Sunday, Mar 29 2020 | Time 00:26 Hrs(IST)
Sports Share

ಶ್ರೇಯಾಂಕ ಬಲ ಪಡಿಸಿಕೊಳ್ಳುವುದರ ಮೇಲೆ ಭಾರತದ ಬ್ಯಾಡ್ಮಿಂಟನ್ ಆಟಗಾರರ ಚಿತ್ತ

ನವದೆಹಲಿ, ಫೆ.27 (ಯುಎನ್ಐ)- ಮಾರ್ಚ್ 24 ರಿಂದ 29 ರವರೆಗೆ ಇಂದಿರಾಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯೋನೆಕ್ಸ್ ಸನ್ ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರರು ಅಖಾಡಕ್ಕೆ ಪ್ರವೇಶಿಸಲಿದ್ದು, ತಮ್ಮ ಶ್ರೇಯಾಂಕ ಬಲ ಪಡಿಸಿಕೊಳ್ಳಲು ಕಸರತ್ತು ನಡೆಸಲಿದ್ದಾರೆ.

ಈ ಪಂದ್ಯಾವಳಿ 2015 ರ ಚಾಂಪಿಯನ್ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಅವರಿಗೆ ಬಹಳ ವಿಶೇಷವಾಗಿದೆ. ಟೋಕಿಯೊ ಒಲಿಂಪಿಕ್ಸ್ ಆಡುವ ಕನಸನ್ನು ಈಡೇರಿಸಲು ಇಬ್ಬರೂ ಆಟಗಾರರು ಈ ಪಂದ್ಯಾವಳಿಯಿಂದ ಉತ್ತಮ ಪ್ರದರ್ಶನ ನೀಡಿ ಶ್ರೇಯಾಂಕದಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದ್ದಾರೆ. ಉಳಿದಂತೆ 2014 ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಪರುಪಳ್ಳಿ ಕಶ್ಯಪ್, ಎಚ್.ಎಸ್.ಪ್ರಣಾಯ್, ಸೌರಭ್ ವರ್ಮಾ, ಸಮೀರ್ ವರ್ಮಾ ಮತ್ತು ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಡ್ರಾದಲ್ಲಿ ತಮ್ಮ ಸವಾಲು ಮುಂದು ವರೆಸಲಿದ್ದಾರೆ.

ವಿಶ್ವ ಚಾಂಪಿಯನ್ ಸಿಂಧುಗೂ ವಿಶೇಷವಾಗಿದೆ. ಸಿಂಧು ತನ್ನ ದೇಶೀಯ ಪ್ರೇಕ್ಷಕರ ಮುಂದೆ ಅದ್ಭುತ ಪ್ರದರ್ಶನ ನೀಡುವ ಹಂಬಲದಲ್ಲಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ನಂತರ ಸಿಂಧು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಮತ್ತೊಮ್ಮೆ ಎಲ್ಲರ ಕಣ್ಣುಗಳು ಥೈಲ್ಯಾಂಡ್ ಓಪನ್ ಚಾಂಪಿಯನ್ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಜೋಡಿಯ ಮೇಲೆ ಇರುತ್ತದೆ. ಈ ಜೋಡಿ ಪ್ರಸ್ತುತ ವಿಶ್ವ ಶ್ರೇಯಾಂಕದಲ್ಲಿ 10 ನೇ ಸ್ಥಾನದಲ್ಲಿದೆ ಮತ್ತು ಬಹುತೇಕ ಟೋಕಿಯೊ ಒಲಿಂಪಿಕ್ಸ್‌ಗೆ ಕಾಲಿಟ್ಟಿದೆ. ಸಾತ್ವಿಕ್ ರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಮತ್ತು ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್ ಸಿಕ್ಕಿ ರೆಡ್ಡಿ ಕೂಡ ಮಿಶ್ರ ಡಬಲ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ.

ಯುಎನ್ಐ ವಿಎನ್ಎಲ್ 2141
More News

ಮಾಧ್ಯಮದ ಮೇಲೆ ಧೋನಿ ಪತ್ನಿ ಆಕ್ರೋಶ

28 Mar 2020 | 9:55 PM

 Sharesee more..

ತುರ್ತು ಯೋಜನೆಯ ಕೆಲಸ: ಐಸಿಸಿ

28 Mar 2020 | 9:45 PM

 Sharesee more..
ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

ಸಂಸದ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಿದ ರಿಜಿಜು

28 Mar 2020 | 9:32 PM

ನವದೆಹಲಿ, ಮಾ.28 (ಯುಎನ್ಐ)- ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಅವರು ಕೊರೊನಾ ವೈರಸ್ ಪೀಡಿತರಿಗೆ ಸಹಾಯ ಮಾಡಲು ತಮ್ಮ ಎಂಪಿ ನಿಧಿಯಿಂದ 1 ಕೋಟಿ ರೂ.ಗಳ ಅನುದಾನವನ್ನು ಶನಿವಾರ ಪ್ರಕಟಿಸಿದ್ದಾರೆ.

 Sharesee more..