Wednesday, Aug 21 2019 | Time 23:52 Hrs(IST)
 • ಚಿದಂಬರಂ ಬಂಧನ: ಪ್ರಧಾನಿ ಮೋದಿ ಚುನಾವಣಾ ಭರವಸೆ ಈಡೇರಿಕೆ
 • ಐ ಎನ್ ಎಕ್ಸ್ ಮೀಡಿಯಾ ಪ್ರಕರಣ : ಮಾಜಿ ಸಚಿವ ಪಿ ಚಿದಂಬರಂ ಸಿಬಿಐ ವಶಕ್ಕೆ
 • ಶ್ರೀನಗರದಲ್ಲಿ ಶುಕ್ರವಾರ ಸಾರ್ವಜನಿಕರನ್ನು ಭೇಟಿ ಮಾಡಲಿರುವ ರಾಜ್ಯಪಾಲರ ಸಲಹೆಗಾರ
 • ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ
 • ಮುಂದಿನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ರಾಜೀವ್ ಗೌಬಾ ನೇಮಕ
 • ರಷ್ಯಾದ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ – ಅಜಿತ್ ದೋವಲ್ ಮಾತುಕತೆ
 • ನಾನು ಓಡಿಹೋಗಿಲ್ಲ, ನ್ಯಾಯದಿಂದ ರಕ್ಷಣೆ ಪಡೆಯಲು ಕೆಲಸ ಮಾಡುತ್ತಿದ್ದೇನೆ: ಚಿದಂಬರಂ
 • ಆರ್ ಟಿಐ ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ; ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ
 • ಎಂಡಿಎಸ್ ಶುಲ್ಕ ತಾರತಮ್ಯ; ನಾಲ್ಕು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
 • ಸರ್ಕಾರಿ ವಾಹನಗಳಿಗೆ ಮಹಿಳಾ ಚಾಲಕರ ನೇಮಕ; ಕೇರಳ ಸಂಪುಟ ಸಮ್ಮತಿ
 • ಐಎನ್ ಎಕ್ಸ್ ಮೀಡಿಯಾ ಪ್ರಕರಣ; ಚಿದಂಬರಂ ವಿರುದ್ಧ ಸಿಬಿಐ, ಇಡಿ ಲುಕ್ ಔಟ್ ನೋಟೀಸ್ ಜಾರಿ
 • ಕೆಲಸ ಸರಿಯಾಗಿ ನಿರ್ವಹಿಸಲಾಗದಿದ್ದರೆ, ಬೇರೆಡೆಗೆ ವರ್ಗ ಮಾಡಿಸಿಕೊಳ್ಳಿ ; ಇಂಜಿನಿಯರ್ ಗಳಿಗೆ ಮೇಯರ್ ತರಾಟೆ
 • ಯಾಂತ್ರೀಕೃತ ಮೀನುಗಾರಿಕೆ ಬೋಟ್‍ಗಳಿಗೆ ತೆರಿಗೆ ರಹಿತ ಡೀಸೆಲ್ ಹೆಚ್ಚಳ: ಮುಖ್ಯಮಂತ್ರಿ
 • ಅಯೋಧ್ಯೆ ಪ್ರಕರಣ: ರಾಮ ಜನ್ಮಭೂಮಿಯಲ್ಲಿ ಜನರ ನಂಬಿಕೆ ಸಾಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ
 • ಪಕ್ಷೇತರ ಶಾಸಕ ಅನಂತ್ ಸಿಂಗ್ ವಿರುದ್ಧ ಲುಕ್ಔಟ್ ನೋಟಿಸ್
Sports Share

ಸಿಒಎ ವಿರುದ್ಧ ಜಮ್ಮು ಮಾಜಿ ಕ್ರಿಕೆಟಿಗರ ಅಸಮಾಧಾನ

ಜಮ್ಮು, ಜು 22, (ಯುಎನ್ಐ)-ಆಟಗಾರರ ಹಿತ ದೃಷ್ಟಿಯಿಂದ ಲೋಧಾ ಸಮಿತಿಯ ಶಿಫಾರಸನ್ನು ಶೀಘ್ರ ಜಾರಿಗೆ ಒತ್ತಾಯಿಸಿರುವ ಜಮ್ಮು-ಕಾಶ್ಮೀರದ ಮಾಜಿ ರಣಜಿ ಆಟಗಾರರು, ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ)ಯ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ವಿರುದ್ಧ ಕಿಡಿಕಾರಿದ್ದಾರೆ.
ಸದ್ಯದ ಆಡಳಿತಾಧಿಕಾರಿಗಳ ಸಮಿತಿ ಲೋಧಾ ಸಮಿತಿಯ ಶಿಫಾರಸು ಜಾರಿಗೊಳಿಸದಿರುವುದರಿಂದ ಆಟಗಾರರಿಗೆ ತೊಂದರೆ ಆಗುತ್ತಿದೆ ಎಂದು ಆಟಗಾರರು ತಿಳಿಸಿದ್ದಾರೆ.
ಮಾಜಿ ಆಟಗಾರರು ಈ ಬಗ್ಗೆ ಬಿಸಿಸಿಐಗೆ ಪತ್ರ ಬರೆದಿದ್ದಾರೆ. 'ಲೋಧಾ ಸಮಿತಿ ಮಾಜಿ ಆಟಗಾರರು ಹಾಗೂ ಹಾಲಿ ಆಟಗಾರರನ್ನು ಬಲಪಡಿಸುತ್ತದೆ. ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ ತನ್ನ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ಅಲ್ಲದೆ, ಲೋಧಾ ಸಮಿತಿಯ ಶಿಫಾರಸಿನ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ
ಇನ್ನು ಬಿಸಿಸಿಐ ಸಿಓಯ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದು, ಸಮಿತಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಪಾರದರ್ಶಕತೆ ತರುವಲ್ಲಿ ವಿಫಲವಾಗಿದೆ. ಅಲ್ಲದೆ ಮಾಜಿ ಆಟಗಾರರ ಹಿತ ದೃಷ್ಟಿಯಿಂದ ಯಾವುದೇ ಉಪಯುಕ್ತ ಕ್ರಮ ಕೈಗೊಂಡಿಲ್ಲ.
"ಲೋಧಾ ಸಮಿತಿಯ ಪ್ರಕಾರ, ಕ್ರಿಕೆಟ್ ಸಲಹಾ ಸಮಿತಿಯಲ್ಲಿ (ಸಿಎಸಿ) ಮಾಜಿ ಆಟಗಾರರನ್ನು ಸೇರಿಸಲು ಶಿಫಾರಸು ಮಾಡಲಾಗಿದೆ, ಇದರಿಂದಾಗಿ ಜೆಕೆಸಿಎ ವೃತ್ತಿಪರ ಕ್ರಿಕೆಟಿಗರನ್ನು ಉತ್ತಮಗೊಳಿಸಲು ಬಳಸಿಕೊಳ್ಳಬಹುದು. ಆದರೆ ಸಿಒಎಗೆ ಅದನ್ನು ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ದೂರಿದ್ದಾರೆ.
ಬೇರೆ ದೇಶದ ಮಾಜಿ ಆಟಗಾರರನ್ನು ಕರೆದು ಇಲ್ಲಿ ಅವರಿಗೆ ಹಣ ನೀಡಲಾಗುತ್ತದೆ. ದೇಶಿಯ ಆಯ್ಕೆದಾರರು ಮತ್ತು ತರಬೇತುದಾರರಿಗೆ ಸಿಗಬೇಕಾದ ಸೌಲಭ್ಯ ಅಥವಾ ಮಂಡಳಿಯಿಂದ ಉತ್ತಮ ವೇತನ ಸಿಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಯುಎನ್ಐ ವಿಎನ್ಎಲ್ ಎಸ್ಎಚ್ 1619