Sunday, Mar 29 2020 | Time 00:37 Hrs(IST)
National Share

ಸಿಎಎ ಕುರಿತು ಒಂದಿಂಚೂ ಸರ್ಕಾರ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ

ಸಿಎಎ ಕುರಿತು ಒಂದಿಂಚೂ ಸರ್ಕಾರ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ
ಸಿಎಎ ಕುರಿತು ಒಂದಿಂಚೂ ಸರ್ಕಾರ ಹಿಂದೆ ಸರಿಯುವುದಿಲ್ಲ: ಅಮಿತ್ ಶಾ

ನವದೆಹಲಿ, ಜ 3(ಯುಎನ್‍ಐ)- ಹೊಸ ಪೌರತ್ವ ಕಾನೂನಿಗೆ ಬೆಂಬಲ ದಾಖಲಿಸಲು ಸಾರ್ವಜನಿಕರು ಮಿಸ್ಡ್ ಕಾಲ್ಡ್ ನೀಡಲು ಅನುಕೂಲವಾಗುವಂತೆ ಬಿಜೆಪಿ ಟೋಲ್ ಫ್ರೀ ಸಂಖ್ಯೆಯೊಂದಿಗೆ ಆಂದೋಲನ ಆರಂಭಿಸಿದೆ.

ರಾಜಸ್ಥಾನದ ಜೋಧ್‍ಪುರ್‍ನಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರಮೋದಿ ನೇತೃತ್ವದ ಸರ್ಕಾರ ಹೊಸ ಪೌರತ್ವ ಕಾನೂನಿನಿಂದ ಸರ್ಕಾರ ಒಂದು ಇಂಚೂ ಹಿಂದೆ ಸರಿಯುವುದಿಲ್ಲ. ಸರ್ಕಾರ ಹೊಸ ಪೌರತ್ವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹೊಸ ಪೌರತ್ವ ಕಾನೂನು ರೂಪಿಸಲು ದಿಟ್ಟಕ್ರಮ ತೆಗೆದುಕೊಂಡ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಬೆಂಬಲ ಸೂಚಿಸಲು 8866288662ಕ್ಕೆ ಮಿಸ್ ಕಾಲ್ ನೀಡುವಂತೆ ಅಮಿತ್ ಶಾ ಮನವಿ ಮಾಡಿದರು.

ಅನೇಕ ಕಾಂಗ್ರೆಸ್ ನಾಯಕರು ಕಾಯ್ದೆಯನ್ನು ಬೆಂಬಲಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಈ ಮುಂಚೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಕಾಯ್ದೆಯನ್ನು ಜಾರಿಗೆ ತರಬೇಕಾದಾಗ ವೋಟ್ ಬ್ಯಾಂಕ್‍ಗೆ ಹೆದರಿ ಹಿಂದೇಟು ಹಾಕುತ್ತಾರೆ. ಅನೇಕ ವರ್ಷಗಳ ನಂತರ ಸಿಎಎ ಕಾನೂನು ಜಾರಿಗೆ ಬಂದಿದೆ. ಇದು ಮಹಾತ್ಮಗಾಂಧಿಯವರು ಇಚ್ಛಿಸಿರುವುದನ್ನೇ ಪ್ರತಿಬಿಂಬಿಸಿದೆ. ಹಾಗೆಂದು ಗಾಂಧೀಜಿಯವರು ಕೋಮುವಾದಿಯೇ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಹಿಂಸೆಗೊಳಗಾಗಿ ಭಾರತಕ್ಕೆ ಬಂದಿರುವ ಮುಸ್ಲೀಮರಿಗೆ ರಕ್ಷಣೆ ನೀಡಲು ಜವಾಹರ್ ಲಾಲ್ ನೆಹರೂ, ವಲ್ಲಭಬಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಾಮ್ ಆಜಾದ್ ಮತ್ತು ಡಾ.ರಾಜೇಂದ್ರ ಪ್ರಸಾದ್ ಆಶ್ವಾಸನೆ ನೀಡಿದ್ದರು ಎಂದು ಅಮಿತ್ ಶಾ ಹೇಳಿದರು.

ಇದಕ್ಕೂ ಮುನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಅವರು ಸಿಎಎಗೆ ಬೆಂಬಲ ಸೂಚಿಸಲು ಸಾರ್ವಜನಿಕರಿಗೆ ಉಚಿತ ಟೋಲ್ ಫ್ರೀ ಸಂಖ್ಯೆ 8866288662ಗೆ ಚಾಲನೆ ನೀಡಿದರು.

ಯುಎನ್‍ಐ ಎಸ್‍ಎಲ್‍ಎಸ್ 1719

More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..