Friday, Feb 28 2020 | Time 07:52 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಎಎ ಹ್ಯಾಷ್ ಟ್ಯಾಗ್; ಬಿಜೆಪಿ ನಾಯಕರಿಂದ ಸರಣಿ ಟ್ವೀಟ್

ನವದೆಹಲಿ, ಡಿ 30 (ಯುಎನ್ಐ) ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಬಿಜೆಪಿ ನಾಯಕರು ಸೋಮವಾರ ಇಂಡಿಯಾ ಸಪೋರ್ಟ್ಸ್ ಸಿಎಎ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಸರಣಿ ಟ್ವೀಟ್ ಗಳನ್ನುಮಾಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್, ಕಾಂಗ್ರೆಸ್ ಹಾಗೂ ಸಿಪಿಐ-ಎಂ ವಿರುದ್ಧ ಕಿಡಿಕಾರಿದ್ದಾರೆ.


“ ಸಮಾಜದ ಪ್ರತಿ ವರ್ಗದ ಜನರು ಪ್ರದಾನಿ ನರೇಂದ್ರ ಮೋದಿ ಅವರನ್ನು ದೇಶದ ನಾಗರೀಕತೆಯನ್ನು ಎತ್ತಿಹಿಡಿದು, ಧಾರ್ಮಿಕ ಹಿಂಸೆಗೆ ಗುರಿಯಾದವರಿಗೆ ಸ್ವರ್ಗವನ್ನು ಒದಗಿಸಿರುವುದಕ್ಕೆ ಅಭಿನಂದಿಸಿದ್ದಾರೆ. ಆದರೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಸತ್ಯವನ್ನು ಮರೆಮಾಚುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.


ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಈ ಅಭಿಯಾನದಿಂದ ಸಮಾಜದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವರ ನಿಜ ಮುಖ ಬಯಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.


ಹಿರಿಯ ನಾಯಕ ಮುಕುಲ್ ರಾಯ್, ‘ಈ ಅಭಿಯಾನದಿಂದ ಮಮತಾ ಬ್ಯಾನರ್ಜಿ ಅವರು ಆತಂಕಕ್ಕೊಳಗಾಗಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

ಯುಎನ್ಐ ಎಸ್ಎಚ್ 2108