Wednesday, Feb 26 2020 | Time 09:05 Hrs(IST)
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸಿಎಎ ಹಿಂಸಾಚಾರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್‌ಗೆ ಜಾಮೀನು

ನವದೆಹಲಿ, ಜ.15 (ಯುಎನ್ಐ) ಕಳೆದ ಡಿಸೆಂಬರ್‌ನಲ್ಲಿ ಹಳೆಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 'ಭೀಮ್ ಸೇನೆ' ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲಾವು ಬುಧವಾರ ಜಾಮೀನು ನೀಡಿದ್ದಾರೆ.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳದಿಂದ ಪಲಾಯನಗೈದ ಮುಸ್ಲಿಮೇತರರಿಗೆ ಆಶ್ರಯ ನೀಡುವ ಹೊಸ ಕಾನೂನಿನ ವಿರುದ್ಧ ಡಿಸೆಂಬರ್ 20 ರಂದು ಆಜಾದ್ ಅವರು ಪೊಲೀಸರ ಅನುಮತಿಯಿಲ್ಲದೆ ಜಾಮಾ ಮಸೀದಿಯಿಂದ ಜಂತರ್ ಮಂತರ್ ಪ್ರದೇಶಕ್ಕೆ ಮೆರವಣಿಗೆ ನಡೆಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿತು.
ಪ್ರತಿಭಟನೆ ವೇಳೆ ಆಜಾದ್‌ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಆದೇಶದಂತೆ ಡಿಸೆಂಬರ್ 21 ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಆಜಾದ್ ಅವರು ಜಾಮಿಯಾ ಮಸೀದಿಯಿಂದ ದೆಹಲಿ ಗೇಟ್‌ಗೆ ಮೆರವಣಿಗೆ ನಡೆಸಲು ಮತ್ತು ಹಿಂಸಾಚಾರಕ್ಕೆ ಇಳಿಯಲು ಪ್ರತಿಭಟನಕಾರರನ್ನು ಪ್ರೇರೇಪಿಸಿದ್ದಾರೆ ಎಂದು ಪ್ರಥಮ ವರ್ತಮಾನ ವರದಿಯಲ್ಲಿ ಪ್ರಾಸಿಕ್ಯೂಷನ್ ಆರೋಪಿಸಿತ್ತು. ಆದರೆ ಈ ಸಂಬಂಧ ಆಜಾದ್ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಆಜಾದ್ ಪರ ವಕೀಲರು ವಾದಿಸಿದ್ದರು.
ಪ್ರತಿಭಟನೆಯ ಮೊದಲು, ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದಿರಲಿಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು.
ದರಿಯಾಗಂಜ್ ಹಿಂಸಾಚಾರದ ವಿಷಯದಲ್ಲಿ ಆಜಾದ್ ವಿರುದ್ಧದ ಎಫ್ಐಆರ್ ಉಲ್ಲೇಖಿಸಿ, ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕಾಗಿದೆ ಎಂದು ಆಜಾದ್ ಪರ ವಕೀಲರು ವಾದಿಸಿದರು.
ಪ್ರತಿಭಟನೆ ಮಾಡಿದರೆ ಏನು ತಪ್ಪು ? ಯಾವುದೇ ಧಾರ್ಮಿಕ ಸ್ಥಳದ ಮುಂದೆ ಪ್ರತಿಭಟನೆಗಳನ್ನು ನಿಷೇಧಿಸುವ ಯಾವುದಾದರು ಕಾನೂನು ಇದೆಯೇ ? ಎಂದು ನ್ಯಾಯಾಧೀಶರು ಪ್ರಶ್ನಿಸಿ, ಆಜಾದ್‌ ಅವರಿಗೆ ಜಾಮೀನು ಮಂಜೂರು ಮಾಡಿದರು.
ಯುಎನ್ಐ ಎಎಚ್ 1906