Sunday, Mar 29 2020 | Time 00:45 Hrs(IST)
National Share

ಸಿಖ್ಖರ ವಿರುದ್ಧ ಪಾಕ್ ದೌರ್ಜನ್ಯ ಸಿಎಎ ಜಾರಿಗೆ ಸಮರ್ಥನೆ- ಬಿಜೆಪಿ; ರಾಹುಲ್ ವಿರುದ್ಧ ಅಖಾಲಿ ದಳ ವಾಗ್ದಾಳಿ

ನವದೆಹಲಿ, ಜ.4 (ಯುಎನ್ಐ) ದೇಶದ ಮೂಲೆ ಮೂಲೆಗಳಲ್ಲೂ ಸಿಎಎ ವಿರೋಧಿ ಪ್ರತಿಭಟನೆ, ಹಿಂಸಾಚಾರ ನಡೆದ ಬೆನ್ನಲ್ಲೇ ಬಿಜೆಪಿ ಶನಿವಾರ ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ನಡೆದ ದಾಳಿಯನ್ನು ಮುಂದಿಟ್ಟು ಸಿಎಎ ಕಾನೂನನ್ನು ಸಮರ್ಥಿಸಿಕೊಂಡಿದೆ.
"ಸಿಎಎ ಸರಿಯಾಗಿದೆ ಮತ್ತು ಅದು ಸಮಯೋಚಿತವಾಗಿದೆ ಎಂಬುದನ್ನು ಪಾಕಿಸ್ತಾನ ಈಗ ಸಾಬೀತುಪಡಿಸಿದೆ. ಪಾಕಿಸ್ತಾನದಲ್ಲಿ ಸಂಭವಿಸಿರುವ ಘಟನೆ, ಸಿಎಎಯಂತಹ ಕಾಯಿದೆಯ ಅಗತ್ಯವನ್ನು ಸಮರ್ಥಿಸುತ್ತದೆ" ಎಂದು ಬಿಜೆಪಿ ನಾಯಕ ಮೀನಾಕ್ಷಿ ಲೇಖಿ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಾಕಿಸ್ತಾನದಲ್ಲಿ ನಡೆದ ಈ ಘಟನೆ "ಸಿಎಎಯ ತಕ್ಷಣದ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳುತ್ತಿದೆ. ಪಾಕಿಸ್ತಾನ ಸರ್ಕಾರ ಮತ್ತು ಅದರ ಏಜೆನ್ಸಿಗಳು ಆ ದೇಶದ ಕ್ರೈಸ್ತರು ಮತ್ತು ಸಿಖ್ಖರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ನೀತಿ ಅನುಸರಿಸುತ್ತಿದೆ ಎಂಬುದನ್ನು ಈ ಘಟನೆ ಸ್ಪಷ್ಪಪಡಿಸಿದೆ ಎಂದು ಬಿಜೆಪಿ ಹೇಳಿದೆ.
ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಯೋಜಿತ ರೀತಿಯಲ್ಲಿ ಕಡಿಮೆ ಮಾಡಲಾಗುತ್ತಿದೆ. ಪಾಕಿಸ್ತಾನದಲ್ಲಿ ಇಪ್ಪತ್ಮೂರು ಶೇಕಡಾದಷ್ಟಿದ್ದ ಧಾರ್ಮಿಕ ಅಲ್ಪಸಂಖ್ಯಾತರು ಈಗ ಶೇಕಡಾ ಮೂರು ಕ್ಕಿಂತಲೂ ಕಡಿಮೆಯಿದ್ದಾರೆ ಎಂದು ಅವರು ಹೇಳಿದರು.
ಮತ್ತು ಆ ದೇಶದ ಕ್ರಿಶ್ಚಿಯನ್ ಮಹಿಳೆಯೊಬ್ಬರು ಎದುರಿಸುತ್ತಿರುವ ಸಂಕಷ್ಟವನ್ನು ಉಲ್ಲೇಖಿಸಿದರು.
1947 ರಲ್ಲಿ ಪಾಕಿಸ್ತಾನವನ್ನು ರಚಿಸಿದಾಗಿನಿಂದ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ಕಿರುಕುಳ ಅಬಾಧಿತವಾಗಿ ಮುಂದುವರಿಯುತ್ತಿದೆ. ಇದರ ಪರಿಣಾಮವಾಗಿ ಜನರು ಬಲವಂತವಾಗಿ ವಲಸೆ ಹೋಗುತ್ತಿದ್ದಾರೆ ಎಂದು ಲೇಖಿ ಆರೋಪಿಸಿದರು.
"ನಂಕನಾ ಸಾಹೀಬ್ ಘಟನೆ ಒಂದು ಸಾಂಕೇತಿಕ ಮಾತ್ರ. ಲಕ್ಷಾಂತರ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ. ಲಕ್ಷಾಂತರ ಮಹಿಳೆಯರನ್ನು ಕೊಲ್ಲಲಾಗಿದೆ ಮತ್ತು ಪೂಜಾ ಸ್ಥಳಗಳನ್ನು ಅಪವಿತ್ರಗೊಳಿಸಲಾಗಿದೆ" ಎಂದು ಅವರು ಹೇಳಿದರು.
ಬಿಜೆಪಿಯ ಮಿತ್ರ ಪಕ್ಷ ಪಂಜಾಬ್ ಅಕಾಲಿ ದಳ ಕೂಡ, ಗುರುದ್ವಾರ ನಂಕನಾ ಸಾಹಿಬ್ ಮೇಲೆ ನಡೆದ ಗುಂಪಿನ ದಾಳಿಯನ್ನು ಖಂಡಿಸಿದರು.
ಅಕಾಲಿ ದಳದ ಮುಖಂಡರಾದ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್, ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ತಮ್ಮ ಸಹೋದ್ಯೋಗಿ ಇಮ್ರಾನ್ ಖಾನ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿಸಬೇಕು ಮತ್ತು ಪಾಕಿಸ್ತಾನದ ನೈಜ ಮುಖವನ್ನು ಅನಾವರಣಗೊಳಿಸಬೇಕು ಎಂದು ಹೇಳಿದರು.
ಪಾಕ್‌ನ ನೈಜ ಮುಖವು ಬಹಿರಂಗಗೊಳ್ಳುತ್ತಿದೆ! ಈ ಮೊದಲ ಸಿಖ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಯಿತು. ಈಗ ಅಪಹರಣಕಾರರು, ಸಂತ್ರಸ್ತ ಕುಟುಂಬ ಮತ್ತು ಪವಿತ್ರ ದೇಗುಲ ಗುರುದ್ವಾರ ನಂಕನಾ ಸಾಹಿಬ್ ಮೇಲೆ ದಾಳಿ ಮಾಡಿದ್ದಾರೆ. ಪಾಕ್ ಈ ಅನಾಗರಿಕತೆಯನ್ನು ನಿಲ್ಲಿಸಲು ಮತ್ತು ಪಾಕ್ ಸಿಖ್ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರನ್ನು ನಾನು ಒತ್ತಾಯಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
"ಗುರುದ್ವಾರ ನಂಕನಾ ಸಾಹಿಬ್ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಈ ಮೂಲಕ ತಾವು ಸಿಖ್ ವಿರೋಧಿ ಎಂಬುದನ್ನು ಬಹಿರಂಗಪಡಿಸಿದ್ದಾರೆ ಎಂದು ದೂರಿದರು.
"ಸಿಎಎ ವಿಷಯದಲ್ಲಿ ರಾಹುಲ್ ಗಾಂಧಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಖ್ಖರ ವಿರುದ್ಧ ದೌರ್ಜನ್ಯವೆಸಗಿರುವ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಲು ಅವರಿಗೆ ಸಮಯವಿಲ್ಲ" ಎಂದು ಕೇಂದ್ರ ಸಚಿವರು ಟ್ವೀಟ್ ಮಾಡಿದ್ದಾರೆ.
ಪಂಜಾಬ್ ಮೂಲದ ಮತ್ತೊಬ್ಬ ಬಿಜೆಪಿ ನಾಯಕ ತರುಣ್ ಚುಗ್ ಕೂಡ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಯುಎನ್ಐ ಎಎಚ್ 2121
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..