Saturday, Jan 25 2020 | Time 02:44 Hrs(IST)
National Share

ಸಶಸ್ತ್ರ ಪಡೆ ಧ್ವಜ ದಿನ : ಯೋಧರ ಸಾಹಸ ಕೊಂಡಾಡಿದ ಉಪರಾಷ್ಟ್ರಪತಿ, ಪ್ರಧಾನಿ

ನವದೆಹಲಿ, ಡಿಸೆಂಬರ್ 7 (ಯುಎನ್‌ಐ) ಸಶಸ್ತ್ರ ಪಡೆಗಳ ಯೋಧರು ಮತ್ತು ಅವರ ಕುಟುಂಬ ಸದಸ್ಯರ ತ್ಯಾಗ, ಬಲಿದಾನವನ್ನು ಉಪಾರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದ್ದಾರೆ.
"ಸಶಸ್ತ್ರ ಪಡೆಗಳ ಧ್ವಜ ದಿನದಂದು, ದೇಶವನ್ನು ಕಾಪಾಡುವಲ್ಲಿ ನಮ್ಮ ಸೈನಿಕರ ಶೌರ್ಯ ಮತ್ತು ಧೈರ್ಯವನ್ನು ಅಭಿನಂದಿಸಿ, ಸಶಸ್ತ್ರ ಪಡೆ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಜನತೆ ಸಹಕರಿಸಬೇಕೆಂದು ಜನತೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಮೈಕ್ರೋ-ಬ್ಲಾಗಿಂಗ್ ನಲ್ಲಿ ಪ್ರಧಾನಿ ಮೋದಿ ಅವರು, "ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಿಬ್ಬಂದಿ ಅವರ ಕುಟುಂಬಗಳ ಸದಸ್ಯರು ತೋರಿದ ಅದಮ್ಯ ಧೈರ್ಯ, ಸಾಹಸಕ್ಕೆ ವಂದಿಸುವುದಾಗಿ, ಪಡೆಗಳ ಕಲ್ಯಾಣಕ್ಕೆ ಜನರು ಸಹಕರಿಸಬೇಕೆಂದು ಆಗ್ರಹಿಸಿದರು. .
ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಸಶಸ್ತ್ರ ಪಡೆ ಸಿಬ್ಬಂದಿಗೆ ಶುಭ ಕೋರಿದ್ದಾರೆ.
ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಗೌರವಿಸುವ ದಿನ ಸಶಸ್ತ್ರ ಪಡೆಗಳ ಧ್ವಜ ದಿನ. ನಮ್ಮದೇಶ ರಕ್ಷಣೆಯಲ್ಲಿ ಅವರು ತೋರಿದ ಬದ್ಧತೆಗೆ ವಂದಿಸುವುದಾಗಿ, ಸಮವಸ್ತ್ರದಲ್ಲಿರುವ ಪುರುಷರು ಮತ್ತು ಮಹಿಳಾ ಕುಟುಂಬಗಳ ಕಲ್ಯಾಣಕ್ಕಾಗಿ ಕೊಡುಗೆ ನೀಡುವುದಾಗಿ ಪ್ರತಿಜ್ಞೆ ಮಾಡೋಣ, ' ಎಂದು ಅವರು ಹೇಳಿದ್ದಾರೆ.
ಯುಎನ್ ಐ ಕೆಎಸ್ಆರ್ 1405
More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..