Wednesday, Feb 26 2020 | Time 09:32 Hrs(IST)
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸಿಎಎ ಹೋರಾಟ ರಾಜ್ಯಸಭೆಯ ಹಕ್ಕುಚ್ಯುತಿ ಸಮಿತಿಗೆ ಪ್ರವೇಶ: ಪಿಣರಾಯ್ ವಿರುದ್ಧ ಹಕ್ಯುಚ್ಯುತಿಗೆ ಅರ್ಜಿ

ನವದೆಹಲಿ, ಜ.1 (ಯುಎನ್ಐ) ಹೊಸದಾಗಿ ಜಾರಿಗೆ ಬಂದ ಪೌರತ್ವ ಕಾನೂನಿನ ವಿಷಯದಲ್ಲಿ ರಾಜ್ಯಗಳು ಮತ್ತು ಕೇಂದ್ರದ ನಡುವಿನ ಅಧಿಕಾರಕ್ಕೆ ಸಂಬಂಧಿಸಿ ವಿವಾದ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿರುದ್ಧ ಬಿಜೆಪಿ ಸಂಸದರೊಬ್ಬರು ರಾಜ್ಯಸಭೆಗೆ ಹಕ್ಕುಚ್ಯುತಿಯ ದೂರು ಸಲ್ಲಿಸಿದ್ದಾರೆ.
"ಇದು ಹಕ್ಕುಚ್ಯುತಿ ಸಮಿತಿಯು ಕೈಗೆತ್ತಿಕೊಳ್ಳಬೇಕಾದ ಸೂಕ್ತ ಪ್ರಕರಣ" ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಬುಧವಾರ ಹೇಳಿದ್ದಾರೆ.
ಜೆಡಿಯುನ ಹರಿವಂಶ ಮತ್ತು ಸದನದ ಉಪಾಧ್ಯಕ್ಷರ ನೇತೃತ್ವದ ಹತ್ತು ಸದಸ್ಯರ ರಾಜ್ಯಸಭಾ ಹಕ್ಕುಚ್ಯುತಿ ಸಮಿತಿಯಲ್ಲಿ ನಾಲ್ಕು ಬಿಜೆಪಿ ಸದಸ್ಯರಾದ ರಾಕೇಶ್ ಸಿನ್ಹಾ, ನೀರಜ್ ಶೇಖರ್ ಮತ್ತು ಪ್ರಭಾತ್ ಜಾ ಅವರು ಇದ್ದಾರೆ.
"ರಾಜ್ಯಸಭೆಯಲ್ಲಿ ಹಕ್ಕುಚ್ಯುತಿ ಸಮಿತಿಯ ಸದಸ್ಯನಾಗಿ, ನಾನು ಸಂಸತ್ತಿನ ಹಕ್ಕುಚ್ಯುತಿಯನ್ನು ಉಲ್ಲಂಘಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿ ರಾಜ್ಯಸಭೆಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಜನವರಿ 3 ರಂದು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವಂತೆ ಕೋರಿದ್ದೇನೆ ಎಂದು ರಾವ್ ಮಂಗಳವಾರ ಟ್ವೀಟ್ ಮಾಡಿದ್ದರು.
ಶಶಿಕಲಾ ಪುಷ್ಪಾ ರಾಮಸ್ವಾಮಿ (ಎಐಎಡಿಎಂಕೆ), ಆನಂದ್ ಶರ್ಮಾ ಮತ್ತು ರಿಪುನ್ ಬೋರಾ (ಇಬ್ಬರೂ ಕಾಂಗ್ರೆಸ್), ಪಿ. ವಿಲ್ಸನ್ (ಡಿಎಂಕೆ), ಮತ್ತು ಬಿಜು ಜನತಾದಳದ ಸಾಸ್ಮಿತಾ ಪಾತ್ರ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಬಿಜೆಪಿ ಸದಸ್ಯರ ನಡೆಯನ್ನು ಎಡ ಪಕ್ಷಗಳಾದ ಸಿಪಿಐ (ಎಂ) ಮತ್ತು ಸಿಪಿಐ ಮತ್ತು ಕಾಂಗ್ರೆಸ್ ಸದಸ್ಯ ಕೆಟಿಎಸ್ ತುಳಸಿ ವಿರೋಧಿಸಿದ್ದಾರೆ.
"ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ ಮತ್ತು ರಾಜ್ಯಗಳ ಹಕ್ಕನ್ನು ರಕ್ಷಿಸುವುದು ಅವರ ಕರ್ತವ್ಯ" ಎಂದು ರಾವ್ ಅವರನ್ನು ಟೀಕಿಸಿ ತುಳಸಿ ಹೇಳಿಕೆ ನೀಡಿದ್ದಾರೆ.
ಕೇಂದ್ರ ಮತ್ತು ಸಂಸತ್ತು ಜಾರಿಗೆ ತಂದಿರುವ ಕೇಂದ್ರದ ಕಾನೂನು ಸೇರಿದಂತೆ ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅಧಿಕಾರ ಮತ್ತು ಜವಾಬ್ದಾರಿಗಳನ್ನು ರಾಜ್ಯ ಶಾಸಕಾಂಗಗಳು ಹೊಂದಿವೆ ಎಂದು ಸಿಪಿಐ-ಎಂ ನಾಯಕ ಪ್ರಕಾಶ್ ಕಾರಟ್‌ ಮತ್ತು ಸಿಪಿಐನ ಡಿ ರಾಜಾ ಹೇಳಿದ್ದಾರೆ.
"ಕೇರಳ ಮುಖ್ಯಮಂತ್ರಿಯವರ ದುಷ್ಕೃತ್ಯ ಮತ್ತು ಕೆಟ್ಟ ನಡೆಯನ್ನು ಮತ್ತು ಕ್ರಮವನ್ನು ಪರಿಶೀಲಿಸದೆ ಹೋದರೆ, ಅದು ಅಪಾಯಕಾರಿ ಪೂರ್ವನಿದರ್ಶನವಾಗಿ ಉಳಿಯಲಿದೆ. ಆಡಳಿತಾತ್ಮಕ ಅವ್ಯವಸ್ಥೆಗೆ ಕಾರಣವಾಗುತ್ತದೆ ಮತ್ತು ಸಂವಿಧಾನಕ್ಕೆ ಅಪಾಯಕಾರಿಯಾಗಲಿದೆ ಎಂದು ರಾಜ್ಯಸಭಾ ಅಧ್ಯಕ್ಷ ಮತ್ತು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಬರೆದ ಪತ್ರದಲ್ಲಿ, ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ.
ಕೇರಳ ವಿಧಾನಸಭೆ ಮಂಗಳವಾರ ಹೊಸದಾಗಿ ಜಾರಿಗೆ ತಂದ ಮತ್ತು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತ್ತು.
ವಾಸ್ತವವಾಗಿ, ಸಿಎಎ ವಿರುದ್ಧ ಇಂತಹ ನಿರ್ಣಯವನ್ನು ಅಂಗೀಕರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ. ವಿರೋಧ ಪಕ್ಷದ ಕಾಂಗ್ರೆಸ್, ಎಡಪಕ್ಷಗಳು ಮತ್ತು ಇತರ ಪ್ರಾದೇಶಿಕ ಸಂಘಟನೆಗಳು ಈ ಮಸೂದೆ ಮುಸ್ಲಿಮರ ಬಗ್ಗೆ ತಾರತಮ್ಯವೆಸಗುತ್ತದೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಹೇಳಿ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದವು.
ಕೇರಳ ವಿಧಾನಸಭೆಯಲ್ಲಿ ಆಡಳಿತಾರೂಢ ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ನಿರ್ಣಯವನ್ನು ಬೆಂಬಲಿಸಿದರೆ, ಬಿಜೆಪಿಯ ಏಕೈಕ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಒ. ರಾಜಗೋಪಾಲ್ ಅವರು ವಿರೋಧ ವ್ಯಕ್ತಪಡಿಸಿದ್ದರು.
ಸಿಎಎಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ವಿರೋಧಿಸಿದೆ. ಛತ್ತೀಸ್‌ಗಡ, ಮಧ್ಯಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದು, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನ ಮಿತ್ರರಾಷ್ಟ್ರಗಳೊಂದಿಗೆ ಅಧಿಕಾರವನ್ನು ಹಂಚಿಕೊಂಡಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಿಎಎ ವಿರುದ್ಧ ನಿಲುವು ಹೊಂದಿದ್ದು ಇದನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಈಗಾಗಲೇ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
ಯುಎನ್ಐ ಎಎಚ್ 1620