Sunday, Mar 29 2020 | Time 00:32 Hrs(IST)
National Share

ಶ್ರೀನಗರದಿಂದ ಜಮ್ಮುವಿಗೆ ಏಕಮುಖ ವಾಹನ ಸಂಚಾರಕ್ಕೆ ಅವಕಾಶ

ಶ್ರೀನಗರ, ಫೆ 16 (ಯುಎನ್‌ಐ) ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದಿನ ಆದೇಶ ಬರುವವರೆಗೆ ಏಕಮುಖ ಸಂಚಾರ ಮುಂದುವರೆಯಲಿದೆ.
ಭಾನುವಾರ, ಶ್ರೀನಗರದಿಂದ ಜಮ್ಮು ಕಡೆಗೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಯುಎನ್‌ಐಗೆ ತಿಳಿಸಿದ್ದಾರೆ.
ವಾಹನ ದಟ್ಟಣೆ ತಪ್ಪಿಸಲು ಯಾವುದೇ ವಾಹನವನ್ನು ವಿರುದ್ಧ ದಿಕ್ಕಿನಿಂದ ಅನುಮತಿಸಲಾಗುತ್ತಿಲ್ಲ. ಕೆಲ ಸ್ಥಳಗಳಲ್ಲಿ ರಸ್ತೆ ತುಂಬಾ ಕಿರಿದಾಗಿರುವುದರಿಂದ ಗಂಟೆಗಟ್ಟಲೆ ವಾಹನಗಳು ನಿಲ್ಲಬೇಕಾದ ಪರಿಸ್ಥಿತಿ ಇದೆ. ವಿಶೇಷವಾಗಿ ರಂಬಾನ್ ಮತ್ತು ರಾಮ್ಸು ನಡುವೆ ಒಂದು ಸಮಯದಲ್ಲಿ ಒಂದು ವಾಹನ ಮಾತ್ರ ಹಾದುಹೋಗಬಹುದು.
ಲಘು ವಾಹನಗಳಿಗೆ (ಎಲ್‌ಎಂವಿ) ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಚರಿಸಲು ಅವಕಾಶವಿದ್ದರೆ, ಭಾರೀ ಮೋಟಾರು ವಾಹನಗಳಿಗೆ (ಎಚ್‌ಎಂವಿ) ಮಧ್ಯಾಹ್ನ ಅನುಮತಿಸಲಾಗಿದೆ ಎಂದು ಅವರು ಹೇಳಿದರು.
ಈ ಮಧ್ಯೆ, ಲಡಾಖ್‌ನ ಕೇಂದ್ರಾಡಳಿತ ಪ್ರದೇಶವನ್ನು ಕಾಶ್ಮೀರದೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆಯಾದ 434 ಕಿ.ಮೀ ಉದ್ದದ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿ ಕಳೆದ ಎರಡು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದರಿಂದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೆದ್ದಾರಿಯಲ್ಲಿ ಆರು ಅಡಿಗಳಿಂದ 12 ಅಡಿಗಳಿಗಿಂತ ಹೆಚ್ಚು ಹಿಮ ತುಂಬಿದೆ ಜೊಜಿಲಾ ಪಾಸ್ ಸೇರಿದಂತೆ ತಾಪಮಾನ ತೀವ್ರ ಕುಸಿದಿದೆ.
ಹಾಗೆಯೇ ದಕ್ಷಿಣ ಕಾಶ್ಮೀರದ ಶೋಪಿಯಾನ್ ಅನ್ನು ರಾಜೌರಿ, ಪೂಂಚ್ ಮತ್ತು ಅನಂತ್ ನಾಗ್-ಕಿಶ್ತ್ ವಾರ್ ರಸ್ತೆಯೊಂದಿಗೆ ಸಂಪರ್ಕಿಸುವ ಐತಿಹಾಸಿಕ 86 ಕಿ.ಮೀ ಉದ್ದದ ಮೊಘಲ್ ರಸ್ತೆ ಕಳೆದ ಎರಡು ತಿಂಗಳಿನಿಂದ ಹಿಮ ಸಂಗ್ರಹವಾಗಿರುವುದರಿಂದ ಮುಚ್ಚಲ್ಪಟ್ಟಿದೆ. ಈ ರಸ್ತೆಯನ್ನು ಮಾರ್ಚ್-ಏಪ್ರಿಲ್ ನಲ್ಲಿ ಮತ್ತೆ ತೆರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎನ್ಐ ಎಸ್ಎಲ್ಎಸ್ 1256
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..