Wednesday, Aug 12 2020 | Time 01:11 Hrs(IST)
  • ಗಲಭೆ ನಿಯಂತ್ರಿಸಲು ಪೊಲೀಸರಿಂದ ಫೈರಿಂಗ್ ಓರ್ವ ಸಾವು,ಮೂವರಿಗೆ ಗಾಯ : ತಡರಾತ್ರಿ ಗೃಹ ಸಚಿವರಿಗೆ ದೂರವಾಣಿ ಕರೆ
  • ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೊಬ್ಬರಿಂದ ಕೋಮು ಪ್ರಚೋದಿತ ಪೋಸ್ಟ್,ಠಾಣೆಗೆ ಹೆಚ್ಚಿ ಬೆಂಕಿ ಹಚ್ಚಿ ಗಲಾಟೆ
business economy Share

ಷೇರು ವಿನಿಮಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಉತ್ತಮ ಸಾಧನೆ

ಷೇರು ವಿನಿಮಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಉತ್ತಮ ಸಾಧನೆ
ಷೇರು ವಿನಿಮಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಉತ್ತಮ ಸಾಧನೆ

ಮುಂಬಯಿ, ಮೇ 21 (ಯುಎನ್ಐ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ - ರೈಟ್ಸ್ ಎಂಟೈಟಲ್‌ಮೆಂಟ್‌ನ (RIL - RE) ಡಿ-ಮಟೀರಿಯಲೈಸ್ಡ್ ಟ್ರೇಡಿಂಗ್‌ಗೆ ಬುಧವಾರ ಷೇರು ವಿನಿಮಯ ಕೇಂದ್ರಗಳಲ್ಲಿ ಬಲಿಷ್ಠ ಪ್ರವೇಶ ದೊರೆತಿದ್ದು, ಸುಮಾರು ಶೇ. 40ರಷ್ಟು ಏರಿಕೆ ಕಂಡ ಬೆಲೆಯು ದಿನದ ಕೊನೆಗೆ ರೂ. 212ಕ್ಕೆ ತಲುಪಿದೆ.

ಆಯಿಲ್-ಟು-ಟೆಲಿಕಾಂ ದೈತ್ಯ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್‌ನ 53,125 ಕೋಟಿ ರೂ. ಮೌಲ್ಯದ ಬೃಹತ್ ರೈಟ್ಸ್ ಇಶ್ಯೂವನ್ನು ಶೇರುದಾರರಿಂದ ಚಂದಾದಾರಿಕೆಗಾಗಿ ಬುಧವಾರ ತೆರೆಯಲಾಯಿತು.

ಅರ್ಹ ಶೇರುದಾರರು ರೈಟ್ಸ್ ಎಂಟೈಟಲ್‌ಮೆಂಟ್‌ಗಳನ್ನು (ಆರ್‌ಇ) ಡಿಮ್ಯಾಟ್‌ನಲ್ಲಿ ಪಡೆದ ಮೊದಲ ಇಶ್ಯೂ ಇದಾಗಿದ್ದು, ಶೇರು ವಿನಿಮಯ ಕೇಂದ್ರಗಳಲ್ಲಿ ಅವುಗಳ ವ್ಯವಹಾರವನ್ನು ನಡೆಸಬಹುದಾಗಿದೆ.

ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (ಎನ್‌ಎಸ್‌ಇ) ಬುಧವಾರ ದಿನದ ಅಂತ್ಯಕ್ಕೆ RIL-RE ಬೆಲೆ ರೂ. 212ಕ್ಕೆ ತಲುಪಿದ್ದು, ಹಿಂದಿನ ದಿನದ ಮುಕ್ತಾಯ ಬೆಲೆಯಾದ ರೂ. 151.90ಕ್ಕಿಂತ ಇದು ಶೇ. 39.5 ಹೆಚ್ಚಾಗಿದೆ.

ರೈಟ್ಸ್ ಎಂಟೈಟಲ್‌ಮೆಂಟ್ ಶೇರಿನ ಬೆಲೆ (ಮೇ 19ರ ಮುಕ್ತಾಯದ ಬೆಲೆ) ಆರ್‌ಐಎಲ್‌ನ ಪ್ರತಿ ಶೇರಿನ ಹಿಂದಿನ ಮುಕ್ತಾಯ ಬೆಲೆ 1,408.9 ರೂ. ಮತ್ತು ರೈಟ್ಸ್ ಇಶ್ಯೂ ಬೆಲೆ 1,257 ರೂ. ನಡುವಿನ ವ್ಯತ್ಯಾಸವಾಗಿದೆ.ಮಾರುಕಟ್ಟೆ ದತ್ತಾಂಶದ ಪ್ರಕಾರ, ಆರ್‌ಐಎಲ್‌ನ ಆರ್‌ಇ‌ಗಳಲ್ಲಿ ಆನ್‌ಲೈನ್ ವಹಿವಾಟು ಹೆಚ್ಚಿನ ಪ್ರಮಾಣ ತಲುಪಿದ್ದು, ಖರೀದಿದಾರರು ಮಾರಾಟಗಾರರನ್ನು ಮೀರಿಸಿದ್ದಾರೆ ಮತ್ತು ಬೆಲೆ ಮೇಲಕ್ಕೇರಿದೆ. RIL-RE ಶೇರು ಬೆಲೆ 158.05 ರೂ.ಗಳಲ್ಲಿ ಪ್ರಾರಂಭವಾದ ನಂತರ ಶೇಕಡಾ 40ರಷ್ಟು ಹೆಚ್ಚಳ ಕಂಡಿದೆ.

ಇದರ ವಹಿವಾಟಿನ ಪ್ರಮಾಣವು ಆರ್‌ಐಎಲ್‌‌ನದಕ್ಕಿಂತ ಹೆಚ್ಚಿತ್ತು. ಎನ್‌ಎಸ್‌ಇಯಲ್ಲಿ RIL-REನ ವಹಿವಾಟು ಪ್ರಮಾಣವು 2.91 ಕೋಟಿಗೂ ಅಧಿಕ ಶೇರುಗಳಷ್ಟಿದ್ದರೆ, ಆರ್‌ಐಎಲ್ ಪ್ರಮಾಣವು 2.55 ಕೋಟಿ ಶೇರುಗಳಷ್ಟಿತ್ತು.

ಮಾರುಕಟ್ಟೆ ಮುಕ್ತಾಯದ ವೇಳೆಗೆ, ಆರ್‌ಇ 212 ರೂ.ಗಳಲ್ಲಿ ಮತ್ತು ಆರ್‌ಐಎಲ್ ಶೇರು 1,437.40 ರೂ.ಗಳಲ್ಲಿ ವಹಿವಾಟು ನಡೆಸಿದ್ದವು - ಇದು 1,257 ರೂ.ಗಳಿಂದ 180.4 ರೂ.ಗಳ ವ್ಯತ್ಯಾಸದಲ್ಲಿದೆ.

ಪ್ರತಿ 15 ಶೇರುಗಳಿಗೆ ಒಂದರಂತೆ, ತಲಾ 1,257 ರೂ.ಗಳಂತೆ ಒಂದು ಶೇರನ್ನು ಸಂಸ್ಥೆಯು ನೀಡಲಿದೆ.

ಸದ್ಯದ ಶೇರುದಾರರಿಗೆ ಆರ್‌ಐಎಲ್ ತನ್ನ ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಹೊಸ ಶೇರುಗಳನ್ನು ನೀಡುತ್ತಿದೆ. ಅಲ್ಲದೆ, ಹೊಸ ಶೇರುಗಳಿಗಾಗಿ ಮೂರು ಕಂತುಗಳಲ್ಲಿ ಹಣ ಪಾವತಿಸಲು ಅರ್ಹ ಶೇರುದಾರರಿಗೆ 18 ತಿಂಗಳುಗಳ ಅವಧಿಯೂ ದೊರಕುತ್ತದೆ.

ಪ್ರಾಶಸ್ತ್ಯದ ನಿಯಮಗಳ ಅನುಸಾರ ಈ ಶೇರುಗಳನ್ನು ಪಡೆಯಲು ಮೇ 14 ಅರ್ಹತೆಯ ದಿನಾಂಕವಾಗಿತ್ತು. ಮುಕ್ತವಾಗಿ ವ್ಯಾಪಾರ ಮಾಡಲಾಗುವಂತೆ ರೈಟ್ಸ್ ಎಂಟೈಟಲ್‌ಮೆಂಟ್‌ಗಳನ್ನು ಅರ್ಹ ಶೇರುದಾರರ ಡಿಮ್ಯಾಟ್ ಖಾತೆಗಳಿಗೆ ಜಮಾ ಮಾಡಲಾಗುವ ಮೊದಲ ಇಶ್ಯೂ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಯುಎನ್ಐ ಎಎಚ್ 1426

More News
ಸೆನ್ಸೆಕ್ಸ್ 141 51 ಅಂಕ ಏರಿಕೆ

ಸೆನ್ಸೆಕ್ಸ್ 141 51 ಅಂಕ ಏರಿಕೆ

10 Aug 2020 | 6:22 PM

ಮುಂಬೈ ಆ 10(ಯುಎನ್ಐ) ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 141.51 ಅಂಕ ಏರಿಕೆ ಕಂಡು 38,182.08ಕ್ಕೆ ತಲುಪಿದೆ.

 Sharesee more..
ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

ಶೀಘ್ರದಲ್ಲೇ ರೈಲ್ವೆ ಖರೀದಿ ಪ್ರಕ್ರಿಯೆಗಳು ಜಿಇಎಂ ನೊಂದಿಗೆ ಸಂಯೋಜನೆ- ಪಿಯೂಷ್‍ ಗೋಯಲ್‌

09 Aug 2020 | 6:19 PM

ನವದೆಹಲಿ, ಆ 9 (ಯುಎನ್‌ಐ) ರೈಲ್ವೆ ಖರೀದಿ ಪ್ರಕ್ರಿಯೆಯನ್ನು ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (ಜಿಇಎಂ)ನೊಂದಿಗೆ ಸಂಯೋಜಿಲು ಎರಡೂ ಇಲಾಖೆಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ರೈಲ್ವೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಭಾನುವಾರ ತಿಳಿಸಿದ್ದಾರೆ.

 Sharesee more..