Sunday, Oct 20 2019 | Time 08:56 Hrs(IST)
  • ಮಾನಸಿಕ ಹೊಂದಾಣಿಕೆಯೇ ರೋಹಿತ್ ಯಶಸ್ಸಿನ ಮೂಲಮಂತ್ರ: ವಿಕ್ರಮ್ ರಾಥೋಡ್
Health -Lifestyle Share

ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅತಿ ಅಗತ್ಯ; ಕಿರಣ್ ಬೇಡಿ

ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅತಿ ಅಗತ್ಯ; ಕಿರಣ್ ಬೇಡಿ
ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅತಿ ಅಗತ್ಯ; ಕಿರಣ್ ಬೇಡಿ

ಬೆಂಗಳೂರು, ಸೆ 8 (ಯುಎನ್ಐ) ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕಡ್ಡಾಯವಾಗಬೇಕು ಎಂದು ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.

ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದಲ್ಲಿ ಭಾನುವಾರ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ವಿಶ್ವ ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಶಾಲಾ ಮಟ್ಟದಲ್ಲೇ ಲೈಂಗಿಕ ಶಿಕ್ಷಣ ಹಾಗೂ ಋತುಚಕ್ರದ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು.ಇದು ಕೇವಲ ಹೆಣ್ಣುಮಕ್ಕಳಿಗೆ ಸೀಮಿತವಾಗದೆ ಗಂಡು ಮಕ್ಕಳಿಗೂ ಅತಿ ಅಗತ್ಯವಾಗಿದೆ. ಇದರಿಂದ ಯುವಜನತೆ ತಮ್ಮ ಮನದ ಇಂಗಿತಗಳನ್ನು ಹತ್ತಿಕ್ಕಿಕೊಳ್ಳಲಾಗದೆ ತಪ್ಪು ದಾರಿ ಹಿಡಿಯುವುದು ತಪ್ಪುತ್ತದೆ ಎಂದರು.

ಆದರೆ, ಮಕ್ಕಳಿಗೆ ಶಿಕ್ಷಣ ನೀಡುವ ಮೊದಲು ಶಿಕ್ಷಕರು ಹಾಗೂ ಪೋಷಕರಿಗೆ ತರಬೇತಿ ನೀಡಬೇಕು. ಮನೆಯಲ್ಲಿ ಪೋಷಕರಿಗೆ ಮಕ್ಕಳನ್ನು ಈ ಶಿಕ್ಷಣಕ್ಕೆ ಸಜ್ಜುಗೊಳಿಸಬೇಕು ಹಾಗೂ ಶಿಕ್ಷಕರಿಗೆ ಅವರಿಗೆ ಮುಜುಗರವಾಗದಂತೆ ಜೀವನ ಚಕ್ರ ಹಾಗೂ ಲೈಂಗಿಕ ಬದಲಾವಣೆ ಕುರಿತು ಮಾಹಿತಿ ನೀಡಬೇಕು. ಇದಕ್ಕೆ ಸಂಪೂರ್ಣ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕಿದೆ ಎಂದರು.

ಋತುಚಕ್ರದ ಸ್ವಚ್ಛತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಈಗಾಗಲೇ ಜನರಲ್ಲಿ ಅರಿವು ಮೂಡುತ್ತಿದೆ. ಆದರೂ, ಇದು ಮುಂದಿನ ದಿನಗಳಲ್ಲಿ ಅತಿ ದೊಡ್ಡ ಆಂದೋಲನವಾಗಿ ಬದಲಾಗಬೇಕಿದೆ ಎಂದು ಕರೆ ನೀಡಿದರು.

ಇದಕ್ಕೆ ಸಮಾವೇಶದ ಆಯೋಜಕರಲ್ಲಿ ಒಬ್ಬರಾದ ಪ್ರಸೂತಿ ಹಾಗೂ ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಅವರು ಸಹಮತಿ ವ್ಯಕ್ತಪಡಿಸಿದರು.

ಯುಎನ್ಐ ಎಸ್ಎಚ್ ಕೆಎಸ್ ವಿ 1953

More News
ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

ರಾಜಧಾನಿಯಲ್ಲಿ ಉಲ್ಬಣಿಸಿದ ಡೆಂಘೀ ಜ್ವರ

13 Sep 2019 | 3:55 PM

ಬೆಂಗಳೂರು, ಸೆ 13 [ಯುಎನ್ಐ]ಬೆಂಗಳೂರು ನಗರ ಡೆಂಘೀ ಜ್ವರದ ರಾಜಧಾನಿಯಾಗಿ ಪರಿವರ್ತನೆಯಾಗಿದ್ದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 60ಕ್ಕೂ ಹೆಚ್ಚು ಬೆಂಗಳೂರಿನಲ್ಲಿ ಪತ್ತೆಯಾಗಿದೆ.

 Sharesee more..
'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

09 Sep 2019 | 5:54 PM

ಬೆಂಗಳೂರು, ಸೆ 9 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ

 Sharesee more..