Monday, Jun 1 2020 | Time 01:26 Hrs(IST)
International Share

ಸುಡಾನ್ ನ ದರ್ಫುರ್ ನಲ್ಲಿ ಅಪಘಾತ : 57 ಸಾವು

ಖರ್ಟೌಮ್, ಮೇ 23 (ಕ್ಸಿನ್ಹುವಾ) ಸುಡಾನ್ ನ ಉತ್ತರ ದರ್ಫುರ್ ಪ್ರದೇಶದಲ್ಲಿ ರಸ್ತೆ ಅಪಘಾತದಲ್ಲಿ ಕನಿಷ್ಠ 57 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆ ವರದಿ ಮಾಡಿದೆ.

ಉಮ್ ದ್ರೈಸೈ ಪ್ರದೇಶದಲ್ಲಿ ನ್ಯಾಲಾ ಮತ್ತು ಇ1 ಫ್ಯಾಷರ್ ನಗರಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಂಗಿಲ್ ತೋಬ್ಯಾ ಪ್ರದೇಶದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಜನರನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆ ವಾಹನ ಚಿಕ್ಕ ವಾಹನಗಳ ಸಾಗಾಟದ ಟ್ರಕ್ ಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದ್ದು ಕನಿಷ್ಠ 57 ಜನರು ಸಾವನ್ನಪ್ಪಿದ್ದು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಿರ್ಲಕ್ಷದ ಚಾಲನೆ, ಕಳಪೆ ರಸ್ತೆ ಮತ್ತು ವಾಹನ ವ್ಯವಸ್ಥೆಯಿಂದಾಗಿ ಸುಡಾನ್ ನಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ.
ಯುಎನ್ಐ ಜಿಎಸ್ಆರ್ 0808
More News
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಲಕ್ಷಕ್ಕೂ ಹೆಚ್ಚು

31 May 2020 | 6:08 PM

ನವದೆಹಲಿ, ಮೇ 31 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ವಿಶ್ವದಲ್ಲಿ 60 ಲಕ್ಷದಾಟಿದ್ದು, 3.64 ಲಕ್ಷಕ್ಕೂ ಹೆಚ್ಚು ಜನರು ಈ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ.

 Sharesee more..
ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

ಜಿ7ಗೆ ಭಾರತವನ್ನೂ ಸೇರಿಸಬೇಕು; ಟ್ರಂಪ್

31 May 2020 | 5:31 PM

ವಾಷಿಂಗ್ಟನ್ /ನವದೆಹಲಿ, ಮೇ 31 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ನಡೆಯಬೇಕಿದ್ದ ಜಿ7 ಶೃಂಗ ಸಭೆಯನ್ನು ಮುಂದೂಡಿದ್ದು, ಅದನ್ನು 'ಔಟ್ ಡೇಟೆಟ್' ಎಂದು ಕರೆದಿದ್ದಾರೆ. ಜೊತೆಗೆ, ಜಿ 7 ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ರಷ್ಯಾ ಮತ್ತು ದಕ್ಷಿಣ ಕೊರಿಯಾವನ್ನು ಸೇರಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.

 Sharesee more..