Wednesday, Feb 26 2020 | Time 10:15 Hrs(IST)
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
  • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
  • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಸೇತುವೆ ಕೆಳಗೆ ಸುಧಾರಿತ ಸ್ಫೋಟಕ ಪತ್ತೆ , ತಪ್ಪಿದ ದುರಂತ

ನವದೆಹಲಿ, ಜನವರಿ13 (ಯುಎನ್ಐ) ಜಮ್ಮು-ಕಾಶ್ಮೀರದ ಸೋಪೋರ್ ಸೇತುವೆ ಕೆಳಭಾಗದಲ್ಲಿ ಮೂರು ಕೆಜಿಯಷ್ಟು ಐಇಡಿ(ಸುಧಾರಿತ ಸ್ಫೋಟಕ ಸಾಧನ)ಯನ್ನು ಭದ್ರತಾ ಪಡೆ, ಜಮ್ಮು-ಕಾಶ್ಮೀರದ ಪೊಲೀಸರು ಪತ್ತೆಹಚ್ಚಿ ಉಗ್ರರ ದಾಳಿ, ಸಂಚನ್ನು ವಿಫಲಗೊಳಿಸಿದೆ.
ಅಪಾರ ಪ್ರಮಾಣದಲ್ಲಿ ಐಇಡಿ ಪತ್ತೆಯಾದ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿದ್ದು, ಇಡಿ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದು ಶೋಧನಾ ಕಾರ್ಯಾಚರಣೆ ನಡೆಸಿದ್ದು ಇದರಿಂದ ಭಾರಿ ದುರಂತ ತಪ್ಪಿದಂತಾಗಿದೆ. ಐಇಡಿಯನ್ನು ನಿಷ್ಕ್ರಿಯಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
33ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು, ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಮಯದಲ್ಲಿ ಸೇತುವೆ ಕೆಳಗೆ ಸುಮಾರು 3ಕೆಜಿಯಷ್ಟು ಐಇಡಿ ಪತ್ತೆಯಾಗಿರುವುದಾಗಿ ವರದಿ ಹೇಳಿದೆ.
ಐಇಡಿ ಮೂಲಕ ಸ್ಫೋಟ ನಡೆಸುವ ಸಂಚಿನ ಹಿಂದೆ ಕಣಿವೆಯ ಯಾವ ಉಗ್ರ ಸಂಘಟನೆಯ ಪಾತ್ರವಿದೆ ಎಂಬುದನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯುಎನ್ಐ ಕೆಎಸ್ಆರ್ 1605