Monday, Jun 1 2020 | Time 02:33 Hrs(IST)
Special Share

ಸಿನಿಮಾ ಚಿತ್ರೀಕರಣಗಳಿಗೆ ಅನುಮತಿ, ಸದ್ಯದಲ್ಲೇ ತೀರ್ಮಾನ; ಕೇಂದ್ರ ಗೃಹ ಖಾತೆ ರಾಜ್ಯಸಚಿವ ಕಿಶನ್ ರೆಡ್ಡಿ

ಹೈದ್ರಾಬಾದ್, ಮೇ ೨೩(ಯುಎನ್‌ಐ) ದೇಶದಲ್ಲಿ ಸಿನಿಮಾ ಚಿತ್ರೀಕರಣಗಳಿಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಅನುಮತಿ ಕಲ್ಪಿಸಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಷನ್ ರೆಡ್ಡಿ ಶನಿವಾರ ತಿಳಿಸಿದ್ದಾರೆ.
ಸಿನಿಮಾ ರಂಗದ ಪ್ರಮುಖರೊಂದಿಗೆ ಸಚಿವ ಕಿಷನ್ ರೆಡ್ಡಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಿನಿಮಾ ಚಿತ್ರೀಕರಣ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು. ಅಂತರಾಷ್ಟ್ರೀಯ ಸಿನಿಮಾ ಪೈರಸಿಯ ಬಗ್ಗೆ ಸಭೆ ನಡೆಸಿ ಹೊಸ ಕಾನೂನು ರೂಪಿಸಲಾಗುವುದು. ಓಟಿಟಿ ಯಲ್ಲಿ ಬಿಡುಗಡೆಗೊಳ್ಳುವ ಸಿನಿಮಾಗಳಿಗೆ ಸೆನ್ಸಾರ್ ಕಡ್ಡಾಯಗೊಳಿಸುವ ಅಲೋಚನೆ ಸರ್ಕಾರ ಮಾಡುತ್ತಿದೆ ಎಂದರು. ಜಮ್ಮು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಸಿನಿಮಾಗಳ ಚಿತ್ರೀಕರಣಗಳಿಗೆ ಅನುಮತಿ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಅದೇರೀತಿ ದೇಶಾದ್ಯಂತ ಒಂದೇ ಬಾರಿ ಥೀಯೇಟರ್ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಯುಎನ್‌ಐ ಕೆವಿಆರ್ ೦೮೩೯