Saturday, Jul 4 2020 | Time 11:02 Hrs(IST)
  • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
  • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
  • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
  • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
  • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
  • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
  • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
  • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
  • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
Sports Share

ಸೂಪರ್ ಡಿವಿಜನ್ ಫುಟ್ಬಾಲ್ :ಬೆಂಗಳೂರು ಈಗಲ್ಸ್ ಗೆ ಸೋಲು

ಬೆಂಗಳೂರು, ನ. 20 (ಯುಎನ್ಐ)- ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಜನ್ ಫುಟ್ಬಾಲ್ ಲೀಗ್ ನಲ್ಲಿ ಬೆಂಗಳೂರು ಈಗಲ್ಸ್ ತಂಡ, ಬಿಎಫ್ ಸಿ ವಿರುದ್ಧ ಸೋಲು ಕಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್ ಸಿ ತಂಡ ಭರ್ಜರಿ ಪ್ರದರ್ಶನ ನೀಡಿತು. ಮೊದಲಾವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ.

ಎರಡನೇ ಅವಧಿಯ ಆರಂಭದಲ್ಲೇ ಬಿಎಫ್ ಸಿ ತಂಡ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ದಾಖಲಿಸಿತು. ಕೊನೆಯ ಕ್ಷಣದವರೆಗೂ ಗೋಲಿನ ಸಂಖ್ಯೆಯನ್ನು ಸಮನಾಗಿಸುವ ಈಗಲ್ಸ್ ಆಸೆ ಕೈಗೂಡಲಿಲ್ಲ. “ಎ” ಡಿವಿಜನ್ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ 2-1 ರಿಂದ ಬೆಂಗಳೂರು ಗನರ್ಸ್ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ಆಯುಷ್ (30), ಕಿರಣ್ (49) ಗೋಲು ದಾಖಲಿಸಿದರು. ಗನರ್ಸ್ ಪರ ವಿಜಯ್ (19) ಸೋಲಿನಲ್ಲೂ ಮಿಂಚಿದರು.

ಇನ್ನೊಂದು ಪಂದ್ಯದಲ್ಲಿ ಜವಾಹರ್ ಯೂನಿಯನ್ 2-1 ರಿಂದ ಡೆಕ್ಕನ್ ತಂಡವನ್ನು ಮಣಿಸಿತು.

ಯುಎನ್ಐ ವಿಎನ್ಎಲ್ 2338