Sunday, Dec 8 2019 | Time 13:58 Hrs(IST)
 • ರಾಮನಗರ ಕ್ಲೀನಿಂಗ್ ಮಾಡಲಿ, ಆಲ್‌ ದಿ ಬೆಸ್ಟ್‌ : ಡಿಸಿಎಂಗೆ ಡಿ ಕೆ ಶಿವಕುಮಾರ್ ಟಾಂಗ್
 • ಗಾಂಧಿ ಕೊನೆ ಕೈ ಬರಹದ ಹಸ್ತಪ್ರತಿ ಹರಾಜು !
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
 • ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ
Karnataka Share

ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್

ಬೆಂಗಳೂರು, ಜು 22 (ಯುಎನ್‍ಐ) ಶಾಸಕರ ರಾಜೀನಾಮೆ ಪ್ರಕರಣ ಕುರಿತು ಸರ್ವೋಚ್ಛ ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮುಂದೂಡಬೇಕು. ಇದು ಒಂದು ಸರ್ಕಾರದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದ ಶಾಸಕಾಂಗ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರ ರಚಿಸಲು ಹಾಗೂ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ಸಿಗಬಾರದು. ರಾಜ್ಯಪಾಲರು ಈಗಾಗಲೇ ಮಧ್ಯಪ್ರವೇಶ ಮಾಡಿದ್ದು, ಸರ್ವೋಚ್ಚ ನ್ಯಾಯಾಲಯವೂ ನಮ್ಮ ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಪ್ರಿಂಕೋರ್ಟ್ ಶಾಸಕರಿಗೆ ಸದನದಲ್ಲಿ ಹಾಜರಿರಲೇಬೇಕೆಂದು ಒತ್ತಾಯ ಮಾಡುವ ಹಾಗಿಲ್ಲ ಎಂದು ಹೇಳಿತ್ತು. ಆದರೆ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿಪ್ ಉಲ್ಲಂಘನೆ ಬಗ್ಗೆ ಸದನದಲ್ಲಿ ಕ್ರಿಯಾಲೋಪ ಎತ್ತಿದ್ದನ್ನು ಸ್ಪೀಕರ್ ರಮೇಶ್ ಕುಮಾರ್ ಎತ್ತಿಹಿಡಿದು ರೂಲಿಂಗ್ ನೀಡಿದ್ದಾರೆ. ಶಾಸಕರು ವಿಪ್ ಉಲ್ಲಂಘನೆ ಮಾಡಿರುವ ವಿಚಾರದಲ್ಲಿ ಸ್ಪಷ್ಟನೆ ಸಿಗಬೇಕಿದೆ. ಸ್ಪೀಕರ್ ರೂಲಿಂಗ್ ನೀಡಿದ ಮೇಲೆ ನಮ್ಮ ಶಾಸಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಕೆಲವು ಶಾಸಕರು ಬೇರೆ ಊರಿನಲ್ಲಿದ್ದಾರೆ. ಅವರಿಗೂ ಈ ಬಗ್ಗೆ ಮಾಹಿತಿ ಕೊಡಬೇಕಾಗಿದೆ. ಹೀಗಾಗಿ ವಿಶ್ವಾಸಮತ ಒಂದು ದಿನ ತಡವಾದಲ್ಲಿ ಆಕಾಶವೇನೂ ಕಳಚಿಬೀಳುವುದಿಲ್ಲ. ಸುಪ್ರೀಕೋರ್ಟ್ ಸಹ ಸದನದಲ್ಲಿ ನಡೆಯುತ್ತಿರುವ ಕಲಾಪದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಕೋರ್ಟ್ ಕೂಡ ಆತುರದ ನಿರ್ಧಾರ ಪ್ರಕಟಿಸುತ್ತಿಲ್ಲ ಎಂದರು.
ಸಂವಿಧಾನದ 10 ನೇ ಪರಿಚ್ಛೇದದನ್ವಯ ಸಂವಿಧಾನದಲ್ಲಿರುವ ಅವಕಾಶವನ್ನು ಕೇಳಿದ್ದು, ಇದು ಅತೃಪ್ತರಿಗೆ ರಕ್ಷಣೆ ಎಂದು ಭಾವಿಸುವ ಹಾಗಿಲ್ಲ. ಶಾಸಕರಾದ ನಾಗೇಶ್ ಹಾಗೂ ಆರ್. ಶಂಕರ್ ಸೋಮವಾರವೇ ವಿಶ್ವಾಸ ಮತ ಯಾಚನೆ ನಡೆಯಬೇಕು ಎಂದು ಕೇಳಿಕೊಂಡಿದ್ದು, ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಇದು ವಿಚಾರಣೆಗೆ ಬರಲಿದೆ ಎಂದರು.
ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಶಾಸಕರಿಗೆ ವಿಪ್ ಅನ್ವಯ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಬೇಕಿದೆ. ಹೀಗಾಗಿ ಸರ್ವೋಚ್ಛ ನ್ಯಾಯಾಲಯದಿಂದ ತೀರ್ಪು ಹೊರಬರುವವರೆಗೆ ವಿಶ‍್ವಾಸಮತ ಯಾಚನೆ ಮಾಡುವುದು ಸರಿಯಲ್ಲ ಎಂದರು.
ಅತೃಪ್ತ ಶಾಸಕರನ್ನು ಬಿಜೆಪಿ ನಾಯಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸ್ಪೀಕರ್ ನೀಡಿರುವ ರೂಲಿಂಗ್ ನಿಂದಾಗಿ ಶಾಸಕರಿಗೆ ವಿಪ್ ಅನ್ವಯವಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಶಾಸಕರು ವಿಪ್ ಉಲ್ಲಂಘಿಸಿದರೆ ಅವರ ಸದಸ್ಯತ್ವ ಅನರ್ಹಗೊಳ್ಳುತ್ತದೆ. ಶಾಸಕ ಸ್ಥಾನವೇ ಹೋದ ಮೇಲೆ ಬಿಜೆಪಿಯವರು ಅವರನ್ನು ಬೀದಿಪಾಲು ಮಾಡುವುದು ಖಚಿತ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ಶಾಸಕರು ತಮ್ಮ ರಾಜೀನಾಮೆ ಹಿಂಪಡೆಯಬೇಕು ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದರು.
ಯುಎನ್‍ಐ ಯುಎಲ್ ಎಸ್‍ಎಂಆರ್ ವಿಎನ್ 1755