Sunday, Mar 29 2020 | Time 00:33 Hrs(IST)
Special Share

ಸಿಎಎ ಪ್ರತಿಭಟನಕಾರರ ಮೇಲೆ ಪೊಲೀಸ್ ದೌರ್ಜನ್ಯ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕೋಲಾಹಲ; 2 ಬಾರಿ ಕಲಾಪ ಮುಂದೂಡಿಕೆ

ಲಕ್ನೋ, ಫೆಬ್ರವರಿ 14 (ಯುಎನ್ಐ) ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಮತ್ತು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿ, ಕೋಲಾಹಲ ಉಂಟು ಮಾಡಿದ್ದರಿಂದ ಉತ್ತರಪ್ರದೇಶದ ವಿಧಾನಸಭೆಯನ್ನು ಎರಡು ಬಾರಿ ಮುಂದೂಡಿದ ಪ್ರಸಂಗ ಶುಕ್ರವಾರ ನಡೆಯಿತು.
ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧದ ಪೊಲೀಸ್ ದೌರ್ಜನ್ಯದ ಕುರಿತು ಚರ್ಚಿಸಲು ಸಲ್ಲಿಸಿದ್ದ ನೋಟಿಸ್ ಅನ್ನು ಸ್ವೀಕರಿಸಲು ಸ್ಪೀಕರ್ ಹೃದ್ಯ ನಾರೈನ್ ದೀಕ್ಷಿತ್ ಅವರು ನಿರಾಕರಿಸಿದಾಗ, ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರನಡೆದವು. ಸದನದಲ್ಲಿ ತಮಗೆ ಮಾತನಾಡಲು ಅವಕಾಶವಿಲ್ಲದಿದ್ದರೆ ಸದನದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಹೊರನಡೆದರು. ಅವರನ್ನು ಹಿಂಬಾಲಿಸಿ ಇತರ ಸದಸ್ಯರು ಕೂಡ ಕಲಾಪ ಬಹಿಷ್ಕರಿಸಿದರು.
ಸಿಎಎ ಪ್ರತಿಭಟನಕಾರರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ ಬಿಎಸ್‌ಪಿ ನಾಯಕ ಲಾಲ್ಜಿ ವರ್ಮಾ ಅವರು ಯುಪಿ ಘಟನೆಗಳನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದರು.
ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪ್ರತಿಭಟನೆಯನ್ನು ಆರಂಭಿಸಿತು. ಕಾಂಗ್ರೆಸ್ ಸದಸ್ಯರು ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಮತ್ತು ಸಿಎಎ ವಿರೋಧಿ ಪ್ರತಿಭಟನಕಾರರ ಮೇಲಿನ ದೌರ್ಜನ್ಯದ ಬಗ್ಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸದನದಲ್ಲಿ ನಡೆಯುತ್ತಿರುವ ಘಟನೆ 'ದುರದೃಷ್ಟಕರ' ಎಂದು ಹೇಳಿದ ಸ್ಪೀಕರ್ ಸದನವನ್ನು ಮೊದಲು 20 ನಿಮಿಷಗಳ ಕಾಲ ಮುಂದೂಡಿದರು. ಅದಾದ ಬಳಿಕ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು.
ಮತ್ತೆ ಸದನ ಸಮಾವೇಶಗೊಂಡಾಗಲೂ ಅದೇ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ಸ್ಪೀಕರ್ ಸದನವನ್ನು ಮತ್ತೆ 20 ನಿಮಿಷಗಳ ಕಾಲ ಮುಂದೂಡಿದರು.
ವಿರೋಧ ಪಕ್ಷಗಳು ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿವೆ. ಈ ಸರ್ಕಾರದ್ ಅವಧಿಯಲ್ಲಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಖನ್ನಾ ಹೇಳಿದರು.
ಕಲಾಪ ಮುಂದೂಡಿಕೆ ಕಾರಣದಿಂದಾಗಿ ಪ್ರಶ್ನೋತ್ತರ ಅವಧಿ ಅಸ್ತವ್ಯಸ್ತಗೊಂಡಿತು.
ಯುಎನ್ಐ ಎಎಚ್ 1254
More News

ಮೋದಿ ನಾಡಿನಲ್ಲೂ ಕರೋನ ಸೋಂಕಿಗೆ ನಾಲ್ವರ ಬಲಿ

28 Mar 2020 | 9:49 PM

 Sharesee more..
ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

ಕೋವಿಡ್-19; 15 ಸಾವಿರ ಆಹಾರ ಪೊಟ್ಟಣ ವಿತರಿಸಿದ ಟಿಟಿಡಿ

28 Mar 2020 | 9:36 PM

ತಿರುಪತಿ, ಮಾ 28 (ಯುಎನ್ಐ) ಕೊರೋನಾ ವೈರಸ್ ಸೋಂಕನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ), ವಸತಿರಹಿತರ ನೆರವಿಗೆ 15 ಸಾವಿರ ಪುಳಿಯೋಗರೆ ಪೊಟ್ಟಣಗಳನ್ನು ವಿತರಿಸಿದೆ.

 Sharesee more..
ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ  ಡಿಜಿಪಿ ಪ್ರವೀಣ್ ಸೂದ್  ಮನವಿ

ಬಡವರಿಗೆ ಆಹಾರ ಒದಗಿಸಲು ನೆರವಾಗುವಂತೆ ಪರೋಪಕಾರಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಮನವಿ

28 Mar 2020 | 9:22 PM

ಬೆಂಗಳೂರು, ಮಾ ೨೮(ಯುಎನ್‌ಐ) ರಾಷ್ಟ್ರೀಯ ಲಾಕ್ ಡೌನ್ ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ ಆಹಾರ ಒದಗಿಸಲು ಬಯಸುವ ಪರೋಪಕಾರಿಗಳು ಆಹಾರವನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ತಲುಪಿಸಿದರೆ, ಅಗತ್ಯವಿರುವ ಜನರಿಗೆ ತಲುಪಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಶನಿವಾರ ಮನವಿ ಮಾಡಿಕೊಂಡಿದ್ದಾರೆ.

 Sharesee more..
ಕಲ್ಲಿದ್ದಲು ಸುಗಮ ಸರಬರಾಜಿಗೆ  ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

ಕಲ್ಲಿದ್ದಲು ಸುಗಮ ಸರಬರಾಜಿಗೆ ಸಕಲ ಕ್ರಮ; ಸಚಿವ ಪ್ರಹ್ಲಾದ್ ಜೋಷಿ

28 Mar 2020 | 7:27 PM

ನವದೆಹಲಿ, ಮಾ 28 (ಯುಎನ್‌ಐ) ದೇಶದಲ್ಲಿ ಕಲ್ಲಿದ್ದಲು ಸರಬರಾಜನ್ನು ಅತ್ಯಗತ್ಯ ಸೇವೆ ಎಂದು ಘೋಷಿಸಲಾಗಿದ್ದು, ಲಾಕ್‌ ಡೌನ್ ಅವಧಿಯಲ್ಲಿ ನಿರ್ಣಾಯಕ ಕಲ್ಲಿದ್ದಲು ಪೂರೈಕೆಯನ್ನು ಖಾತರಿ ಪಡಿಸಲು ಅಹರ್ನಿಶಿ ಶ್ರಮಿಸುವಂತೆ ಸಚಿವಾಲಯದ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ್ ಜೋಶಿ ಅವರು ಶನಿವಾರ ನಿರ್ದೇಶನ ನೀಡಿದ್ದಾರೆ.

 Sharesee more..