Wednesday, May 27 2020 | Time 01:56 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
business economy Share

ಸೆನ್ಸೆಕ್ಸ್ ಸ್ಥಿರ: ದಿನದಂತ್ಯಕ್ಕೆ 38,730.82ರಲ್ಲಿ

ಮುಂಬೈ, ಜು 1 9 (ಯುಎನ್‌ಐ)- ಮುಂಬೈ ಷೇರು ಪೇಟೆ ಸೂಚ್ಯಂಕ, ಸೆನ್ಸೆಕ್ಸ್ ಮಂಗಳವಾರ ಇಂಧನ, ದೂರಸಂಪರ್ಕ ಮತ್ತು ವಿದ್ಯುತ್ ವಲಯಗಳ ಷೇರುಗಳ ಹೆಚ್ಚಿನ ಖರೀದಿ ನಡುವೆಯೂ ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದ ದಿನದ ಅಂತ್ಯಕ್ಕೆ 10.25 ಅಂಕಗಳ ಅಲ್ಪ ಏರಿಕೆ ಕಂಡು
38,730.82ರಲ್ಲಿ ಸ್ಥಿರವಾಗಿ ವಹಿವಾಟು ಮುಗಿಸಿದೆ.
ರಾಷ್ಟ್ರೀಯ ಷೇರು ವಿನಿಯಮ ಕೇಂದ್ರ (ಎನ್ಎಸ್ಇ) 2.70 ಅಂಕ ಕುಸಿದು
11,555.90 ರಲ್ಲಿತ್ತು. ಅಮೆರಿಕದ ದರ ಕಡಿತದ ಭರವಸೆಗಳು ಕಡಿಮೆಯಾಗಿದ್ದರಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ದುರ್ಬಲ ವಹಿವಾಟು ನಡೆದಿದ್ದು, ದೇಶೀಯ ಮಾರುಕಟ್ಟೆಗಳ ಮೇಲೂ ಇದು ಪರಿಣಾಮ ಬೀರಿದೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 34 ಅಂಕ ಏರಿಕೆ ಕಂಡು 38,754.47 ಕ್ಕೆ ತಲುಪಿತ್ತು. ನಂತರ ದಿಢೀರನೆ ಕುಸಿತದತ್ತ ಸಾಗಿತ್ತು. ಮಧ್ಯಾಹ್ನ ವಹಿವಾಟಿನಲ್ಲಿ ಸ್ವಲ್ಪ ಚೇತರಿಸಿಕೊಂಡು ದಿನದ ಅಂತ್ಯಕ್ಕೆ
10.25 ಅಂಕ ಇಳಿಕೆಯೊಂದಿಗೆ 38,730.82 ಕ್ಕೆ ತಲುಪಿತು.
ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 38,814.23 ಹಾಗೂ 38,435.87 ರ ಮಟ್ಟದಲ್ಲಿ ಏರಿಳಿತ ಕಂಡಿತು.
ಬಜಾಜ್ ಫೈನಾನ್ಸ್, ಸನ್ ಫಾರ್ಮಾ, ಹೀರೋಮೊಟೊ ಕಾರ್ಪ್, ಎಲ್ ಅಂಡ್‍ ಟಿ ಮತ್ತು
ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಜೊತೆಗೆ ಇಂಧನ,ಆರೋಗ್ಯ ರಕ್ಷಣೆ, ತೈಲ ಮತ್ತು ಅನಿಲ ಹಾಗೂ ರಿಯಾಲ್ಟಿ ವಲಯ ಸೂಚ್ಯಂಕಗಳ ಅಲ್ಪ ಏರಿಕೆಯು ಮಾರುಕಟ್ಟೆ ಭಾವನೆಗಳನ್ನು ಬೆಂಬಲಿಸಿತು.
ಯುಎನ್‍ಐ ಎಸ್‍ಎಲ್‍ಎಸ್ ಕೆವಿಆರ್ 1758
More News
ಕೊವಿಡ್‍-19 ಆರ್ಥಿಕ ಬಿಕ್ಕಟ್ಟು ನಿರ್ವಹಣೆಗೆ ಆರ್‌ಬಿಐ ನೀತಿ ಪ್ರಕಟಣೆ ಸಮಯೋಚಿತ-: ಎಸ್‌ಬಿಐ ಅಧ್ಯಕ್ಷ ರಜನೀಶ್‍ ಕುಮಾರ್‍

ಕೊವಿಡ್‍-19 ಆರ್ಥಿಕ ಬಿಕ್ಕಟ್ಟು ನಿರ್ವಹಣೆಗೆ ಆರ್‌ಬಿಐ ನೀತಿ ಪ್ರಕಟಣೆ ಸಮಯೋಚಿತ-: ಎಸ್‌ಬಿಐ ಅಧ್ಯಕ್ಷ ರಜನೀಶ್‍ ಕುಮಾರ್‍

22 May 2020 | 9:05 PM

ಕೋಲ್ಕತಾ, ಮೇ 22 (ಯುಎನ್‌ಐ) ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ನಿರ್ವಹಣೆಗೆ ರಿಸರ್ವ್‍ ಬ್ಯಾಂಕ್‍ ಪ್ರಕಟಿಸಿರುವ ನೀತಿ ಸಮಯೋಚಿತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

 Sharesee more..

ಮೇಕ್‌ಇನ್‌ ಇಂಡಿಯಾದ ಇ-ಸ್ಕೂಟರ್‌ ʼಒಕಿ100ʼ

22 May 2020 | 12:02 PM

 Sharesee more..

ಕೋವಿಡ್-19 ನಿಯಂತ್ರಣಕ್ಕೆ ಹಂಗರ್ ಬಾಕ್ಸ್ ಪರಿಹಾರ

22 May 2020 | 12:00 PM

 Sharesee more..