Monday, Sep 16 2019 | Time 06:14 Hrs(IST)
business economy Share

ಸೆನ್ಸೆಕ್ಸ್ 792 ಅಂಕ ಇಳಿಕೆ

ಮುಂಬೈ, ಜುಲೈ 8 (ಯುಎನ್ಐ) ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರದ ವಹಿವಾಟಿನ ಅಂತ್ಯಕ್ಕೆ 792 ಅಂಕ ಕುಸಿದಿದೆ.
ಸೆನ್ಸೆಕ್ಸ್ 792.82 ಅಂಕ ಇಳಿಕೆ ಕಂಡು 38,720.57 ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ನಿಫ್ಟಿ ಸಹ 252.55 ಅಂಕ ಇಳಿಕೆಯಾಗಿ 11,558.60 ಯಲ್ಲಿತ್ತು.
ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 39,476.38 ಮತ್ತು 38,605.48.
ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,771.90 ಮತ್ತು 11,523.30.
ಬಿಎಸ್‌ಇ ಅಡಿ 575 ಕಂಪೆನಿ ಷೇರುಗಳ ಮೌಲ್ಯ ಹೆಚ್ಚಾದರೆ, 1950 ಕಂಪೆನಿ ಷೇರುಗಳ ಮೌಲ್ಯ ಇಳಿಕೆಯಾಗಿದೆ. 144 ಕಂಪೆನಿ ಷೇರುಗಳ ಮೌಲ್ಯ ಯಥಾಸ್ಥಿತಿಯಲ್ಲಿದೆ.
ಕಳೆದ ಶುಕ್ರವಾರ ಮಂಡನೆಯಾದ ಕೇಂದ್ರ ಬಜೆಟ್ ಹೂಡಿಕೆದಾರರಲ್ಲಿ ಉತ್ಸಾಹ ತರದ ಪರಿಣಾಮ ಬಜೆಟ್ ಮಂಡನೆ ನಂತರ ಸತತ ಎರಡನೇ ದಿನ ವಹಿವಾಟು ಇಳಿಕೆ ಕಂಡಿದೆ. ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚುವರಿ ಸರ್ಚಾರ್ಜ್‌, ಅಲ್ಪಸಂಖ್ಯಾತ ಹೂಡಿಕೆ ಮಿತಿ ಶೇ 25 ರಿಂದ ಶೇ 35 ಕ್ಕೆ ಹೆಚ್ಚಳ ಮೊದಲಾದವುಗಳ ಪರಿಣಾಮ ಷೇರು ಪೇಟೆ ಕುಸಿದಿದೆ.
ಯುಎನ್‌ಐ ಜಿಎಸ್ಆರ್ ಕೆಎಸ್‌ಆರ್ 1851
More News

ವಿದೇಶಿ ವಿನಿಮಯ 1 ಶತಕೋಟಿ ಡಾಲರ್‌ ಏರಿಕೆ

15 Sep 2019 | 12:27 PM

 Sharesee more..
ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

ಏಸುಸ್ ಸಂಸ್ಥೆಯ 'ಎಕ್ಸ್‌ಕ್ಲ್ಯೂಸಿವ್ ಸ್ಟೋರ್' ಬೆಂಗಳೂರಿನಲ್ಲಿ ಆರಂಭ

13 Sep 2019 | 7:11 PM

ಬೆಂಗಳೂರು, ಸೆ 13 (ಯುಎನ್ಐ) ತಂತ್ರಜ್ಞಾನ ದಿಗ್ಗಜ ಏಸುಸ್ ಸಂಸ್ಥೆಯು ಅತ್ಯಾಧುನಿಕ ಮಳಿಗೆಯನ್ನು ನಗರದ ಕೋರಮಂಗಲದಲ್ಲಿ ತೆರೆಯಲಾಗಿದ್ದು, ಸಂಸ್ಥೆಯ ರಾಷ್ಟ್ರೀಯ ಮಾರಾಟ ಮುಖ್ಯಸ್ಥ ಜಿಗ್ನೆಶ್ ಭಾವ್ಸರ್ ಮತ್ತು ಮಳಿಗೆಯ ಮಾಲೀಕ ಗೌರವ್ ಡಿ ಜೈನ್ ಶುಕ್ರವಾರ ಉದ್ಘಾಟಿಸಿದರು,

 Sharesee more..