Friday, Feb 28 2020 | Time 09:38 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಎಎ ನಿಂದ ಸರಿಯುವ ಪ್ರಶ್ನೆಯೇ ಇಲ್ಲ : ಅಮಿತ್ ಷಾ ತಿರುಗೇಟು

ನವದೆಹಲಿ, ಜನವರಿ 3 (ಯುಎನ್‌ಐ) ರಾಜಕೀಯ ಪ್ರತಿಸ್ಪರ್ಧಿಗಳು ಎಷ್ಟೇ ಒಗ್ಗೂಡಿದರೂ ಭಾರತೀಯ ಜನತಾ ಪಕ್ಷ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಒಂದು ಇಂಚು ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಿಜೆಪಿ ಶುಕ್ರವಾರ ವಾಗ್ದಾಳಿ ಮುಂದುವರೆಸಿದ ಅವರು, ಈಗ ಹೊಸ ಕಾನೂನು ವಿರೋಧಿಸುತ್ತಿರುವ ಹಳೆಯ ಪಕ್ಷವು 2018 ರಲ್ಲಿ ರಾಜಸ್ಥಾನಕ್ಕೆ ತನ್ನ ಸಮೀಕ್ಷಾ ಪ್ರಣಾಳಿಕೆಯಲ್ಲಿ ಹೇಳಿದೆ ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಜನರ ಸರ್ವಾಂಗೀಣ ಅಭಿವೃದ್ಧಿಗೆ ಭರವಸೆ ನೀಡಿದ್ದು ಮರೆತು ಹೋಯಿತೇ ಎಂದು ಅವರು ತಿರುಗೇಟು ನೀಡಿದರು.
ರಾಜಸ್ಥಾನದ ಜೋಧ್ ಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಸ್ಪರ್ಧಿಗಳು ಎಷ್ಟೇ ಒಗ್ಗೂಡಿಸಿದರೂ ಬಿಜೆಪಿ ಈ ವಿಷಯದಲ್ಲೀ ಒಂದು ಇಂಚು ಕದಲುವ ಪ್ರಶ್ನೆಯೆ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವ ಭರವಸೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ಜಾರಿಗೆ ತಂದಿದೆ ಎಂದು ಶಾ ಹೇಳಿದರು. ಸಿಎಎಯನ್ನು ವಿರೋಧಿಸುವುದನ್ನು ನಿಲ್ಲಿಸಿ ಉತ್ತಮ ಆಡಳಿತದ ಕಡೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸೆಂಬರ್‌ನಲ್ಲಿ 100 ಮಕ್ಕಳು ಸಾವನ್ನಪ್ಪಿದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಬಗ್ಗೆ ಬಿಜೆಪಿ ಮುಖ್ಯಸ್ಥ ಗೆಹ್ಲೋಟ್ ಕಾಳಜಿ ತೋರಲಿ ಎಂದು ಷಾ ಸವಾಲು ಹಾಕಿದರು.
ಇತ್ತ ರಾಜಧಾನಿಯಲ್ಲಿ, ಬಿಜೆಪಿ ವಕ್ತಾರ ಜಿ ವಿ ಎಲ್ ನರಸಿಂಹ ರಾವ್ ಅವರು 2018 ರ ಕಾಂಗ್ರೆಸ್ ಪ್ರಣಾಳಿಕೆಯ ವಿವರ ಬಹಿರಂಗ ಪಡಿಸಿ "ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಜನರ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಭರವಸೆ ನೀಡಿತ್ತು" ಎಂದು ಹೇಳಿದರು.

ಇದರರ್ಥ ನಿರಾಶ್ರಿತರು, ಮತ್ತು ಅವರಿಗೆ ಪೌರತ್ವ ಹಕ್ಕುಗಳು ಮತ್ತು ಪುನರ್ವಸತಿ ನೀಡುವುದಾಗಿ ಕಾಂಗ್ರೆಸ್ ಹಿಂದೆಯೇ ಭರವಸೆ ನೀಡಿತ್ತು ಈಗ ರಾಜಕೀಯ ವೋಟ್ ಬ್ಯಾಂಕ್ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದೆ ಎಂದು ಅವರು ದೂರಿದರು.
ಇದು ಕಾಂಗ್ರೆಸ್ ನಿಜವಾದ ಮುಖ,ತೋರಿಸುತ್ತಿದೆ ಅದು ಅಧಿಕಾರದಲ್ಲಿದ್ದಾಗ ಏನನ್ನಾದರೂ ಹೇಳುತ್ತದೆ,ತನಗೆ ಸರಿಹೊಂದುವುದಿಲ್ಲ ಎಂದಾಗ ಅದು ವಿಭಿನ್ನ ಮುಖ ತೋರಿಸುತ್ತದೆ ಎಂದು ರಾವ್ ಸುದ್ದಿಗಾರರಿಗೆ ತಿಳಿಸಿದರು. ಹಿಂದಿನ ಅಧಿಕಾರಾವಧಿಯಲ್ಲಿ ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಹಿಂದೂಗಳಿಗೆ ಪೌರತ್ವ ಕೋರಿ ಅಶೋಕ್ ಗೆಹ್ಲೋಟ್ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು ಎಂದು ಅವರು ಹೇಳಿದರು.
ಡಿಸೆಂಬರ್‌ನಲ್ಲಿ 100 ಮಕ್ಕಳು ಸಾವನ್ನಪ್ಪಿದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಬಗ್ಗೆ ಬಿಜೆಪಿ ಮುಖ್ಯಸ್ಥ ಗೆಹ್ಲೋಟ್ ಕಾಳಜಿ ತೋರಲಿ ಎಂದು ಅವರು ಸವಾಲು ಹಾಕಿದರು.
ಪೌರತ್ವ ಕಾನೂನಿಗೆ ತಮ್ಮ ಬೆಂಬಲವನ್ನು ನೋಂದಾಯಿಸಲು ಮಿಸ್ಡ್ ಕರೆಗಳನ್ನು ನೀಡಲು ಜನರಿಗೆ ಅನುಕೂಲವಾಗುವಂತೆ ಟೋಲ್-ಫ್ರೀ ಸಂಖ್ಯೆಯೊಂದಿಗೆ ಬಿಜೆಪಿ ಶುಕ್ರವಾರ ಅಭಿಯಾನವನ್ನು ಪಕ್ಷ ಪ್ರಾರಂಭಿಸಿದೆ.
"ಈ ಅಭಿಯಾನವು ಸಿಎಎ ಬಗೆಗಿನ ಅನುಮಾನ ದೂರಮಾಡುವ ಗುರಿಯನ್ನು ಹೊಂದಿದೆ. ಜನರು ಮಿಸ್ಡ್ ಕಾಲ್ ಅಟಾಲ್ ಫ್ರೀ ಸಂಖ್ಯೆ 8866288662 ಅನ್ನು ಕೊಡಬಹುದು ಹೊಸ ಕಾನೂನಿಗೆ ತಮ್ಮ ಬೆಂಬಲವನ್ನು ನೀಡಬಹುದು ಎಂದು ಬಿಜೆಪಿ ನಾಯಕ ಅನಿಲ್ ಜೈನ್ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಯುಎನ್ಐ ಕೆಎಸ್ಆರ್ 0915