Friday, Dec 13 2019 | Time 10:48 Hrs(IST)
  • ಡಯಾಲಿಸಿಸ್ ಉತ್ಪನ್ನ ಪೂರೈಕೆ: ಮೆಡಿಕಾಬಜಾರ್ - ಪ್ರೋ ಮೆಡಿಕಲ್ ಇಂಡಿಯಾ ಒಪ್ಪಂದ
  • ಪೌರತ್ವ ಮಸೂದೆ, ಕೇಂದ್ರದ ವಿರುದ್ಧ ಕೇರಳ, ಪಂಜಾಬ್ ಬಹಿರಂಗ ಸೆಡ್ಡು
  • ಪ್ರಧಾನಿ ಜಾನ್ಸನ್‌ಗೆ 'ದೊಡ್ಡ ಜಯ': ಟ್ರಂಪ್
  • ಚುನಾವಣಾ ಕಣದಲ್ಲಿ ಕ್ರಿಮಿನಲ್ ಗಳು , ಕೋಟ್ಯಾಧಿಪತಿಗಳು
  • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ 19ರಂದು ದೇಶಾದ್ಯಂತ ಪ್ರತಿಭಟನೆಗೆ ಎಡ ಪಕ್ಷಗಳ ಕರೆ
  • ಫಿಲಿಪೈನ್ಸ್‌ನಲ್ಲಿ ರಸ್ತೆ ಅಪಘಾತ: ಕನಿಷ್ಠ 6 ಸಾವು
  • ಕನ್ಸರ್ವೇಟಿವ್ ಪಕ್ಷಕ್ಕೆ ವಿಜಯ : ಎಕ್ಸಿಟ್ ಪೋಲ್ ಸಮೀಕ್ಷೆ
Karnataka Share

ಸುಪ್ರೀಂ ತೀರ್ಪು ಅತೃಪ್ತ ಶಾಸಕರಿಗೆ ನೈತಿಕ ಬಲ ತುಂಬಿದೆ: ಬಿಎಸ್‌ವೈ

ಬೆಂಗಳೂರು, ಜು 17 (ಯುಎನ್‌ಐ) ಶಾಸಕರು ರಾಜೀನಾಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಅತೃಪ್ತ ಶಾಸಕರಿಗೆ ನೈತಿಕ ಬಲ ತಂದುಕೊಟ್ಟಿದೆ ಎಂದು ವಿಧಾನಸೆಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಪು ಪ್ರಜಾತಂತ್ರ ವ್ಯವಸ್ಥೆಗೆ ಗೆಲುವಾಗಿದೆ. ಇದು ಮಧ್ಯಂತರ ಆದೇಶವಾಗಿದ್ದು, ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಕ್ರಮಕೈಗೊಂಡು ಮತ್ತೇ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಇದೇ ವೇಳೆ ಬಿಎಸ್‌ವೈ ಒತ್ತಾಯಿಸಿದರು.
ವಿಧಾನಸಭೆ ಮಾಜಿ ಸ್ಪೀಕರ್‌ ಹಾಗೂ ಬಿಜೆಪಿ ಶಾಸಕ ಜಗದೀಶ ಶೆಟ್ಟರ್‌ ಅವರು ಪ್ರತಿಕ್ರಿಯಿಸಿ, ಈ ತೀರ್ಪು ಶಾಸಕರ ಹಕ್ಕು ಬಾಧ್ಯತೆಗಳನ್ನು ರಕ್ಷಿಸಿದೆ. ಅತೃಪ್ತ ಶಾಸಕರ ಪರವಾಗಿ ಈ ತೀರ್ಪು ಬಂದಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ವಿಶ್ವಾಸ ಮತಯಾಚನೆಗೂ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಶ್ವಾಸವಿದೆ ಎಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಕೆ.ಎಸ್‌ ಈಶ್ವರಪ್ಪ ಮಾತನಾಡಿ, ರಾಜ್ಯದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದು, ಮೈತ್ರಿ ಸರ್ಕಾರದ ವಿರುದ್ಧವಾದ ಆದೇಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚಿಸಲು ಮುಂದಾಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ ಎಂದರು.
ಮಾಜಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿ, ಇದೊಂದು ಐತಿಹಾಸಿಕ ತೀರ್ಪು. ಶಾಸಕಾಂಗ ತಪ್ಪು ಹಾದಿಯಲ್ಲಿ ಸಾಗದಂತೆ ನೋಡಿಕೊಂಡಿದೆ ಎಂದರು.
ಯುಎನ್‌ಐ ವಿಎನ್‌ ಆರ್‌ಕೆ 1238
More News
ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಚೇತರಿಕೆ : ಮುಖ್ಯಮಂತ್ರಿ,ಸಚಿವರು ಹಾಗೂ ಕೈ ನಾಯಕರಿಂದ ಆರೋಗ್ಯ ವಿಚಾರಣೆ

12 Dec 2019 | 10:14 PM

ಬೆಂಗಳೂರು,ಡಿ 12(ಯುಎನ್ಐ) ಆಂಜಿಯೋಪ್ಲಾಸ್ಟ್ ಚಿಕಿತ್ಸೆ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇಂದು ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ,ಕೆ.ಎಸ್.ಈಶ್ವರಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರು ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಬೇಗ ಗುಣಮುಖರಾಗ ವಂತೆ ಹಾರೈಸಿದರು.

 Sharesee more..