Monday, Jun 1 2020 | Time 02:06 Hrs(IST)
Sports Share

ಸ್ಪರ್ಧಾ ವಲಯದಲ್ಲಿ 60 ವರ್ಷ ಮೇಲ್ಪಟ್ಟ ಅಧಿಕಾರಿಗಳಿಗೆ ಪ್ರವೇಶವಿಲ್ಲ

ನವದೆಹಲಿ, ಮೇ 22 (ಯುಎನ್ಐ)
ದೇಶದಲ್ಲಿ ಬಾಕ್ಸಿಂಗ್ ಟೂರ್ನಿಗಳು ಪುನರಾರಂಭವಾದಾಗ ಹವಾನಿಯಂತ್ರಿತ ಸ್ಥಳಗಳಿಗೆ ಬದಲಾಗಿ ಉತ್ತಮ ಗಾಳಿ ಬೀಸುವ ಸ್ಥಳದಲ್ಲಿ ಪ್ರೇಕ್ಷಕರನ್ನು ಹೊರಗಿಟ್ಟು ಆಯೋಜಿಸಲು ಉದ್ದೇಶಿಸಲಾಗಿದ್ದು, ಕೊರೊನಾ ವೈರಸ್ ಸೋಂಕು ಹರಡುವ ಆತಂಕದಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಅಧಿಕಾರಿಗಳನ್ನು ಸ್ಪರ್ಧಾ ವಲಯದ ಒಳಭಾಗದ ಪ್ರವೇಶಕ್ಕೆ ನಿರಾಕರಿಸಲಾಗಿದೆ.
ಕ್ರೀಡಾಪಟುಗಳ ತರಬೇತಿ ಮತ್ತು ಸ್ಪರ್ಧೆಗಳ ಪುನರಾರಂಭಕ್ಕೆ ತನ್ನ 19 ಪುಟಗಳ ಪ್ರಮಾಣಿತ ಕಾರ್ಯವಿಧಾನ (ಎಸ್ ಒಪಿ) ಕರಡಿನಲ್ಲಿ ಭಾರತದ ಕ್ರೀಡಾ ಪ್ರಾಧಿಕಾರ ಸೂಚಿಸಿದಂತೆಯೇ ಆರೋಗ್ಯ ಶಿಷ್ಟಾಚಾರಗಳನ್ನು ಭಾರತೀಯ ಬಾಕ್ಸಿಂಗ್ ಒಕ್ಕೂಟ ಸಹ ಕಡ್ಡಾಯಗೊಳಿಸಿದೆ.
ಆದರೆ ಒಂದು ಪುಟದಲ್ಲಿ ರಾಷ್ಟ್ರೀಯ ಸರ್ಕಿಟ್ ನಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳು ಪುನರಾರಂಭಿಸಿದ ವೇಳೆ ಅನುಸರಿಸಬೇಕಾದ ಶಿಷ್ಟಾಚಾರಗಳನ್ನು ತಿಳಿಸಲಾಗಿದೆ.
'' ಮುಚ್ಚಿದ ಬಾಗಿಲು ಒಳಗೆ ಸ್ಪರ್ಧೆಗಳು ನಡೆಯಲಿದ್ದು, ಸ್ಥಳಕ್ಕೆ ಸೂಕ್ತವಾದಂತ ಸೀಮಿತ ಸಿಬ್ಬಂದಿಗೆ ಮಾತ್ರ ಅನುಮತಿ ನೀಡುವ ಮೂಲಕ ಸಹಾಯಕರು ಮತ್ತು ಸ್ವಯಂಸೇವಕರ ಸಂಖ್ಯೆಯನ್ನು ಕಡಿತಗೊಳಿಸಬೇಕು, '' ಎನ್ನುವ ಕುರಿತು ಭಾರತೀಯ ಬಾಕ್ಸಿಂಗ್ ಒಕ್ಕೂಟಕ್ಕೆ ನೀಡಲಾಗಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
'' ಸ್ಪರ್ಧಾ ಸ್ಥಳದಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯುವುದರಿಂದ ಸ್ಥಳಕ್ಕೆ ಉತ್ತಮ ಗಾಳಿ ಬರಲಿದೆ. ಹವಾನಿಯಂತ್ರಣಗಳು ಸೋಂಕಿನ ಹರಡುವಿಕೆಗೆ ಸಹಾಯ ಮಾಡುವುದರಿಂದ ಅವುಗಳನ್ನು ಬಳಸದಿರುವಂತೆ,'' ಎಸ್‌ಒಪಿ ಹೇಳಿದೆ.
ಪ್ರಸ್ತುತ ಯಾವುದೇ ಸ್ಪರ್ಧೆಗಳಿಲ್ಲ. ಆದರೆ ಬಿಎಫ್‌ಐ ತನ್ನ ರಾಷ್ಟ್ರೀಯ ಟೂರ್ನಿಗಳನ್ನು ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ನಲ್ಲಿ ಆಯೋಜಿಸಲು ಬಯಸಿದೆ. ನಂತರ ಏಷ್ಯನ್ ಚಾಂಪಿಯನ್‌ಷಿಪ್‌ ಗಳು ಡಿಸೆಂಬರ್‌ನಲ್ಲಿ ನಡೆಯಲಿವೆ.
" 60 ವರ್ಷ ಮತ್ತು ಮೇಲ್ಪಟ್ಟ ಅಧಿಕಾರಿಗಳಿಗೆ ಸ್ಪರ್ಧೆಯ ರಂಗಕ್ಕೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಏಕೆಂದರೆ ಅವರು ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ," ಎಂದು ಮತ್ತೊಂದು ಮಾರ್ಗಸೂಚಿ ತಿಳಿಸಿದೆ.
ಯುಎನ್ಐಆರ್ ಕೆ 1906