Wednesday, Feb 26 2020 | Time 10:04 Hrs(IST)
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸೋತವರಿಗೆ, ವಿಪಕ್ಷಗಳಿಗೆ ನಂಬಿಕೆಯಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಮಾಧವ್

ಸೋತವರಿಗೆ, ವಿಪಕ್ಷಗಳಿಗೆ ನಂಬಿಕೆಯಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಮಾಧವ್
ಸೋತವರಿಗೆ, ವಿಪಕ್ಷಗಳಿಗೆ ನಂಬಿಕೆಯಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಮಾಧವ್

ನವದೆಹಲಿ, ಜನವರಿ 16 (ಯುಎನ್ಐ) ಪ್ರಜಾಪ್ರಭುತ್ವದಲ್ಲಿ ಯಾರದೆ ಅಧಿಕಾರ ಶಾಶ್ವತವಲ್ಲ' ಎಂದು ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ್ ಹೇಳಿದ್ದಾರೆ.

ವಿರೋಧ ಪಕ್ಷಗಳು 'ಬೀದಿಗಳನ್ನು' ಪ್ರತಿಭಟನೆಯ ದೃಶ್ಯಗಳಾಗಿ ಪರಿವರ್ತಿಸಿ ಚುನಾಯಿತ ಸರ್ಕಾರದ ಮೇಲೆ ಅನಗತ್ಯ ದಾಳಿ ನಡೆಸುತ್ತಿರುವುದು ಖಂಡಿತ ಒಳ್ಳೆಯ ಬೆಳವಣಿಗೆಯೂ ಅಲ್ಲ ಎಂದು ಹೇಳಿದ್ದಾರೆ.

ಟೀಕೆ, ವಿಮರ್ಶೆ ಸ್ವಾಗತಾರ್ಹ, ಸೋತವರಿಗೆ, ವಿರೋಧಪಕ್ಷಗಳಿಗೆ ಪ್ರಜಾಭುತ್ವದಲ್ಲಿ ನಂಬಿಕೆ ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ನಿಜ ಉದ್ದೇಶ ಯಶಸ್ವಿಯಾಗಲಿದೆ ಎಂದೂ ಮಾಧವ್ ಅಭಿಪ್ರಾಯಪಟ್ಟರು.

ಹೊಸ ಪೌರತ್ವ ಕಾನೂನಿನ ಬಗ್ಗೆ ದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಯನ್ನು ಉಲ್ಲೇಖಿಸಿ ಮತ್ತು ವಿರೋಧ ಪಕ್ಷಗಳು ತಮ್ಮ ಐದು ವರ್ಷಗಳ ಅವಧಿ ಯನ್ನು ಸಹನೆಯಿಂದ ಕಾಯುವುದು ಉತ್ತಮ ಎಂದರು.

ನೀವು ಚುನಾವಣೆಯಲ್ಲಿ ಸೋತಾಗ ಪ್ರಜಾಪ್ರಭುತ್ವ ಉಳಿದುಕೊಂಡಿದೆ ಮತ್ತು ಈಗಲೂ ನೀವು ಪ್ರಜಾಪ್ರಭುತ್ವ ಮನೋಭಾವವನ್ನು ಪ್ರೀತಿಸುತ್ತೀರಿ" ಎಂದು ಅವರು ಇಲ್ಲಿ ರೈಸಿನಾ ಸಂವಾದದ ಚರ್ಚೆಯಲ್ಲಿ ಹೇಳಿದರು.

ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದರು.ಚುನಾಯಿತ ಸರ್ಕಾರಿ ವ್ಯವಸ್ಥೆಯಿಂದ ನಿಮ್ಮ ದೃಷ್ಟಿಕೋನವು ಮೌಲ್ಯೀಕರಿಸದಿದ್ದಾಗ, ನೀವು ಜನಾದೇಶವನ್ನು ಕಳೆದುಕೊಂಡಿದ್ದೀರಿ, ನೀವು ಚುನಾವಣೆಯಲ್ಲಿ ಸೋತಿದ್ದೀರಿ ಆದರೆ ಇನ್ನೂ ನೀವು ಪ್ರಜಾಪ್ರಭುತ್ವದ ಮನೋಭಾವವನ್ನು ಪ್ರೀತಿಸುತ್ತೀರಿ" ಮಾಧವ್ ಕಾಂಗ್ರೆಸ್ ಮತ್ತು ಇತರರ ಪಕ್ಷಗಳ ಬಗ್ಗೆ ಪರೋಕ್ಷ ಟೀಕೆ ಮಾಡಿದರು.

ಪ್ರಜಾಪ್ರಭುತ್ವದಲ್ಲಿ, ಎಲ್ಲಾ ಟೀಕೆಗಳಿಗೆ ಸ್ಥಾನವಿದೆ ಆದರೆ "ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಂಬಿಕೆ ಕಳೆದುಕೊಂಡು ಬೀದಿಗಳನ್ನು ಪ್ರಜಾಪ್ರಭುತ್ವ ವೇದಿಕೆಯಾಗಿ ಪರಿವರ್ತಿಸುವುದು, ಹಿಂಸಾಚಾರದಲ್ಲಿ ತೊಡಗುವುದು ಮತ್ತು ಸರ್ಕಾರವನ್ನು ಭಾಯಿಗೆ ಬಂದ ರೀತಿಯಲ್ಲಿ ನಿಂದಿಸುವುದು ಪ್ರಜಾಪ್ರಭುತ್ವ ಮನೋಭಾವವಲ್ಲ, ಧರ್ಮವಲ್,ಲ ನೀತಿಯೂ ಅಲ್ಲ ಎಂದರು.

ಈ ದೇಶದಲ್ಲಿ ಏನಾಗಿದೆ ಎಂಬುದು ಸಂಸತ್ತಿನಲ್ಲಿ ಸಮಗ್ರ ಚರ್ಚೆಯ ನಂತರ ಅತ್ಯಂತ ಪ್ರಜಾಪ್ರಭುತ್ವದ ರೀತಿಯಲ್ಲಿ ಸಂಭವಿಸಿದೆ. ಸಾಕಷ್ಟು ಟೀಕೆಗಳನ್ನು ಸರ್ಕಾರ ಸಂಸತ್ತಿನಲ್ಲಿ ಸಹಿಸಿಕೊಂಡಿದೆ ಎಂದರು.

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಅದು ನಿಜವಾಗಿಯೂ ಜನರನ್ನು ಪ್ರತಿನಿಧಿಸಬೇಕಾಗಿದೆ. ಪ್ರಜಾಪ್ರಭುತ್ವ ಸರ್ಕಾರವನ್ನು ಬೆಂಬಲಿಸಲು ಪ್ರಜಾಪ್ರಭುತ್ವಕ್ಕೆ ನೈತಿಕತೆ, ಮೌಲ್ಯಗಳು ಮತ್ತು ಸಂಸ್ಕೃತಿಯ ಅಗತ್ಯವಿದೆ. ಪ್ರಜಾಪ್ರಭುತ್ವ ಮನೋಭಾವವನ್ನು ಬಲಪಡಿಸಲು ಸಮಾಜವನ್ನು ನೈತಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಪೋಷಿಸಬೇಕು ಎಂದು ಮಾಧವ್ ಸಲಹೆ ಮಾಡಿದರು.

ಯುಎನ್ಐ ಕೆಎಸ್ಆರ್ 2032