Friday, Feb 28 2020 | Time 09:22 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಆರ್‌ಪಿಎಫ್‌ನ ವಿಐಪಿ ಭದ್ರತಾ ವಿಭಾಗದ ಚಿಹ್ನೆ ಅನಾವರಣ

ನವದೆಹಲಿ, ಡಿ.29 (ಯುಎನ್‌ಐ) ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತನ್ನ ವಿಐಪಿ ಭದ್ರತಾ ವಿಭಾಗಕ್ಕೆ ಚಿಹ್ನೆಯನ್ನು ಬಿಡುಗಡೆ ಮಾಡಿದೆ.
ಚಿಹ್ನೆಯು ಗರುಡವನ್ನು ಹೊಂದಿದ್ದು, ಅದರಲ್ಲಿ ಕತ್ತಿ ಮತ್ತು ಗುರಾಣಿ ಇದೆ. ಅದೇ ರೀತಿ ವಿಐಪಿ ಭದ್ರತೆಯ ಧ್ಯೇಯವಾಕ್ಯ “ಯಾವಾಗಲೂ ಜಾಗೃತಿ ಎಚ್ಚರಿಕೆ” ಎಂಬುದನ್ನು ಬರೆಯಲಾಗಿದೆ.
ವಿಐಪಿ ಭದ್ರತೆ ಕರ್ತವ್ಯಗಳು ಸಿಆರ್‌ಪಿಎಫ್‌ನಲ್ಲಿ 2014 ರಿಂದ ವಿಶೇಷ ಜವಾಬ್ದಾರಿಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದವು. ಈಗ ಇದು 15 + ಝಡ್ +, 21 ಝಡ್, ಮತ್ತು 23 ಇತರ ವಿಭಾಗಗಳನ್ನು ಒಳಗೊಂಡಂತೆ 59 ಕೇಂದ್ರ ರಕ್ಷಕರ ಜವಾಬ್ದಾರಿಯನ್ನು ಹೊಂದಿದೆ.
ಗರುಡ ಹಿಂದೂ ಮತ್ತು ಬೌದ್ಧ ಪುರಾಣಗಳಲ್ಲಿ ಕಂಡುಬರುವ ಪೌರಾಣಿಕ ಪಕ್ಷಿ. ಹದ್ದು ಮತ್ತು ಮಾನವನ ವೈಶಿಷ್ಟ್ಯಗಳ ಮಿಶ್ರಣವಾದ ಗರುಡ ವಿಷ್ಣುವಿನ ‘ವಾಹನ’ ಎನ್ನಲಾಗುತ್ತದೆ. ಗರುಡನು ವ್ಯಕ್ತಿಯನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ ಎಂದು ನಂಬಲಾಗಿದೆ.
ವಿಐಪಿ ಭದ್ರತಾ ಕರ್ತವ್ಯಗಳ ಪ್ರಮುಖ ಗುಣವಾಗಿರುವ 360 ಡಿಗ್ರಿಯಲ್ಲೂ ಜಾಗರೂಕತೆ ವಹಿಸುವ ಈಗಲ್ ಪಾತ್ರದಲ್ಲಿ ಗರುಡ ಅನನ್ಯವಾಗಿದೆ. ಶೀಲ್ಡ್ ಮತ್ತು ಖಡ್ಗ, ಯುದ್ಧ ಮತ್ತು ಆಕ್ರಮಣಶೀಲತೆಯನ್ನು ಪ್ರತಿನಿಧಿಸುತ್ತದೆ.
ಯುಎನ್ಐ ಎಎಚ್ 2051