Saturday, Aug 8 2020 | Time 05:53 Hrs(IST)
Sports Share

ಸಾಕ್ಷ್ಯಾಧಾರ ಕೊರತೆ; ಫಿಕ್ಸಿಂಗ್ ಆರೋಪ ತನಿಖೆ ಕೈಬಿಟ್ಟ ಪೊಲೀಸರು

ಕೊಲಂಬೊ, ಜುಲೈ 3 (ಯುಎನ್ಐ)
2011ರ ಏಕದಿನ ವಿಶ್ವ ಕಪ್ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಪಟ್ಟಂತೆ ಕೆಲವು ದಿನಗಳ ಹಿಂದೆ ತನಿಖೆ ಆರಂಭಿಸಿದ್ದ ಶ್ರೀಲಂಕಾ ಪೊಲೀಸರು ಇದೀಗ ಸಾಕ್ಷ್ಯಾಧಾರಗಳ ಕೊರತೆಯಿಂದ ತನಿಖೆಯನ್ನು ಕೈಬಿಡಲಾಗಿದೆ.
ಕುಮಾರ ಸಂಗಕ್ಕಾರ, ಮಹೇಲ ಜಯವರ್ದನೆ ಮುಂತಾದ ಹಿರಿಯ ಕ್ರಿಕೆಟಿಗರ ಹೇಳಿಕೆಗಳನ್ನು ದಾಖಲಿಸಿಕೊಂಡ ಬಳಿಕ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಭಾರತ ತಂಡ ಜಯಿಸಿದ ಆ ಫೈನಲ್ ಪಂದ್ಯವನ್ನು ಗುಂಪೊಂದು ಫಿಕ್ಸ್ ಮಾಡಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ ಗಮಾಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಪೊಲೀಸರ ವಿಶೇಷ ತನಿಖಾ ವಿಭಾಗದಿಂದ ತನಿಖೆ ಆರಂಭಗೊಂಡಿತ್ತು.
'' ತನಿಖೆ ಮುಗಿದ ಅಧ್ಯಾಯ ಅದಾದ ಬಳಿಕ ಆಂತರಿಕ ಸಮಾಲೋಚನೆ ಕೂಡ ಮುಗಿದಿದೆ. ತನಿಖೆಗೆ ಆದೇಶಿಸಿದ ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳಿಗೆ ನಾವು ವರದಿ ಕಳುಹಿಸುವುದಷ್ಟೇ ಬಾಕಿ, '' ಎಂದು ತನಿಖಾ ವಿಭಾಗದ ಮುಖ್ಯಸ್ಥ ಫಾನ್ಸೆಕಾ ಶುಕ್ರವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಫಾನ್ಸೆಕಾ ಅವರ ಪ್ರಕಾರ, ಮಹಿಂದಾನಂದರು ಆರೋಪಿಸಿದ 14 ಅಂಶಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ದೊರೆತ್ತಿಲ್ಲ.
ಯುಎನ್ಐಆರ್ ಕೆ 2008
More News
ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

ಇಂಗ್ಲೆಂಡ್ ಗೆ 107 ರನ್ ಹಿನ್ನಡೆ, ಪಾಕ್ ಬೌಲರ್ ಗಳ ಅಬ್ಬರ

07 Aug 2020 | 9:55 PM

ಮ್ಯಾಂಚೆಸ್ಟರ್, ಆ.7 (ಯುಎನ್ಐ)- ಪಾಕ್ ಸ್ಪಿನ್ ಬೌಲರ್ ಯಾಸೀರ್ ಶಾ ಅವರ ಬಿಗುವಿನ ದಾಳಿಗೆ ನಲುಗಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 219 ರನ್ ಗಳಿಗೆ ಆಲೌಟ್ ಆಯಿತು.

 Sharesee more..

ಯಾಸೀರ್ ಮಾರಕ ದಾಳಿ, ಪಾಕ್ ಗೆ ಇನಿಂಗ್ಸ್ ಮುನ್ನಡೆ

07 Aug 2020 | 9:06 PM

 Sharesee more..