Friday, Feb 28 2020 | Time 09:33 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಎಎ ಆಂದೋಲನ: ಖ್ಯಾತನಾಮರು ಮತ್ತು ಕ್ರೀಡೆ, ಸಂಸ್ಕøತಿ ವಲಯದ ಹೆಸರಾಂತರನ್ನು ತಲುಪಲು ಬಿಜೆಪಿ ಕಾರ್ಯಕ್ರಮ

ನವದೆಹಲಿ, ಜ 4(ಯುಎನ್‍ಐ)- ಹೊಸದಾಗಿ ಜಾರಿಗೆ ತಂದಿರುವ ಪೌರತ್ವ ಕಾನೂನಿನ ನೈಜ ಅಂಶಗಳು ಮತ್ತು ಅದರ ಉದ್ದೇಶವನ್ನು ಜನರಿಗೆ ತಲುಪಿಸುವ ಬೃಹತ್ ಜಾಗೃತಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿ, ಖ್ಯಾತನಾಮರು, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕøತಿ ವಲಯದ ಹೆಸರಾಂತರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ವಹಿಸಲಿದ್ದು, ಇವರಿಗೆ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಪಕ್ಷದ ಇತರ ನಾಯಕರು ಜೊತೆಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಕ್ರೀಡೆ ಮತ್ತು ಸಂಸ್ಕøತಿ ವಲಯದವರೊಂದಿಗೆ ವೈಯಕ್ತಿಕವಾಗಿ ಸಂಪರ್ಕಿಸಿ, ಸಿಎಎ ನ ನಿಜವಾದ ಉದ್ದೇಶವನ್ನು ತಿಳಿಸಲಾಗುವುದು. ಈ ಕಾನೂನು ಭಾರತದ ಯಾವುದೇ ಪ್ರಜೆಗಳ ವಿರುದ್ಧವಾಗಿಲ್ಲ ಎಂಬುದನ್ನು ಮನದಟ್ಟು ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಗೃಹಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮನೆಮನೆಗೂ ಭೇಟಿ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಗಜಿಯಾಬಾದ್‍ನಲ್ಲಿ ನಡೆಯುವ ಸಿಎಎ ಬೆಂಬಲದ ಬೃಹತ್ ಮೆರವಣಿಗೆಯ ನೇತೃತ್ವ ವಹಿಸಲಿದ್ದಾರೆ.
ರಕ್ಷಣಾ ಸಚಿವ ಮತ್ತು ಲಖನೌ ಸಂಸದ ರಾಜನಾಥ್ ಸಿಂಗ್ ಅವರು ಲಖನೌನಲ್ಲಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗ್ಬುರದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸದಾನಂದಗೌಡ, ದೇಶದ ಇತರ ನಗರಗಳು ಹಾಗೂ ಪಟ್ಟಣಗಳಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಸ್ಮøತಿ ಇರಾನಿ, ಪಿಯೂಷ್‍ಗೋಯಲ್, ರಮೇಶ್ ಪೊಖ್ರಿಯಾಲ್, ಧರ್ಮೇಂದ್ರ ಪ್ರದಾನ್, ಅನುರಾಗ್ ಠಾಕೂರ್ ಮತ್ತು ಬಾಬುಲಾಲ್ ಸುಪ್ರಿಯೋ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೋಧ್‍ಪುರ್ ನಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ‘ಸಿಎಎ ಕುರಿತು ಒಂದಿಂಚೂ ಹಿಂದೆ ಸರಿಯುವುದಿಲ್ಲ.’ ಎಂದು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್‍ಎಸ್ 1529