Friday, Feb 28 2020 | Time 08:33 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಡಿಎಸ್, ಸೇನಾ ವ್ಯವಹಾರಗಳ ಇಲಾಖೆ ರಚನೆ, ಸಮಗ್ರ ಸುಧಾರಣೆಗಳು- ಪ್ರಧಾನಿ ಮೋದಿ

ನವದೆಹಲಿ, ಜ1(ಯುಎನ್‍ಐ)- ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆ ಮತ್ತು ಸೇನಾ ವ್ಯವಹಾರಗಳ ಇಲಾಖೆಯ ಸೃಷ್ಟಿಯು ಸಮಗ್ರ ಸುಧಾರಣೆಗಳಾಗಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಇಂದು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಜನರಲ್ ಬಿ.ಪಿ.ರಾವತ್ ಅಧಿಕಾರ ವಹಿಸಿಕೊಂಡರು.
ಬಿಪಿನ್ ರಾವತ್ ಅವರನ್ನು ಅಭಿನಂದಿಸಿರುವ ಪ್ರಧಾನಿಯವರು, ಹೊಸ ಜವಾಬ್ದಾರಿ ಹೊತ್ತಿರುವ ರಾವತ್ ಅವರಿಗೆ ಶುಭ ಕೋರಿದ್ದಾರೆ. ಅತ್ಯುತ್ತಮ ಅಧಿಕಾರಿಯಾಗಿರುವ ಬಿಪಿನ್ ರಾವತ್ ಸ್ಫೂರ್ತಿಯೊಂದಿಗೆ ದೇಶಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಸಿಡಿಎಸ್ ಹುದ್ದೆಯು ಸೇನಾ ಪಡೆಗಳನ್ನು ಆಧುನೀಕರಣಗೊಳಿಸುವುದೂ ಸೇರಿದಂತೆ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಈ ಹುದ್ದೆ ದೇಶದ 130 ಕೋಟಿ ಜನರ ಆಶೋತ್ತರಗಳು ಮತ್ತು ನಿರೀಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.
2019ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿಯವರು, ಭಾರತ, ರಕ್ಷಣಾ ಪಡೆಗಳಿಗೆ ಮುಖ್ಯಸ್ಥರನ್ನು ಹೊಂದಲಿದೆ ಎಂದು ಹೇಳಿದ್ದರು.
‘ಸೇನಾ ವ್ಯವಹಾರಗಳ ಇಲಾಖೆ ಮತ್ತು ಸಿಡಿಎಸ್ ಹುದ್ದೆ ಸೃಷ್ಟಿಯು ಸಮಗ್ರ ಸುಧಾರಣೆಗಳಾಗಿದ್ದು, ಆಧುನಿಕ ಶಸ್ತ್ರಾಸ್ತ್ರಗಳಿಗೆ ಭಾರತಕ್ಕೆ ಎದುರಾಗಿರುವ ಸವಾಲುಗಳಿಗೆ ನೆರವಾಗಲಿವೆ.’ ಎಂದು ಹೇಳಿದ್ದಾರೆ.
ಇದೇ ವೇಳೆ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಪ್ರಧಾನಿ ಶ್ರದ್ಧಾಂಜಲಿ ಸಲ್ಲಿಸಿದರು.
ಯುಎನ್‍ಐ ಎಸ್‍ಎಲ್‍ಎಸ್ 1637