Monday, Jul 22 2019 | Time 07:04 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Karnataka Share

ಸ್ಪೀಕರ್ ಎದುರು ಇಂದು ಮೂವರು ಶಾಸಕರು ಹಾಜರು ಸಾಧ್ಯತೆ

ಬೆಂಗಳೂರು, ಜು 12 (ಯುಎನ್ಐ) ರಾಜೀನಾಮೆ ನೀಡಿರುವ ಮೂವರು ಅತೃಪ್ತ ಶಾಸಕರು ಇಂದು ಸ್ಪೀಕರ್ ರಮೇಶ್ ಕುಮಾರ್ ಎದುರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ರಾಜೀನಾಮೆ ಕ್ರಮ ಬದ್ಧವಾಗಿರುವ ಪ್ರತಾಪ್ ಗೌಡ ಪಾಟೀಲ್, ಆನಂದ್ ಸಿಂಗ್ ಮತ್ತು ನಾರಾಯಣಗೌಡ ವಿಚಾರಣೆಗೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಸ್ಪೀಕರ್ ಕಚೇರಿಗೆ ಆಗಮಿಸಬೇಕಾಗಿದೆ.
ರಾಜೀನಾಮೆಗೆ ಕಾರಣ, ನಿಮ್ಮ ಮೇಲೆ ಯಾರಾದ್ದಾದರೂ ಒತ್ತಡವಿದೇಯೇ, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೀರಾ ಎಂದು ಸ್ಪೀಕರ್ ಅವರನ್ನು ಪ್ರಶ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ಗಂಟೆಗೆ ಆನಂದ್ ಸಿಂಗ್, 4 ಗಂಟೆಗೆ ನಾರಾಯಣಗೌಡ ಹಾಗೂ 4.30ಕ್ಕೆ ಪ್ರತಾಪ್ ಗೌಡ ಅವರಿಗೆ ಹಾಜರಾಗುವಂತೆ ಸ್ಪೀಕರ್ ರಮೇಶ್ ಕುಮಾರ್ ಸೂಚನೆ ನೀಡಿದ್ದರು. ಅದರಂತೆ ಇಂದು ಅವರು ಹಾಜರಾಗಲಿದ್ದಾರೆ.
ರಾಜೀನಾಮೆ ಅಂಗೀಕಾರ ನಿಧಾನವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸುಪ್ರೀಂ ಮೊರೆಹೋಗಿದ್ದರು. ಗುರುವಾರ ವಿಚಾರಣೆಯಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುಪ್ರೀಂ ನಿರ್ದೇಶನದಂತೆ 10 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಇಂದು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಯುಎನ್ಐ ವಿಎನ್‌ ಎಎಚ್ 1218