Monday, Aug 3 2020 | Time 23:34 Hrs(IST)
 • ಕರೋನಾ ಸೇನಾನಿ ಡಾ ಜೋಗಿಂದರ್ ಚೌಧರಿ ಕುಟುಂಬಕ್ಕೆ 1 ಕೋಟಿ ರೂ ಮೊತ್ತದ ಚೆಕ್‍ ನೀಡಿದ ಕೇಜ್ರಿವಾಲ್‍
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
Sports Share

ಸಂಡೇ ಕ್ಲಬ್‌ ಮೀಟಿಂಗ್‌ನಲ್ಲಿ ನಡೆಯುತ್ತಿದ್ದ ಕುತೂಹಲಕಾರಿ ಸಂಗತಿಗಳನ್ನು ಚಿಚ್ಚಿಟ್ಟ ಲಿಟ್ಲ್ ಮಾಸ್ಟರ್

ನವದೆಹಲಿ, ಜುಲೈ 13 (ಯುಎನ್ಐ)
ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ಟೀಮ್‌ ಇಂಡಿಯಾ ಆಟಗಾರರು ಸಂಡೇ ಕ್ಲಬ್‌ ಮೀಟಿಂಗ್‌ಗಳಲ್ಲಿ ಲಿಪ್‌ಸ್ಟಿಕ್‌ ಧರಿಸಿ ಪಾಲ್ಗೊಳ್ಳುತ್ತಿದ್ದ ದಿನಗಳನ್ನು ಇತ್ತೀಚಿನ ವಿಡಿಯೋ ಸಂದರ್ಶನವೊಂದರಲ್ಲಿ ಸ್ಮರಿಸಿದ್ದಾರೆ. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಸಂದೀಪ್‌ ಪಾಟಿಲ್‌ ತಮ್ಮ ವಿರುದ್ಧ ದೊಡ್ಡ ದಂಡವನ್ನೇ ಹೇರಿದ್ದ ಘಟನೆಯನ್ನೂ ವಿವರಿಸಿದ್ದಾರೆ.
ಸಂಡೇ ಕ್ಲಬ್‌ ಮೀಟಿಂಗ್‌ ಎಂಬುದನ್ನು ಪರಿಚಯಿಸಿದ್ದು ಇಂಗ್ಲೆಂಡ್‌ನ ಮಾಜಿ ಆಟಗಾರ ನಾರ್ಮನ್‌ ಗಿಫೋರ್ಡ್‌. ಆಟಗಾರರನ್ನು ಒಂದೆಡೆ ಸೇರಿಸಿ ಅವರಲ್ಲಿನ ಆತಂಕಗಳನ್ನು ದೂರ ಮಾಡಿ ಎಲ್ಲರ ಜೊತೆಗೆ ಬೆರೆಯುವಂತೆ ಮಾಡುವುದು ಈ ಸಂಡೇ ಮೀಟಿಂಗ್‌ಗಳ ಹಿಂದಿದ್ದ ಉದ್ದೇಶವಾಗಿತ್ತು.
1978ರಲ್ಲಿ ಸುನಿಲ್‌ ಗವಾಸ್ಕರ್‌ ಭಾರತ ತಂಡದ ನಾಯಕನಾಗಿ ನೇಮಕೊಂಡ ಸಂದರ್ಭದಲ್ಲಿ ಅವರು ಟೀಮ್‌ ಇಂಡಿಯಾ ಆಟಗಾರರ ಸಲುವಾಗಿ ಸಂಡೇ ಮೀಟಿಂಗ್‌ ಆಯೋಜಿಸಿದ್ದರು. ಸಂದೀಪ್‌ ಪಾಟಿಲ್‌ ಅವರನ್ನು ಆ ಕ್ಲಬ್‌ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು. ಮಾಜಿ ಆಲ್‌ರೌಂಡರ್‌ ಪಾಟಿಲ್‌ ಕ್ಲಬ್‌ ಮುಖ್ಯಸ್ಥರಾಗಿ ಬಹಳ ಶಿಸ್ತಿನಿಂದ ಇರುತ್ತಿದ್ದರು. ಅಷ್ಟೇ ಅಲ್ಲದೆ ಎಲ್ಲ ಆಟಗಾರರಿಗೆ ಮೀಟಿಂಗ್‌ನಲ್ಲಿ ಭಾಗಿಯಾಗಲು ಡ್ರೆಸ್‌ಕೋಡ್‌ ಕೂಡ ನೀಡುತ್ತಿದ್ದರು ಎಂದು ಗವಾಸ್ಕರ್‌ ಹೇಳಿದ್ದಾರೆ.
"ಸಂದೀಪ್‌ ಕ್ಲಬ್‌ನ ಮುಖ್ಯಸ್ಥರಾಗಿದ್ದರು. ಬಹಳ ಪ್ರಿಯವಾದ ಹಾಗೂ ತಮಾಷೆಯ ವ್ಯಕ್ತಿ. ಆ ಕೆಲಸಕ್ಕೆ ಅವರೇ ಹೆಚ್ಚು ಸೂಕ್ತ. ಸಂದೀಪ್‌, ಆಟಗಾರರಿಗೆ ಹಲವು ರೀತಿಯ ಡ್ರೆಸ್‌ಕೋಡ್‌ ನೀಡುತ್ತಿದ್ದರು. ಉದಾಹರಣೆಗೆ ನಿಮ್ಮ ಕೂದಲನ್ನು ಮಧ್ಯಕ್ಕೆ ಕ್ರಾಫ್ ಮಾಡಿಯೇ ಮೀಟಿಂಗ್‌ಗೆ ಬರಬೇಕು ಎಂಬುದು ಇತ್ಯಾದಿ," ಎಂದು ಗೌರವ್‌ ಕಪೂರ್‌ ನಡೆಸಿ ಕೊಡುವ 22 ಯಾರ್ಡ್ಸ್‌ ಕಾರ್ಯಕ್ರಮದಲ್ಲಿ ಗವಾಸ್ಕರ್‌ ಮಾತನಾಡಿದ್ದಾರೆ.
"ಸರಿಯಾಗಿ ನೆನಪಿಸಿಕೊಂಡು ಹೇಳುವುದಾದರೆ ಅಂದೆಲ್ಲಾ ಮೀಟಿಂಗ್‌ನಲ್ಲಿ ಪಾಲ್ಗೊಳ್ಳಲು ನಾವು ಒಂದು ಕಾಲಿಗೆ ಕಪ್ಪು ಮತ್ತೊಂದು ಕಾಲಿಗೆ ಬಿಳಿಯ ಸಾಕ್ಸ್‌ ತೊಡಬೇಕು, ಶರ್ಟ್‌ ಧರಿಸದೇ ಕೇವಲ ಟೈ ತೊಟ್ಟು ಬರಬೇಕು, ಶರ್ಟ್‌ ಅನ್ನು ಉಲ್ಟ ಧರಿಸಿ ಬರಬೇಕು," ಹೀಗೆ ಹಲವು ಡ್ರೆಸ್‌ ಕೋಡ್‌ ನೀಡಲಾಗುತ್ತಿತ್ತು ಎಂದು ಗವಾಸ್ಕರ್‌ ಸ್ಮರಿಸಿದ್ದಾರೆ.
ಇದೇ ವೇಳೆ ಮೀಟಿಂಗ್‌ನ ನಿಯಮ ಉಲ್ಲಂಘಿಸಿದ್ದಕ್ಕೆ ಸಂದೀಪ್‌ ಪಾಟಿಲ್‌ ಹೇಗೆ ತಮ್ಮ ವಿರುದ್ಧ ಭಾರಿ ದಂಡ ವಿಧಿಸಿದ್ದರು ಎಂಬುದನ್ನು ಕೂಡ ಗವಾಸ್ಕರ್‌ ಹೇಳಿಕೊಂಡಿದ್ದಾರೆ. ಬಳಿಕ ಕ್ಲಬ್‌ ಮುಖ್ಯಸ್ಥರೇ ತಪ್ಪು ಮಾಡಿದ್ದಾರೆ ಎಂದು ಅವರ ವಿರುದ್ಧವೇ ಆರೋಪ ಮಾಡಿ ದಂಡ ತೆರುವಂತೆ ಮಾಡಿದ್ದಾಗಿಯೂ ಹೇಳಿದ್ದಾರೆ.
ಯುಎನ್ಐಆರ್ ಕೆ 1625