Wednesday, Feb 19 2020 | Time 12:22 Hrs(IST)
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
 • 65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
 • ಸಿಎಎ ಯಾರು ಆತಂಕ ಪಡಬೇಕಿಲ್ಲ: ಉದ್ದವಠಾಕ್ರೆ ಅಭಯ
Karnataka Share

ಸಂತ್ರಸ್ತರಿಗೆ ಶೀಘ್ರ ಪರಿಹಾರ: ಸಚಿವ ಸಿ ಸಿ ಪಾಟೀಲ ಭರವಸೆ

ಗದಗ, ಆ 21 (ಯುಎನ್ಐ) ಇತ್ತೀಚೆಗೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಜನರು ಸಂಕಷ್ಟದಲ್ಲಿದ್ದು ಸಂತ್ರಸ್ತ ಗ್ರಾಮಗಳ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರದ 3,800 ರೂ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 6,200 ರೂ ಸೇರಿಸಿ ಒಟ್ಟು 10 ಸಾವಿರ ರೂ ತಾತ್ಕಾಲಿಕ ಪರಿಹಾರ ನೀಡುತ್ತಿದ್ದು ಇದು ಈವರೆಗಿನ ಅತಿ ಹೆಚ್ಚಿನ ಮೊತ್ತವಾಗಿದೆ ಎಂದು ಸಚಿವ ಸಿ ಸಿ ಪಾಟೀಲ ತಿಳಿಸಿದ್ದಾರೆ.


ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ ಸಂತ್ರಸ್ತರ ವಸತಿಗಾಗಿ ಜಿಲ್ಲಾಡಳಿತ ನಿರ್ಮಿಸಿರುವ ತಾತ್ಕಾಲಿಕ ಶೆಡ್‍, ಮೊದಲಾದ ಪರಿಹಾರ ಕಾರ್ಯ ಪರಾಮರ್ಶಿಸಿ ರೋಣ ತಾಲೂಕಿನ ಮೆಣಸಗಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿ ಮಾತನಾಡಿದ ಅವರು,ಇತ್ತೀಚಿನ ನೆರೆ ಹಾವಳಿಯಿಂದಾಗಿ ಸಂಪುಟ ರಚನೆಯಾದ 24 ಗಂಟೆಯೊಳಗೆ ಸಚಿವರೆಲ್ಲರೂ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಬೇಕೆಂಬ ಸೂಚನೆ ಇದೆ ಎಂದರು.ಮಲಪ್ರಭಾ ಮತ್ತು ಬೆಣ್ಣೆ ಹಳ್ಳಗಳ ಪ್ರವಾಹದಿಂದ ಅಪಾರ ಹಾನಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಬಹುತೇಕ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

ಮನೆ ಸಂಪೂರ್ಣವಾಗಿ ಹಾನಿಯಾಗಿದ್ದರೆ ಪ್ರತಿ ಮನೆಗೆ 5 ಲಕ್ಷ ರೂ ಅಥವಾ ಭಾಗಶಃ ಹಾನಿಯಾದಲ್ಲಿ 25 ಸಾವಿರದಿಂದ 1 ಲಕ್ಷದವರೆಗೆ ನೆರವು ನೀಡಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.ಜಿಲ್ಲಾಡಳಿತದ ಬಳಿ ನೆರೆ ನಿರ್ವಹಣೆಗಾಗಿ 23 ಕೋಟಿ ರೂ. ಇದ್ದು, ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಬೆಳೆಹಾನಿ ಕುರಿತಂತೆ ಸಮೀಕ್ಷೆಯ ನಂತರ ಪರಿಹಾರ ಪ್ರಕಟಿಸಲಾಗುವುದು, ಪರಿಹಾರ ಮತ್ತು ಸಮೀಕ್ಷೆ ಸಂದರ್ಭದಲ್ಲಿ ಗ್ರಾಮಸ್ತರು ತಾಳ್ಮೆ ಹಾಗೂ ಸಂಯಮದಿಂದಿದ್ದು ಸಹಕಾರ ನೀಡುವಂತೆ ಗ್ರಾಮಸ್ಥರಿಗೆ ಸಚಿವರು ಮನವಿ ಮಾಡಿದರು.
ವಾಸನ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮೇವಿನ ಕೊರತೆ ನಿವಾರಣೆಗೂ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಟ್ಟಾರೆಯಾಗಿ ನೆರೆ ಸಂತ್ರಸ್ತರ ಸಂಕಷ್ಟ ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದ ಅವರು, ನಿಯಮಗಳ ಜೊತೆ ಮಾನವೀಯತೆಯಿಂದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿ ಪಂ ಸದಸ್ಯ ರಾಜುಗೌಡ ಕೆಂಚನಗೌಡರ್ , ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಯುಎನ್‌ಐ ಜಿಎಸ್‌ಆರ್ ಎಎಚ್ 2020