Friday, Feb 28 2020 | Time 09:35 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಡಿಎಸ್ ಬಿಪಿನ್ ರಾವತ್ ಗೆ ದೊಡ್ಡಣ್ಣನ ಅಭಿನಂದನೆ

ನವದೆಹಲಿ, ಡಿ 31(ಯುಎನ್ಐ) ದೇಶದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡಿರುವ ಬಿಪಿನ್ ರಾವತ್ ಅವರು ನಾಳೆ, ಬುಧವಾರ ಅಧಿಕಾರ ಸ್ವೀಕರಿಸಲಿದ್ದು, ಸೇನಾ ಮುಖ್ಯಸ್ಥ ರಾಗಿದ್ದ ಅವರ ಮೂರು ವರ್ಷದ ಸೇವೆ ಇಂದಿಗೆ ಮುಕ್ತಾಯವಾಗಲಿದೆ.
ದೇಶದ ಪ್ರಥಮ ಸಿಡಿಎಸ್ ಆಗಿ ನೇಮಕವಾಗಿರುವ ಜನರಲ್ ರಾವತ್ ಅವರಿಗೆ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಸಹ ಅಭಿನಂದನೆ ಸಲ್ಲಿಸಿದೆ.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಶಸ್ತ್ರ ಪಡೆಗಳಿಗೆ ಒಬ್ಬರು ಮುಖ್ಯಸ್ಥರನ್ನು ನೇಮಕ ನೇಮಕ ಮಾಡುವುದಾಗಿ ಘೋಷಣೆ ಮಾಡಿದ್ದರು.
ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ (ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯವೈಖರಿ ರೀತಿ ವಿದೇಶಾಂಗ ನೀತಿಯ ಕಾರ್ಯನಿರ್ವಹಿಸುವ ಇಲಾಖೆ) ಪ್ರಕಟಣೆಯಲ್ಲಿ, ಇತ್ತೀಚೆಗೆ ನಡೆದ ಮಿಲಿಟರಿ ಹಾಗೂ ಆರ್ಥಿಕ ಸಂಬಂಧಿ ಚರ್ಚೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ದಿಗೊಂಡಿದೆ ಎಂದೂ ತಿಳಿಸಿದೆ.
ಭಾರತದಲ್ಲಿರುವ ಅಮೆರಿಕದ ರಾಯಭಾರಿ ಕೆನ್ನೆಥ್ ಜುಸ್ಟರ್, ವೈಯಕ್ತಿಕವಾಗಿ ಜನರಲ್ ಬಿಪಿನ್ ರಾವತ್ ಗೆ ಅಭಿನಂದನೆ ತಿಳಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಅಮೆರಿಕ-ಭಾರತದ ರಕ್ಷಣಾ ಪಾಲುದಾರಿಕೆಯಲ್ಲಿ , ಸಂಬಂಧ ಸುಧಾರಣೆಯಲ್ಲಿ ಮತ್ತಷ್ಟು ಪ್ರಗತಿ ಕಾಣಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಕೆಎಸ್ಆರ್ 1140