Monday, Aug 3 2020 | Time 23:19 Hrs(IST)
  • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
  • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
  • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
  • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
  • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
  • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
  • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
  • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
  • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
  • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
  • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
  • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
  • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
  • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
National Share

ಶಾಲಾ ಮಂಡಳಿಗಳಲ್ಲಿ ಏಕರೂಪತೆಗಾಗಿ ಶೀಘ್ರದಲ್ಲೇ ಸರ್ಕಾರಿ ಸಂಸ್ಥೆ ಸ್ಥಾಪನೆ

ನವದೆಹಲಿ, ಜೂನ್ 20 (ಯುಎನ್‌ಐ) ಹತ್ತು ಮತ್ತು ಹನ್ನೆರಡನೇ ತರಗತಿಗಳ ಪರೀಕ್ಷಾ ಮಾದರಿ ಹಾಗೂ ಮೌಲ್ಯಮಾಪನಕಕ್ಕಾಗಿ ವಿವಿಧ ಶಾಲಾ ಮಂಡಳಿಗಳಲ್ಲಿ ಏಕರೂಪದ ಮಾನದಂಡಗಳನ್ನು ನಿಗದಿಪಡಿಸಲು ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ (ಎನ್‍ಎಸಿ) ಸ್ಥಾಪಿಸುವ ಪ್ರಸ್ತಾವನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶೀಘ್ರದಲ್ಲೇ ಅಂತಿಮಗೊಳಿಸಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), 2020 ಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ದೊರೆತ ಕೂಡಲೇ ಎನ್‌ಎಸಿ ಸ್ಥಾಪನೆಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ನಿಟ್ಟಿನಲ್ಲಿ ಸಚಿವಾಲಯವು ಪ್ರಧಾನ ಮಂತ್ರಿಯವರ ಕಚೇರಿಗೆ ಪ್ರಸ್ತಾವನೆ ನೀಡಿತ್ತು. ಹಾಗೂ ಅದರ ಪ್ರತಿಕ್ರಿಯೆಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಇಆರ್‌ಟಿ) ಪತ್ರ ಬರೆದಿದೆ ಎಂದು ಹೇಳಲಾಗಿದೆ.
ಶಾಲಾ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಸುಧಾರಣೆಗಳಿಗಾಗಿ ಎನ್‌ಇಪಿಯ ಯೋಜನೆಯಲ್ಲಿ ಎನ್‌ಎಸಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

2022-23ರ ಶೈಕ್ಷಣಿಕ ಅಧಿವೇಶನದ ವೇಳೆಗೆ ಮೌಲ್ಯಮಾಪನ ವ್ಯವಸ್ಥೆಯನ್ನು ಪರಿವರ್ತಿಸುವುದರ ಹೊರತಾಗಿ, ರಾಜ್ಯ ಸಾಧನೆ ಸಮೀಕ್ಷೆ (ಎಸ್‌ಎಎಸ್) , ರಾಷ್ಟ್ರೀಯ ಸಾಧನೆ ಸಮೀಕ್ಷೆ (ಎನ್‌ಎಎಸ್) ಗೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಯುಎನ್‍ಐ ಎಸ್‍ಎ ವಿಎನ್ 1340