Sunday, Nov 1 2020 | Time 01:33 Hrs(IST)
Sports Share

ಸ್ಟೋಯ್ನಿಸ್ 53, ಶ್ರೇಯಸ್ ಅಯ್ಯರ್ 39, ದೆಹಲಿ 8 ವಿಕೆಟ್ ಗೆ 157

ದುಬೈ, ಸೆ. 20 (ಯುಎನ್ಐ)- ಅನುಭವಿ ಮಾರ್ಕಸ್ ಸ್ಟೋಯ್ನಿಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ 13ನೇ ಆವೃತ್ತಿ ಐಪಿಎಲ್ ನ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸ್ಪರ್ಧಾತ್ಮಕ ಮೊತ್ತಕ್ಕೆ ಹಾಕಿದ್ದು, ಪಂಜಾಬ್ ಗೆಲುವಿಗೆ 158 ರನ್ ಗಳ ಗುರಿ ನೀಡಿದೆ.

ಟಾಸ್ ಗೆದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ದೆಹಲಿ 20 ಓವರ್ ಗಳಲ್ಲಿ 8 ವಿಕೆಟ್ ಗೆ 157 ಸೇರಿಸಿತು.

ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಅವರು ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಲಿಲ್ಲ. ವಿಂಡೀಸ್ ತಂಡದ ಸ್ಟಾರ್ ಆಟಗಾರ ಶಿಮ್ರೋನ್ ಹೆಟ್ಮೆಯರ್ ಸಹ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು.

13 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಸೇರಿಸುವಲ್ಲಿ ಶ್ರಮಿಸಿತು. ಈ ಜೋಡಿ ಸರಿಯಾಗಿ 10 ಓವರ್ ಬ್ಯಾಟಿಂಗ್ ನಡೆಸಿ, ಕಿಂಗ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿತು. ಶ್ರೇಯಸ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ರನ್ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನು ಪಂತ್ ಸಹ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರು.

ಅಯ್ಯರ್-ಪಂತ್ ಅವರನ್ನು ಬೇರ್ಪಡಿಸಲು ರಾಹುಲ್ ಹಾಕಿಕೊಂಡ ಪ್ಲಾನ್ ಎಲ್ಲ ಕೈ ಕೊಟ್ಟಿತು. ಈ ಜೋಡಿ 73 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಪಂತ್ 31 ರನ್ ಬಾರಿಸಿದ್ದಾಗ ರವಿ ಬಿಷ್ಣೋಯಿ ಅವರ ಎಸೆತವನ್ನು ಕೆಣಕಿ ಔಟ್ ಆದರು.

ನಾಯಕ ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ 3 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿ ಶಮಿ ಎಸೆತದಲ್ಲಿ ಔಟ್ ಆದರು. ಅಕ್ಷರ್ ಪಟೇಲ್ ನಿರಾಸೆ ಅನುಭವಿಸಿದರು.

ಅನುಭವಿ ಮಾರ್ಕಸ್ ಸ್ಟೋಯ್ನಿಸ್ ತಮ್ಮ ಅನುಭವ ಧಾರೆ ಎರೆದು ಬ್ಯಾಟಿಂಗ್ ನಡೆಸಿದರು. 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸ್ಟೋಯ್ನಿಸ್ ಅಬ್ಬರಿಸಿದರು. ಇವರ ಸೊಗಸಾದ ಬ್ಯಾಟಿಂಗ್ ನೆರವಿನಿಂದ ದೆಹಲಿ ಕ್ಯಾಪಿಟಲ್ಸ್ ಉತ್ತಮ ಮೊತ್ತ ಕಲೆ ಹಾಕಿತು.
ಯುಎನ್ಐ ವಿಎನ್ಎಲ್ 2128
More News
ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

ವಿಕೆಟ್ ಮರ್ಮ ಅರಿಯುವಲ್ಲಿ ಎಡವಿದ್ದೇವೆ: ಶ್ರೇಯಸ್

31 Oct 2020 | 9:53 PM

ದುಬೈ, ಅ.31 (ಯುಎನ್ಐ)- ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಮರ್ಮ ಅರಿಯುವಲ್ಲಿ ವಿಫಲರಾಗಿದ್ದೇವೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

 Sharesee more..

ಸನ್ ದಾಳಿಗೆ ಬೆಂಗಳೂರು ತಬ್ಬಿಬ್ಬು

31 Oct 2020 | 9:28 PM

 Sharesee more..
ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

ಟಿ20 ಮಾದರಿಯಲ್ಲಿ ಸಹಸ್ರ ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್

31 Oct 2020 | 8:03 PM

ಅಬುಧಾಬಿ, ಅ 31(ಯುಎನ್ಐ) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಶುಕ್ರವಾರ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 8 ಸಿಕ್ಸರ್ ಗಳಿಸುವ ಮೂಲಕ ಟಿ20 ಮಾದರಿಯಲ್ಲಿ ಸಾವಿರಕ್ಕೂ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 Sharesee more..

ಮುಂಬೈ ಮುಂದುವರಿಸಿದ ಗೆಲುವಿನ ನಾಗಾಲೋಟ

31 Oct 2020 | 6:47 PM

 Sharesee more..