Wednesday, Feb 26 2020 | Time 09:43 Hrs(IST)
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸಿಎಎ, ಭಾರತದ ಸಂವಿಧಾನದ ಮೇಲಿನ ದಾಳಿ: ಕಾಂಗ್ರೆಸ್

ನವದೆಹಲಿ, ಜ. 19 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು 'ಪಂಥೀಯತೆ, ಧರ್ಮಾಂಧತೆ ಮತ್ತು ಮತಾಂಧತೆಯ' ಜೀವಂತ ಸಂಕೇತಗಳಾಗಿ ಮಾರ್ಪಟ್ಟಿದ್ದಾರೆ, ದೇಶದ ನೀತಿ ಮತ್ತು ಅದರ ಸಂವಿಧಾನದ ಮೇಲೆ ದಾಳಿ ಮಾಡಲು ಅವರು ದೇಶವನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಭಾನುವಾರ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.
ಸಂವಿಧಾನವು ಒಂದು 'ಜುಮ್ಲಾ' ಅಲ್ಲ. ಸಂವಿಧಾನವು ನಮ್ಮ ಅತಿದೊಡ್ಡ 'ರಾಜ ಧರ್ಮ' 'ನೀತಿ' ಮತ್ತು 'ಕರ್ಮ'ಗಳಾಗಿವೆ ಎಂಬುದನ್ನು
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜನರನ್ನು ವಿಭಜಿಸುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಭಾರತದ ಸಂವಿಧಾನದ ಮೇಲಿನ ಆಕ್ರಮಣವಾಗಿದೆ, ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರನ್ನು ದರಿದ್ರರನ್ನಾಗಿ ಮಾಡಲಿದೆ ಎಂದು ಸುರ್ಜೆವಾಲಾ ಹೇಳಿದರು.
ಭಾರತದ ಆರ್ಥಿಕತೆಯ ವೈಫಲ್ಯ, ನಿರುದ್ಯೋಗ ಮತ್ತು ಯುವಕರ ಆಘಾತಕಾರಿ ಆತ್ಮಹತ್ಯೆಗಳನ್ನು ಮರೆಮಾಚಲು ಮತ್ತು ಇದರಿಂದ ಉಂಟಾಗಿರುವ ಹಣದುಬ್ಬರ ಸೇರಿದಂತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅನಿಯಂತ್ರಿತ ಕೃಷಿ ಬಿಕ್ಕಟ್ಟು ಮುಂತಾದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ಮತ್ತು ಅಮಿತ್ ಶಾ ಸಿಎಎಯನ್ನು ಗುರಾಣಿಯಂತೆ ಬಳಸುತ್ತಿದ್ದಾರೆ ಎಂದು ಸುರ್ಜೇವಾಲಾ ಆರೋಪಿಸಿದರು.
ಬಿಜೆಪಿಯ ಷಡ್ಯಂತ್ರವನ್ನು ಬಹಿರಂಗಪಡಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
'' ಸುಳ್ಳು ಹೇಳುವುದು ಮತ್ತು ದಾರಿ ತಪ್ಪಿಸುವುದು ಪ್ರಧಾನಿ ಮೋದಿ ಮತ್ತು ಬಿಜೆಪಿಗೆ 'ರಾಜಧರ್ಮವಾಗಿದೆ. ಭಾರತದ ಜನರ ವಿರುದ್ಧ, ಆಡಳಿತಗಾರರ 'ಸುಳ್ಳು ಮತ್ತು ವಂಚನೆಯ' ಪಿತೂರಿಯನ್ನು ಬಹಿರಂಗಪಡಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
ಯುಎನ್ಐ ಎಎಚ್ 2026