Wednesday, May 27 2020 | Time 01:49 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Karnataka Share

ಸಂಜೆಯೊಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಅತೃಪ್ತ 10 ಮಂದಿ ಶಾಸಕರಿಗೆ ಸುಪ್ರೀಂ ಸೂಚನೆ

ಸಂಜೆಯೊಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಅತೃಪ್ತ 10 ಮಂದಿ ಶಾಸಕರಿಗೆ ಸುಪ್ರೀಂ ಸೂಚನೆ
ಸಂಜೆಯೊಳಗೆ ಸ್ಪೀಕರ್ ಎದುರು ಹಾಜರಾಗುವಂತೆ ಅತೃಪ್ತ 10 ಮಂದಿ ಶಾಸಕರಿಗೆ ಸುಪ್ರೀಂ ಸೂಚನೆ

ನವದೆಹಲಿ, ಜುಲೈ 11 (ಯುಎನ್ಐ) ತಮ್ಮ ರಾಜೀನಾಮೆಗಳನ್ನು ವಿಧಾನಸಭಾಧ್ಯಕ್ಷರು ಉದ್ದೇಶಪೂರ್ವಕವಾಗಿ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕದ 10 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಅರ್ಜಿದಾರ ಎಲ್ಲಾ ಶಾಸಕರು ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗುವಂತೆ ಸೂಚಿಸಿದೆ

ಬಂಡಾಯ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದರು

ಸ್ಪೀಕರ್ ಎದುರು ಹಾಜರಾಗುವ ವೇಳೆ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್‍ ನೇತೃತ್ವದ ಪೀಠ ನಿರ್ದೇಶನ ನೀಡಿ, ರಾಜ್ಯ ಸರ್ಕಾರ ಮತ್ತು ಸ್ಪೀಕರ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು

ಎಲ್ಲರ ಅಹವಾಲುಗಳನ್ನು ಕೇಳಿ ಸೂಕ್ತ ನಿರ್ಧಾರ ತೆಗೆದುಕೊಂಡು ನಾಳೆ ಪೀಠಕ್ಕೆ ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಸುಪ್ರೀಂಕೋರ್ಟ್ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಕಾನೂನು ತಜ್ಞರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದ್ದಾರೆ.

ಈ ಆದೇಶ 10 ಶಾಸಕರಿಗೆ ಮಾತ್ರ ಅನ್ವಯವಾಗುತ್ತದೆ. ಇಂದು ಸಂಜೆ ಆರು ಗಂಟೆಯೊಳಗೆ 10 ಮಂದಿ ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು ಎಂದು ಪೀಠ ಆದೇಶ ನೀಡಿದೆ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಸುದ್ದಿಗಾರರಿಗೆ ತಿಳಿಸಿದರು.

ಸುಪ್ರೀಂಕೊರ್ಟ್ ತೀರ್ಪು ಹೊರಬರುತ್ತಿದ್ದಂತೆ ಮುಂಬೈಯ ಖಾಸಗಿ ಹೋಟೆಲ್‍ನಲ್ಲಿರುವ ಅತೃಪ್ತ ಶಾಸಕರು ತುರ್ತು ಸಭೆ ನಡೆಸಿ, ಬೆಂಗಳೂರಿಗೆ ಹೊರಡಲು ಸಿದ್ಧತೆ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಅವರು ವಿಧಾನಸೌಧಕ್ಕೆ ಆಗಮಿಸಿ ಸ್ಪೀಕರ್ ಎದುರು ಹಾಜರಾಗಲಿದ್ದಾರೆ.

ಯುಎನ್ಐ ಎಎಚ್ 1126