Monday, Jul 22 2019 | Time 07:10 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National Share

ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ವಿಕಾಸ್ ಸ್ವರೂಪ್ ನೇಮಕ

ನವದೆಹಲಿ, ಜುಲೈ 12 (ಯುಎನ್ಐ) ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ
ಸಚಿವ ಸಂಪುಟ ಸಮಿತಿಯು ವಿಕಾಸ್ ಸ್ವರೂಪ್ ಅವರ ನೇಮಕಕ್ಕೆ ಅನುಮತಿ ನೀಡಿದ್ದು, ಆಗಸ್ಟ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ.
ಪ್ರಸ್ತುತ ಒಟ್ಟಾವಾದಲ್ಲಿ ಭಾರತೀಯ ಹೈಕಮಿಷನರ್ ಆಗಿ ಕಾರ್ಯನಿರ್ಹಿಸುತ್ತಿರುವ ವಿಕಾಸ್ ಸ್ವರೂಪ್, 1986ನೇ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದಾರೆ.
ವಿಕಾಸ್ ಸ್ವರೂಪ್ ಅವರು ತೆರವುಗೊಳಿಸುವ ಒಟ್ಟಾವಾದ ಭಾರತೀಯ ಹೈಕಮಿಷನರ್ ಸ್ಥಾನಕ್ಕೆ ಲೆಬನಾನ್ ದೇಶದ ಭಾರತದ ಮಾಜಿ ರಾಯಭಾರಿ ಸಂಜೀವ್ ಆರೋರಾ ನೇಮಕಗೊಳ್ಳಲಿದ್ದಾರೆ.
ಯುಎನ್ಐ ಎಸ್ಎ ಆರ್ ಕೆ 1221