ ಹೊಂದಿದ್ದೇವೆ. ಚೀನಾದ ಆರ್ಥಿಕ ಬೆಳವಣಿಗೆ ಜೊತೆಗೆ ಜಾಗತಿಕ ಆರ್ಥಿಕ ಬೆಳವಣಿಗೆಗೆ ಇದು ನೆರವಾಗಲಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವ ಚೀನಾ ಎಲ್ಲಾ ದೇಶಗಳೊಂದಿಗೆ ಶಾಂತಿ, ಸಹಕಾರಿಯುತ ಸಂಬಂಧಗಳಿಗೆ ಬದ್ಧವಾಗಿದೆ. ವಿವಿಧ ದೇಶಗಳೊಂದಿಗೆ ತಾನು ಹೊಂದಿರುವ ಎಲ್ಲ ವಿವಾದಗಳನ್ನು ಚರ್ಚೆ, ಸಂವಾದದ ಮೂಲಕ ಇತ್ಯರ್ಥಪಡಿಸಿಕೊಳ್ಳಲಾಗುವುದು ಎಂದು ಅವರು ಪುನರುಚ್ಚರಿಸಿದ್ದಾರೆ.

ಕೊರೊನಾ ವೈರಸ್ ಪ್ರಸರಣ ಕುರಿತು ಚೀನಾ ವಿರುದ್ಧ ಅಂತರರಾಷ್ಟ್ರೀಯವಾಗಿ ಕೇಳಿ ಬರುತ್ತಿರುವ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ. ವೈರಸ್ ವಿರುದ್ಧ ಹೋರಾಡಲು ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕು. ಈ ಸಾಂಕ್ರಾಮಿಕ ನಿರ್ಮೂಲನೆಗೊಳಿಸಲು ಅಂತರರಾಷ್ಟ್ರೀಯ ಜಂಟಿ ಯೋಜನೆ ರೂಪಿಸಬೇಕು. ಸಮಸ್ಯೆಯನ್ನು ರಾಜಕೀಯಗೊಳಿಸುವುದು ಸರಿಯಾದ ವಿಧಾನವಲ್ಲ ಎಂದರು. ಕೋವಿಡ್ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನು ವರ್ಚುವಲ್ ಮೂಲಕ ಆಯೋಜಿಸಲಾಗಿದೆ.

ಯುಎನ್ಐ ಕೆವಿಆರ್ 11.16