Sunday, Mar 29 2020 | Time 00:50 Hrs(IST)
National Share

ಸರಕು ಮತ್ತು ಸೇವಾ ತೆರಿಗೆ ಜಾಗೃತಿ ಕ್ರಮಕ್ಕೆ ಹಣಕಾಸು ಸಚಿವೆ ಸೂಚನೆ

ಸರಕು ಮತ್ತು ಸೇವಾ ತೆರಿಗೆ ಜಾಗೃತಿ ಕ್ರಮಕ್ಕೆ ಹಣಕಾಸು ಸಚಿವೆ ಸೂಚನೆ
ಸರಕು ಮತ್ತು ಸೇವಾ ತೆರಿಗೆ ಜಾಗೃತಿ ಕ್ರಮಕ್ಕೆ ಹಣಕಾಸು ಸಚಿವೆ ಸೂಚನೆ

ನವದೆಹಲಿ, ಫೆ 16 (ಯುಎನ್ಐ) ಸರಕು ಮತ್ತು ಸೇವಾ ತೆರಿಗೆ -ಜಿಎಸ್‌ಟಿ ಕುರಿತಂತೆ ಸ್ಥಳೀಯ ಮತ್ತು ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಚುರುಕುಗೊಳಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಲಾ ಜಿಎಸ್‌ಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಜಿಎಸ್‌ಟಿ ಕುರಿತಂತೆ ಅನೇಕ ವರ್ತಕ ಪ್ರತಿನಿಧಿಗಳ ಸಂದೇಹ, ಸ್ಪಷ್ಟನೆಗಳಿಗೆ ಪ್ರತಿಕ್ರಯಿಸಿರುವ ಸಚಿವರು ಜಿಎಸ್‌ಟಿ ಕುರಿತ ಸಂದೇಹ ನಿವಾರಣೆಗೆ ಜಿಲ್ಲಾಮಟ್ಟದ ಸಂವಹನ ಕಾರ್ಯಕ್ರಮಗಳನ್ನು ನಡೆಸುವಂತೆ, ಎಲ್ಲಾ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.ಜಿಎಸ್‌ಟಿ ಅನುಷ್ಠಾನವಾಗಿ ೩ ವರ್ಷಗಳಾಗುತ್ತಿದ್ದು, ಈ ಕುರಿತಂತೆ ಯಾವುದೇ ಸಂದೇಹ ಇರಬಾರದು ಎಂದು ಅಭಿಪ್ರಾಯಪಟ್ಟ ಅವರು, ಸಂದೇಹ ನಿವಾರಣೆಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಕಳೆದ ವರ್ಷದ ಏಪ್ರಿಲ್‌ನಿಂದ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದರು. ಜಿಎಸ್‌ಟಿ ಕುರಿತಂತೆ ಜಾಗೃತಿ ಮೂಡಿಸುವಲ್ಲಿ ರಾಜ್ಯಸರ್ಕಾರಗಳ ಜವಾಬ್ದಾರಿ ಕೂಡ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ

ಯುಎನ್ಐ ಜಿಎಸ್ಆರ್ 1930

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..