Sunday, Aug 18 2019 | Time 05:14 Hrs(IST)
Karnataka Share

ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರ ಎತ್ತಿ ಹಿಡಿದಿದೆ : ಡಿ ಕೆ ಶಿವಕುಮಾರ್

ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರ ಎತ್ತಿ ಹಿಡಿದಿದೆ : ಡಿ ಕೆ ಶಿವಕುಮಾರ್
ಸುಪ್ರೀಂಕೋರ್ಟ್ ಸ್ಪೀಕರ್ ಅಧಿಕಾರ ಎತ್ತಿ ಹಿಡಿದಿದೆ : ಡಿ ಕೆ ಶಿವಕುಮಾರ್

ಬೆಂಗಳೂರು, ಜುಲೈ 17 (ಯುಎನ್ಐ) ಸ್ಪೀಕರ್ ಅಧಿಕಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ನ್ಯಾಯಾಲಯದ ಆದೇಶವನ್ನು ಶಾಸಕನಾಗಿ, ಜನ ಸಾಮಾನ್ಯನಾಗಿ ಸ್ವಾಗತಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.





ಬಂಡಾಯ ಎದ್ದಿರುವ ಶಾಸಕರು ತಮ್ಮ ಮಿತ್ರರು ಎಂದು ಹೇಳಿರುವ ಡಿಕೆಶಿ ರಾಜೀನಾಮೆ ಕೊಡುವ ಮುನ್ನ ತಮ್ಮ ಕ್ಷೇತ್ರ ಹಾಗೂ ಬೆಳೆಸಿದ ಪಕ್ಷದ ಬಗ್ಗೆ ಆಲೋಚಿಸುವಂತೆ ಮನವಿ ಮಾಡಿದ್ದಾರೆ. ಒಮ್ಮೆ ಅನರ್ಹರಾದರೆ ಮತ್ತೆ ಸಚಿವ ಸ್ಥಾನ ಸಿಗುವುದಿಲ್ಲ. ಮತದಾರರು, ಪಕ್ಷ ಹಾಗೂ ಜನರಿಗಾಗಿ ವಾಪಸ್ ಸದನಕ್ಕೆ ಹಾಜರಾಗುವಂತೆ ಶಾಸಕ ಮಿತ್ರರಲ್ಲಿ ಅವರು ಕೋರಿದ್ದಾರೆ.



ಶಾಸಕರು ಸದನಕ್ಕೆ ಹಾಜರಾಗುವುದು ಅಥವಾ ಗೈರಾಗುವುದು ಅವರ ವೈಯಕ್ತಿಕ ವಿಚಾರವಾದರೂ ಯಾವುದೇ ಪಕ್ಷಕ್ಕಾದರೂ ವಿಪ್ ಜಾರಿ ಮಾಡುವ ಹಕ್ಕಿದೆ ಎಂದು ತೆಲಂಗಾಣ, ಆಂಧ್ರಪ್ರದೇಶಗಳ ಘಟನೆಯನ್ನು ನೆನಪು ಮಾಡಿಕೊಟ್ಟರು.



ಯುಎನ್ಐ ಜಿಎಸ್‌ಆರ್ ಕೆವಿಆರ್ 1258