Tuesday, Nov 12 2019 | Time 04:17 Hrs(IST)
Special Share

ಸೈದ್ಧಾಂತಿಕ ಹೋರಾಟಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿ, ಆರ್ ಎಸ್ ಎಸ್ ಗೆ ರಾಹುಲ್ ಗಾಂಧಿ ಧನ್ಯವಾದ

ಸೈದ್ಧಾಂತಿಕ  ಹೋರಾಟಕ್ಕೆ ಅವಕಾಶ ಕಲ್ಪಿಸಿದ  ಬಿಜೆಪಿ, ಆರ್ ಎಸ್ ಎಸ್ ಗೆ  ರಾಹುಲ್ ಗಾಂಧಿ ಧನ್ಯವಾದ
ಸೈದ್ಧಾಂತಿಕ ಹೋರಾಟಕ್ಕೆ ಅವಕಾಶ ಕಲ್ಪಿಸಿದ ಬಿಜೆಪಿ, ಆರ್ ಎಸ್ ಎಸ್ ಗೆ ರಾಹುಲ್ ಗಾಂಧಿ ಧನ್ಯವಾದ

ನವದೆಹಲಿ, ಜುಲೈ 12(ಯುಎನ್ಐ)- ಸಾರ್ವತ್ರಿಕವಾಗಿ ಸೈದ್ಧಾಂತಿಕ ಹೋರಾಟ ನಡೆಸಲು ತಮಗೆ ಅವಕಾಶ ಹಾಗೂ ನೆಲೆ ಕಲ್ಪಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಹಾಗೂ ಭಾರತೀಯ ಜನತಾಪಕ್ಷಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಧನ್ಯವಾದ ಸಲ್ಲಿಸಿದ್ದಾರೆ.ಬಿಜೆಪಿ/ ಆರ್ ಎಸ್ ಎಸ್ ನಲ್ಲಿರುವ ರಾಜಕೀಯ ವಿರೋಧಿಗಳು ತಮ್ಮ ವಿರುದ್ಧ ದಾಖಲಿಸಿರುವ ಮತ್ತೊಂದು ಪ್ರಕರಣ ಸಂಬಂಧ ನ್ಯಾಯಾಲಯ ಮುಂದೆ ಹಾಜರಾಗಲು ನಾನು ಆಹಮದಾಬಾದ್ ಗೆ ತೆರಳಿದ್ದೇನೆ. ಸಾರ್ವಜನಿಕ ಈ ಸಂಘಟನೆಗಳ ವಿರುದ್ಧ ಸೈದ್ದಾಂತಿಕ ಹೋರಾಟ ನಡೆಸಲು ವೇದಿಕೆ ಹಾಗೂ ಅವಕಾಶ ಕಲ್ಪಿಸಿದ್ದಕ್ಕೆ ಅಭಾರಿಯಾಗಿದ್ದೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಅಜಯ್ ಪಟೇಲ್ ಹೂಡಿರುವ ಮಾನಹಾನಿ ಪ್ರಕರಣ ಸಂಬಂಧ ಮೆಟ್ರೋ ನ್ಯಾಯಾಲಯದ ಮುಂದೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ “ಸತ್ಯ ಮೇವ ಜಯತೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಅಹಮದಾಬಾದ್ ಜಿಲ್ಲಾ ಸಹಕಾರ ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದಲ್ಲಿ ಅಮಾನ್ಯೀಕರಣಗೊಂಡ 500 ರೂ ಹಾಗೂ 1000ರೂ ನೋಟುಗಳನ್ನು ಠೇವಣಿ ಇರಿಸಲಾಗಿದೆ ಎಂದು ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ್ದ ಪೋಸ್ಟ್ ಗಳ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಈ ಮಾನಹಾನಿ ಪ್ರಕರಣ ಹೂಡಲಾಗಿದೆ.

ಸದ್ಯ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ದೇಶಾದ್ಯಂತ 20ಕ್ಕೂ ಹೆಚ್ಚು ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೂ ಮೊದಲು ರಾಹುಲ್ ಗಾಂಧಿ ತಮ್ಮ ವಿರುದ್ಧ ದಾಖಲಾಗಿಸಿರುವ ಪ್ರತ್ಯೇಕ ಮಾನಹಾನಿ ಪ್ರಕರಣಗಳ ಸಂಬಂಧ ಮುಂಬೈ ಹಾಗೂ ಪಾಟ್ನಾ ನ್ಯಾಯಾಲಯಗಳ ಮುಂದೆ ಹಾಜರಾಗಿದ್ದರು.

ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಯನೀಯ ಸೋಲಿನ ಹೊಣೆಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಜಯಸಾಧಿಸಿತ್ತು. ಪ್ರತಿಪಕ್ಷ ಕಾಂಗ್ರೆಸ್ ಕೇವಲ 52 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿತ್ತು.

ಯುಎನ್ಐ ಕೆವಿಆರ್ ಎಸ್ ಎನ್ ಎಸ್ 1622

More News
ಉಪ ಚುನಾವಣೆಯಲ್ಲಿ   ಬಿಜೆಪಿ  ಎಲ್ಲಾ  15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲ್ಲಲೇ ಬೇಕು; ಸದಾನಂದಗೌಡ

11 Nov 2019 | 9:53 PM

ಮಂಗಳೂರು, ನ 11( ಯುಎನ್ಐ)- ಡಿಸೆಂಬರ್ 5 ರಂದು ರಾಜ್ಯದಲ್ಲಿ ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಭಾರಿ ಭರ್ಜರಿ ಜಯ ಸಾಧಿಸಲೇಬೇಕು ಎಂದು ಪಕ್ಷದ ಹಿರಿಯ ನಾಯಕ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೋಮವಾರ ಹೇಳಿದ್ದಾರೆ.

 Sharesee more..

ಲತಾ ಮಂಗೇಶ್ಕರ್ ದೇಹಾರೋಗ್ಯ ಸ್ಥಿರ

11 Nov 2019 | 8:12 PM

 Sharesee more..