Tuesday, Jan 26 2021 | Time 10:59 Hrs(IST)
  • ದೇಶಾದ್ಯಂತ ನಿನ್ನೆ 3,34,679 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ
  • ಕೆನಡಾದಲ್ಲಿ 7 50 ಲಕ್ಷ ದಾಟಿದ ಕೋವಿಡ್‍ ಪ್ರಕರಣಗಳ ಸಂಖ್ಯೆ
  • ಉಪರಾಷ್ಟ್ರಪತಿಯವರಿಂದ ದೇಶದ ಜನತೆಗೆ 72 ನೇ ಗಣರಾಜ್ಯೋತ್ಸವ ಶುಭಾಶಯ
  • ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪ್ರಧಾನಿ ಗೌರವ ನಮನ
  • ಭದ್ರತಾಕೋಟೆ ಭೇದಿಸಿ ರೈತರ ಲಗ್ಗೆ: ರಾಜಧಾನಿಯಲ್ಲಿ ಉದ್ವಿಗ್ನ ಸ್ಥಿತಿ
  • ನಾಡಿನ ಜನತೆಗೆ ಗಣರಾಜ್ಯೋತ್ಸವ ಶುಭಕೋರಿದ ಮುಖ್ಯಮಂತ್ರಿ
  • ರಷ್ಯಾದ ಸ್ಪುಟ್ನಿಕ್ ಲಸಿಕೆ ಪಡೆಯಲು ಭಾರತ ಚಿಂತನೆ : ವೆಂಕಟೇಶ್ ವರ್ಮಾ
  • 72 ನೇ ಗಣರಾಜ್ಯೋತ್ಸವ, ದೇಶವಾಸಿಗಳಿಗೆ ಶುಭ ಕೋರಿದ ಪ್ರಧಾನಿ
Karnataka Share

ಶ್ರೀ ರಾಮುಲು ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು,ಜು 16(ಯುಎನ್ಐ) ಸಚಿವ ಶ್ರೀರಾಮುಲು ಅವರ ರಾಜ್ಯವನ್ನು ಭಗವಂತೆನೇ ಕಾಪಾಡ ಬೇಕೆಂಬ ಹೇಳಿಕೆ ಲೋಕರೂಢಿಯಾಗಿ ಬಳಸಿದ್ದಾರೆ.ಅದನ್ನು ಗಂಭೀರವಾರಿ ಪರಿಣಿಸು ಅಗತ್ಯವಿಲ್ಲ.ಸರ್ಕಾರ ಕೋವಿಡ್ ವಿಷಯದಲ್ಲಿ ಬಹಳ ಗಂಭೀರವಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ವಿಧಾನ ಸೌಧದಲ್ಲಿ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಂಗಳೂರು ನಗರ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಲಾಕ್ ಡೌನ್ ಪರಿಸ್ಥಿತಿ ಕುರಿತು ಚರ್ಚೆ ಮಾಡಿದ್ದೇನೆ.ನಗರದಲ್ಲಿ ಲಾಕ್ ಡೌನ್ ನಿಯಂತ್ರಣದಲ್ಲಿ ಇದೆ.ಕೆಲವರು ನಿಯಮಾವಳಿ ಉಲ್ಲಂಘನೆ ಮಾಡುತ್ತಿದ್ದಾರೆ.ಹೀಗಾಗಿ ಅನಾವಶ್ಯ ಕವಾಗಿ ಓಡಾಡುವವರ ವಿರುದ್ದ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದೇನೆ ಎಂದರು.

ನಗರದಲ್ಲಿ ಹೆಚ್ಚುವರಿ ಆ್ಯಂಬುಲೆನ್ಸ್ ಸೇರ್ಪಡೆ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.ಹೆಚ್ಚುವರಿ 200 ಆ್ಯಂಬುಲೆನ್ಸ್ ಸಿದ್ದವಾಗುತ್ತಿವೆ.ಐಜಿಪಿಗೆ ಆ್ಯಂಬುಲೆನ್ಸ್ ಗಳ ನಿರ್ವಹಣೆ ಹಾಗೂ ಸಾಗಾಣಿಕೆ ಉಸ್ತುವಾರಿ ನೀಡಲಾಗಿದೆ.ನಿನ್ನೆ ಮುಖ್ಯಕಾರ್ಯದರ್ಶಿ ಅವರು ಸ್ಥಳಕ್ಕೆ ಭೇಟಿ ನೀಡಿ ಆ್ಯಂಬುಲೆನ್ಸ್ ತಯಾರಿ ಬಗ್ಗೆ ಪರಿಶೀಲೆನ ನಡೆಸಿದ್ದಾರೆ.ಹಂತ ಹಂತವಾಗಿ ಆ್ಯಂಬುಲೆನ್ಸ್ ಸೇರ್ಪಡೆ ಕೆಲಸ ನಡೆಯಲಿದೆ ಎಂದರು.

ಪ್ರತಿ ದಿನ ಎಷ್ಟು ಆ್ಯಂಬುಲೆನ್ಸ್ ಗಳನ್ನು ಬಳಸಲಾಗಿದೆ.ಯಾವ ವಲಯದಿಂದ ಎಷ್ಟು ರೋಗಿಗಳಿಗೆ ಸೇವೆ ಒದಗಿ ಸಿಕೊಟ್ಟಿದ್ದೇವೆ ಎಂಬ ಬಗ್ಗೆಯೂ ನಿತ್ಯ ಅಂಕಿ ಅಂಶ ಸಂಗ್ರಹ ಮಾಡುತ್ತಿದ್ದೇವೆ.ಕೊರೋನಾ ವಾರ್ ರೂಂ ಜೊ ತೆಗೆ ಪ್ರತೀ ವಾರ್ಡ್ ಗೆ ಮಾಹಿತಿ ರವಾನಿಸಲು ಎಲ್ಲಾ ಟ್ರಾಕಿಂಗ್ ಮತ್ತು ಕೊರೋನಾ ಸೋಂಕಿತರ ಗುರುತಿಸು ವಿಕೆ,ಆಸ್ಪತ್ರೆಗೆ ದಾಖಲಿಸುವ ಬಗ್ಗೆಯೂ ಒಂದೇ ವ್ಯವಸ್ಥೆ ಅಡಿ ತರಲು ಸೂಚಿಸಲಾಗಿದೆ.ಕೊರೋನಾ ವರದಿ ಬಂದ ತಕ್ಷಣ ಸ್ಥಳೀಯ ವಾರ್ಡಗಳಿಗೆ ಸಂದೇಶ ರವಾನೆಯಾಗಿ ಸೋಂಕಿತರನ್ನು ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಯಾರೂ ಬೆಡ್ ಗಳಿಗಾಗಿ,ಆ್ಯಂಬುಲೆನ್ಸ್ ಸಿಗದೆ ಆಸ್ಪತ್ರೆಗೆ ಅಲೆಯುವ,ಬೆಡ್ ಸಿಗದೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಇರಬಾರದೆಂಬ ತೀರ್ಮಾನಿಸಲಾಗಿದೆ.ಆದಷ್ಟು ಶೀಘ್ರದಲ್ಲಿ ಏಕೀಕೃತ ವ್ಯವಸ್ಥೆ ರೂಪಿಸಿದರು ಬಹುತೇಕ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಇನ್ನೆರಡು ತಿಂಗಳಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಲಿದೆ ಎಂಬ ಸಚಿವ ಆರ್.ಅಶೋ ಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಬೇಕು.ಕೊರೋನಗೆ ವ್ಯಾಕ್ಸಿ ನ್ ಬರುವ ತನಕ ಕರೊನ ಜತೆ ಹೋರಾಡಲೇಬೇಕು ಇದು ಅನಿವಾರ್ಯ ಎನ್ನುವ ಮೂಲಕ ಸೋಂಕನ್ನು ತಡೆ ಯುಲು ಕಷ್ಟಸಾಧ್ಯವೆಂದು ಗೃಹ ಸಚಿವರು ತಿಳಿಸಿದ್ದಾರೆ.

ಗೃಹ ಸಚಿವರ ಸಂಬಂಧಿಯೊಬ್ಬರು ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಕ್ಕೆ ಸ್ಪಷ್ಟಣೆ ನೀಡಿದ ಅವರು,ತಮಗೆ ಮಂಜುನಾಥ್ ಎಂಬ ಯಾವ ಸಂಬಂಧಿಸಿಯೂ ಇಲ್ಲ.ಅವರ ಹೆಸರಿನವರ ವ್ಯಕ್ತಿಯೂ ನನಗೆ ಪರಿಚಯವೂ ಇಲ್ಲದಿದ್ದ ಮೇಲೆ ಅಕ್ರಮ ಹೇಗೆ ಸಾಧ್ಯ? ಇದು ಸತ್ಯಕ್ಕೆ ದೂರವಾದ ವಿಚಾರ ವೆಂದು ಆರೋಪವನ್ನು ಅಲ್ಲಗಳೆದರು.

ಯುಎನ್ಐ ಎಸ್ಎಂಆರ್ ವಿಎನ್ 1705