Wednesday, Feb 26 2020 | Time 10:16 Hrs(IST)
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸಿಎಎ, ಎನ್‌ಆರ್‌ಸಿ ವಿರುದ್ಧ 100 ಸಂಘಟನೆಗಳು "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ವೇದಿಕೆಯಡಿ ಹೋರಾಡಲು ನಿರ್ಧಾರ

ನವದೆಹಲಿ, ಡಿ.31 (ಯುಎನ್ಐ) ದೇಶಾದ್ಯಂತ ಸುಮಾರು 100 ಸಂಘಟನೆಗಳು ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ಬ್ಯಾನರ್‌ನಲ್ಲಿ ಹೋರಾಡಲು ನಿರ್ಧರಿಸಿವೆ.
ಸಿಎಎ, ಎನ್‌ಪಿಆರ್ ಮತ್ತು ರಾಷ್ಟ್ರವ್ಯಾಪಿ ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿರುವ ಎಲ್ಲ ಜನರಿಗೆ ನಾವು "ವಿ ದಿ ಪೀಪಲ್ ಆಫ್ ಇಂಡಿಯಾ" ಎಂಬ ಒಂದೇ ಬ್ಯಾನರ್‌ನಡಿಯಲ್ಲಿ ಬರುವಂತೆ ಮನವಿ ಮಾಡುತ್ತಿದ್ದೇವೆ. ಇದು ನಮ್ಮ ಸಂವಿಧಾನದ ಮೊದಲ ನುಡಿಗಟ್ಟು ಮತ್ತು ಅದಕ್ಕಿಂತ ದೊಡ್ಡದು ಏನೂ ಇರಲು ಸಾಧ್ಯವಿಲ್ಲ ಎಂದು ಸ್ವರಾಜ್ ಅಭಿಯಾನ್ ಪಕ್ಷದ ಸಂಸ್ಥಾಪಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಪ್ರಮುಖ ವ್ಯಕ್ತಿಗಳ ಜನ್ಮ ದಿನ ಅಥವಾ ಪುಣ್ಯತಿಥಿಯನ್ನು ಗುರುತಿಸುವ ಮಹತ್ವದ ದಿನಗಳಲ್ಲಿ ಈ ಗುಂಪುಗಳು ಜನವರಿಯಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲಿವೆ. ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆಯಾದ ಜನವರಿ 3 ರಿಂದ ಸರಣಿ ಪ್ರತಿಭಟನೆಗಳು ಪ್ರಾರಂಭವಾಗಲಿವೆ.
ಜನವರಿ 8 ರಂದು ಈ ಗುಂಪುಗಳು ಪ್ರತಿಭಟನೆ ನಡೆಸಲಿದ್ದು, ರೈತರ ಗುಂಪುಗಳು ಮತ್ತು ಎಡಪಂಥೀಯ ಕಾರ್ಮಿಕ ಸಂಘಗಳು ಸಹ ಭಾರತ್ ಬಂದ್‌ಗೆ ಕರೆ ನೀಡಿವೆ. ರಾಷ್ಟ್ರೀಯ ಯುವ ದಿನ ಮತ್ತು ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆಯ ದಿನವಾದ ಜನವರಿ 12 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
"ರೋಹಿತ್ ವೆಮುಲಾ ಕೊಲ್ಲಲ್ಪಟ್ಟ ದಿನವಾದ ಜನವರಿ 17ರನ್ನು ನಾವು ಸಾಮಾಜಿಕ ನ್ಯಾಯ ದಿನವನ್ನು ಆಚರಿಸುತ್ತೇವೆ. ಜನವರಿ 14 ಮತ್ತು 15 ರಂದು ಸಂಕ್ರಾಂತಿ ಹಬ್ಬವಾಗಿದ್ದು, ಅಂದು ನಾವು ಎಲ್ಲಾ ಸಂಸ್ಕೃತಿಗಳ ಎಲ್ಲ ಜನರನ್ನು ಒಟ್ಟಿಗೆ ಸೇರಿಸುತ್ತೇವೆ. ಜನವರಿ 26 ರಂದು ನಾವು ಮಧ್ಯರಾತ್ರಿಯಲ್ಲಿ ನಮ್ಮ ಧ್ವಜವನ್ನು ಹಾರಿಸುತ್ತೆವೆ ಮತ್ತು ಜನವರಿ 30 ರಂದು ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯಂದು ನಾವು ದೇಶಾದ್ಯಂತ ಮಾನವ ಸರಪಳಿಯನ್ನು ರಚಿಸುತ್ತೇವೆ ಎಂದು ಯಾದವ್ ವಿವರಿಸಿದರು.
ಖ್ಯಾತ ಸಾಮಾಜಿಕ ಕಾರ್ಯಕರ್ತ ಹರ್ಷಮಂದರ್, ಎನ್‌ಪಿರ್ ಕಾರಣದಿಂದಾಗಿ ರಾಷ್ಟ್ರೀಯ ಎನ್ಆರ್‌ಸಿ ಇನ್ನಷ್ಟು ಅಪಾಯಕಾರಿ ಎಂದು ಹೇಳಿದರು, ಇದು ಯವುದೇ ವ್ಯಕ್ತಿಯನ್ನು ಸರ್ಕಾರಿ ಅಧಿಕಾರಿಯೊಬ್ಬ "ಅನುಮಾನಾಸ್ಪದ" ವ್ಯಕ್ತಿ ಎಂದು ಪರಿಗಣಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.
ಇದು ತುಂಬಾ ದೊಡ್ಡದಾದ ಮತ್ತು ಕಾರ್ಯಗತಗೊಳಿಸಲಾಗದ ಯೋಜನೆಯಾಗಿದೆ. ಸಿಎಎ ಮತ್ತು ಎನ್‌ಪಿಆರ್ ಮತ್ತು ಎನ್‌ಆರ್‌ಸಿಯ ಅಂತಿಮ ಉದ್ದೇಶವೆಂದರೆ ನಮ್ಮ ಮುಸ್ಲಿಂ ಸಹೋದರ- ಸಹೋದರಿಯರನ್ನು ಅನಿಶ್ಚಿತತೆಯ ಸುಳಿಗೆ ಸಿಲುಕಿಸುವುದೇ ಆಗಿದೆ. ನಿಮ್ಮ ಜೀವನ ಪೂರ್ತಿ ದಾಖಲೆಗಳನ್ನು ಹುಡುವುದರಲ್ಲೇ ಕಳೆದುಹೋಗುತ್ತದೆ, ಇದರಲ್ಲೇ ನೀವು ನಿಮ್ಮ ಜೀವನವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹರ್ಷಮಂದರ್ ಎಚ್ಚರಿಸಿದರು.
ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತೆ ಟೀಸ್ತಾ ಸೆಟಲ್ವಾಡ್ ಮಾತನಾಡಿ, ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಸರ್ಕಾರದ ಯೋಜನೆಯನ್ನು ದೇಶ ತಿರಸ್ಕರಿಸಿದೆ. “ಇದು ನಿಜವಾಗಿಯೂ ಐತಿಹಾಸಿಕ ಕ್ಷಣ. ತುರ್ತು ಪರಿಸ್ಥಿತಿಯ ನಂತರ ಇಷ್ಟೊಂದು ಪ್ರಮಾಣದಲ್ಲಿ ನಾನು ನಾಗರಿಕರ ಭಾಗವಹಿಸುವಿಕೆಯನ್ನು ನೋಡಿಲ್ಲ ಎಂದು ಅವರು ಹೇಳಿದರು.
ಎನ್‌ಆರ್‌ಸಿ ಅಡಿಯಲ್ಲಿ ಮಾತ್ರ ಎನ್‌ಆರ್‌ಪಿ ಮಾಡಲು ಸಾಧ್ಯ ಎಂದು ಹಿರಿಯ ಮಾನವ ಹಕ್ಕುಗಳ ವಕೀಲ ಮಿಹಿರ್ ದೇಸಾಯಿ ಹೇಳಿದರು.
"ಇಲ್ಲದಿದ್ದರೆ ನೀವು ಜನಗಣತಿ ಕಾಯ್ದೆ ಅಡಿಯಲ್ಲಿ ಜನಗಣತಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ಅವರು ಎನ್‌ಪಿಆರ್ ಮತ್ತು ಎನ್‌ಆರ್‌ಸಿ ವಿರುದ್ಧ ಕೆಲವು ರೀತಿಯ ಔಪಚಾರಿಕ ಮತ್ತು ಕಾನೂನು ನಿರ್ಣಯವನ್ನು ತರಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು. ಪ್ರಕ್ರಿಯೆ ಪ್ರಾರಂಭವಾದಾಗ ಅವರು ಎನ್‌ಪಿಆರ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಬೇಕು ಎಂದು ಹೇಳಿದರು.
"ದೇಶದಲ್ಲಿ ದಾಖಲೆರಹಿತರು ಹೆಚ್ಚು ಪರಿಣಾಮ ಎದುರಿಸಬೇಕಾಗುತ್ತದೆ. ಇದರಿಂದಾಗಿ ಅವರು ಅನುಭವಿಸಲಿರುವ ಸಂಕಟದ ತೀವ್ರತೆ ಹೇಳತೀರದ್ದಾಗಿದೆ ಎಂದು ಖ್ಯಾತ ಭಾಷಾಶಾಸ್ತ್ರಜ್ಞ ಮತ್ತು ಕಾರ್ಯಕರ್ತ ಗಣೇಶ್ ದೇವಿ ಹೇಳಿದ್ದಾರೆ.
ಯುಎನ್ಐ ಎಎಚ್ 1102