Monday, Jan 27 2020 | Time 00:28 Hrs(IST)
National Share

ಸೋನಭದ್ರ ಹಿಂಸಾಚಾರ: ರಾಜ್ಯಸಭೆಯಲ್ಲಿ ಕೋಲಾಹಲ, ಮೂರು ಬಾರಿ ಮುಂದಕ್ಕೆ

ನವದೆಹಲಿ, ಜುಲೈ 22 (ಯುಎನ್‌ಐ) ಉತ್ತರಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿನ ಹಿಂಸಾಚಾರದ ಘಟನೆ ಸೋಮವಾರ ರಾಜ್ಯಸಭೆಯಲ್ಲಿ ಬಾರಿ ಕೋಲಹಾಲ ಮತ್ತು ಆರೋಪ ಮತ್ತು ಪ್ರತ್ಯಾರೋಪಗಳ ಕಾರಣ ಮೂರು ಬಾರಿ ಕಲಾಪ ಮುಂದೂಡಿದ ಪ್ರಸಂಗ ಜರುಗಿತು.

ಬೋಜನ ವಿರಾಮದ ನಂತರ ಸದನ ಸೇರಿದಾಗಲೂ ,ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸದಸ್ಯರು ಸೋನೆಭದ್ರ ವಿಷಯ ಪ್ರಸ್ತಾಪಿಸಿ ಘೋಷಣೆ ಕೂಗುತ್ತಾ ಬಾವಿಗೆ ಆಗಮಿಸಿ ಗದ್ದಲ ಎಬ್ಬಿಸಿದರು.
ಕೋಲಾಹಲದ ಮಧ್ಯೆ, ಉಪಸಭಾಪತಿ ಹರಿವಂಶ್ ಅವರು ಮಾನವ ಹಕ್ಕುಗಳ (ತಿದ್ದುಪಡಿ) ಮಸೂದೆ 2019 ಕುರಿತು ಚರ್ಚೆಗೆ ಕೈಗೆತ್ತಿಕೊಳ್ಳಲು ಪ್ರಯತ್ನಿಸಿ, ಮಸೂದೆ ಮಂಡಿಸಲು ಗೃಹ ಸಚಿವ ನಿತ್ಯಾನಂದ್ ರಾಯ್ ಅವರಿಗೆ ಸೂಚನೆ ನೀಡಿದರು. ಆದರೂ ಸದಸ್ಯರ ಗದ್ದಲ ಕಡಿಮೆಯಾಗಲಿಲ್ಲ .
ಆದರೆ ನಂತರ, ಮಸೂದೆಗೆ ತಿದ್ದುಪಡಿ ಸೂಚಿಸಲು ಸಭಾಪತಿಯವರು ಸಿಪಿಐನ ಬೆನಾಯ್ ವಿಶ್ವಾಮ್ ಅವರಿಗೆ ಸುಚಿಸಿದರು. ಆದರೂ ಸದಸ್ಯರ ಗದ್ದಲ ಕಡಿಮೆಯಾಗದೇ ಯಾರು ಏನು ಹೇಳುತ್ತಿದ್ದಾರೆ ಎಂಬುದು ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿ ಸದನ ಗೊಂದಲದ ಗೂಡಾಯಿತು.
ನಂತರ ಅಧ್ಯಕ್ಷರು ಕಾಂಗ್ರೆಸ್ ನ ವಿವೇಕ್ ತಂಖಾಗೆ ಮಸೂದೆಯ ಬಗ್ಗೆ ಚರ್ಚೆಪ್ರಾರಂಭಿಸುವಂತೆ ಸೂಚಿಸಿದರು ಆದರೆ ಅವರು ಅದಕ್ಕೆ ನಿರಾಕರಿಸಿದ ನಂತರ, ಬಿಜೆಪಿಯ ಪ್ರಭಾತ್ ಅವರು ಮಸೂದೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.
ಆದರೆ, ಗದ್ದಲದ ಕಾರಣ ಸದನದಲ್ಲಿ ಏನು ಕೇಳಿಸದ ಸ್ಥಿತಿ ನಿರ್ಮಾಣವಾಯಿತು. ಕೊನೆಗೆ
ಪ್ರತಿಪಕ್ಷಗಳ ಕೋಲಾಹಲದ ನಡುವೆ ಸಭಾಪತಿಯವರು ಸದನವನ್ನು ಮತ್ತೆ ಮೂರನೇ ಭಾರಿಗೆ ಮುಂದೂಡಿದರು.
ಇದಕ್ಕೂ ಮುನ್ನ ಸೋನಭದ್ರ ಹಾಗೂ ಕರ್ನಾಟಕದ ರಾಜಕೀಯ ಬಿಕ್ಕಟ್ಟು ಮತ್ತು ಇತರ ವಿಷಯ ಕುರಿತು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿರೋಧಿ ಸದಸ್ಯರು ವಿಷಯ ಪ್ರಸ್ತಾಪಿಸಿ ಭಾರಿ ಕೋಲಹಲಕ್ಕೆ ಕಾರಣವಾದರು. ಹೀಗಾಗಿ ಕಲಾಪದ ಬಹುಪಾಲು ಸಮಯ ಗದ್ದಲಕ್ಕೆ ಬಲಿಯಾಯಿತು.
ಯುಎನ್ಐ ಕೆಎಸ್ ಆರ್ ಜಿಎಸ್ಆರ್ 1630
More News
ಗಣರಾಜ್ಯೋತ್ಸವ ಶುಭಾಷಯ ಕೋರಿದ ಮಾಲ್ಡೀವ್ಸ್‌ ಅಧ್ಯಕ್ಷ, ಲಂಕಾ ಪ್ರಧಾನಿಗೆ ಮೋದಿ ಕೃತಜ್ಞತೆ

ಗಣರಾಜ್ಯೋತ್ಸವ ಶುಭಾಷಯ ಕೋರಿದ ಮಾಲ್ಡೀವ್ಸ್‌ ಅಧ್ಯಕ್ಷ, ಲಂಕಾ ಪ್ರಧಾನಿಗೆ ಮೋದಿ ಕೃತಜ್ಞತೆ

26 Jan 2020 | 7:08 PM

ನವದೆಹಲಿ, ಜ.26: (ಯುಎನ್ಐ) ದೇಶದ 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶುಭಾಶಯ ಕೋರಿದ ಮಾಲ್ಡೀವಿಯನ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸಾಲಿಹ್ ಮತ್ತು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಧನ್ಯವಾದ ಅರ್ಪಿಸಿದ್ದಾರೆ.

 Sharesee more..
ರಾಷ್ಟ್ರಪತಿ ಧ್ವಜಾರೋಹಣ, ಸೇನಾಶಕ್ತಿ ಬೃಹತ್ ಅನಾವರಣ

ರಾಷ್ಟ್ರಪತಿ ಧ್ವಜಾರೋಹಣ, ಸೇನಾಶಕ್ತಿ ಬೃಹತ್ ಅನಾವರಣ

26 Jan 2020 | 6:46 PM

ನವದೆಹಲಿ, ಜನವರಿ 26 (ಯುಎನ್ಐ) ಗಣರಾಜ್ಯ ದಿನದ ಅಂಗವಾಗಿ ರಾಷ್ಟ್ರರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಧ್ವಜಾರೋಹಣ ನೆರವೇರಿಸಿದರು.

 Sharesee more..
ಗಣರಾಜ್ಯೋತ್ಸವ: ದೇಶವಾಸಿಗಳಿಗೆ ಉಪರಾಷ್ಟ್ರಪತಿ- ಪ್ರಧಾನಿ ಶುಭಾಶಯ

ಗಣರಾಜ್ಯೋತ್ಸವ: ದೇಶವಾಸಿಗಳಿಗೆ ಉಪರಾಷ್ಟ್ರಪತಿ- ಪ್ರಧಾನಿ ಶುಭಾಶಯ

26 Jan 2020 | 6:28 PM

ನವದೆಹಲಿ, ಜನವರಿ 26 (ಯುಎನ್ಐ) 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಉಪರಾಷ್ಟ್ರ ಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಹೇಳಿದ್ದಾರೆ.

 Sharesee more..