Sunday, Nov 1 2020 | Time 00:31 Hrs(IST)
Sports Share

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ
ಸಂಜು, ಸ್ಮಿತ್ ಅಬ್ಬರ, ರಾಯಲ್ಸ್ ಉತ್ತಮ ಮೊತ್ತ

ಶಾರ್ಜಾ, ಸೆ.22 (ಯುಎನ್ಐ)- ಅನುಭವಿ ಆಟಗಾರರಾದ ಸ್ವೀಟನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಮೊತ್ತದ ಗುರಿಯನ್ನು ನೀಡಿದೆ.ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಸೇರಿಸಿತು.ರಾಯಲ್ಸ್ ತಂಡದ ಪರ ಜೈಸ್ವಾಲ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್ ಗೆ ಸ್ಮಿತ್ ಹಾಗೂ ಸ್ಯಾಮ್ಸನ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿಯನ್ನು ಬೇರ್ಪಡಿಸಲು ಚೆನ್ನೈ ನಾಯಕ ಧೋನಿ ಮಾಡಿಕೊಂಡ ಪ್ಲಾನ್ ಎಲ್ಲ ಕೈ ಕೊಟ್ಟಿತು.ತಮ್ಮ ನೈಜ ಆಟದ ಪ್ರದರ್ಶನ ನೀಡಿದ ಸಂಜು ತಂಡಕ್ಕೆ ಆಧಾರವಾದರು. ಮೈದಾನದ ನಾಲ್ಕೂ ಮೂಲೆಗೂ ಚೆಂಡನ್ನು ಅಟ್ಟಿದ ಸ್ಯಾಮ್ಸನ್ ಸೊಗಸಾದ ಪ್ರದರ್ಶನ ನೀಡಿದರು. ಆರಂಭಿಕ ಆಘಾತದಿಂದ ತಂಡವನ್ನು ಮೇಲಕೆತ್ತಿದ ಜೋಡಿ ತಂಡ, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು.ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದ ಅಭಿಮಾನಿಗಳನ್ನು ರಂಜಿಸಿದ ಸಂಜು ಅಬ್ಬರಿಸಿದರು. ಕೇವಲ 32 ಎಸೆತಗಳಲ್ಲಿ 1 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿ ಆರ್ಭಟಿಸಿದರು. ಎರಡನೇ ವಿಕೆಟ್ ಗೆ ಸ್ಮಿತ್ ಹಾಗೂ ಸ್ಯಾಮ್ಸನ್ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ ಆಧಾರವಾಯಿತು.ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ರಾಬಿನ್ ಉತ್ತಪ್ಪ ಹಾಗೂ ರಾಹುಲ್ ತಿವಾಟಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಟಗಾರ ಸ್ಮಿತ್ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು. ಸ್ಮಿತ್ 47 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 69 ರನ್ ಪೇರಿಸಿ ಕರನ್ ಗೆ ವಿಕೆಟ್ ಒಪ್ಪಿಸಿದರು.ಕೆಳ ಕ್ರಮಾಂಕದಲ್ಲಿ ಜೋಫ್ರಾ ಆರ್ಚರ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಇವರು 4 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿ ಅಜೇಯರಾಗುಳಿದರು.ಯುಎನ್ಐ ವಿಎನ್ಎಲ್ 2131

More News
ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

31 Oct 2020 | 9:53 PM

ದುಬೈ, ಅ.31 (ಯುಎನ್ಐ)- ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಮರ್ಮ ಅರಿಯುವಲ್ಲಿ ವಿಫಲರಾಗಿದ್ದೇವೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

 Sharesee more..

ಸನ್ ದಾಳಿಗೆ ಬೆಂಗಳೂರು ತಬ್ಬಿಬ್ಬು

31 Oct 2020 | 9:28 PM

 Sharesee more..
ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

31 Oct 2020 | 8:03 PM

ಅಬುಧಾಬಿ, ಅ 31(ಯುಎನ್ಐ) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 Sharesee more..

ಮುಂಬೈ ಮುಂದುವರಿಸಿದ ಗೆಲುವಿನ ನಾಗಾಲೋಟ

31 Oct 2020 | 6:47 PM

 Sharesee more..