Friday, Feb 28 2020 | Time 08:20 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಸಿಬಿಐನಿಂದ ಛೋಟಾ ರಾಜನ್ ಪ್ರಕರಣಗಳ ವಿಚಾರಣೆ

ನವದೆಹಲಿ, ಜನವರಿ 23(ಯುಎನ್ಐ) ಭೂಗತ ಪಾತಕಿ ಛೋಟಾ ರಾಜನ್ ಪಾತ್ರ, ಮತ್ತು ಕೈವಾಡವಿದೆ ಎನ್ನಲಾದ 4 ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
1997ರಲ್ಲಿ ಪತ್ರಕರ್ತ ಬಲ್ಜೀತ್ ಶೆರ್ಸಿಂಗ್ ಪರ್ಮಾರ್ ಕೊಲೆಯತ್ನವೂ ಇದರಲ್ಲಿ ಸೇರಿದೆ, ಸದ್ಯ ಛೋಟಾ ರಾಜನ್ ಬಂಧನದಲ್ಲಿ ಇದ್ದಾನೆ.
ಇಂಡೋನೇಷ್ಯಾದಲ್ಲಿ 2015ರಲ್ಲಿ ಆತ ನನ್ನು ಬಂಧಿಸಿ, ನಂತರ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.
1995ರಲ್ಲಿ ಮುಂಬಯಿ ಉದ್ಯಮಿ ದೇವಾಂಗ್ ಬಿಪಿನ್ ಪಾರೀಖ್ರಿಂದ 20 ಲಕ್ಷ ರೂ., 1998 ರಲ್ಲಿ 25 ಲಕ್ಷ ರೂಪಾಯಿ ವಸೂಲು ಮಾಡಿದ ಪ್ರಕರಣವನ್ನೂ ಸಹ ಸಿಬಿಐ ವಿಚಾರಣೆಗೆ ಕೈಗೆತ್ತಿಕೊಂಡಿದೆ ಎಂದೂ ಮೂಲಗಳು ಹೇಳಿವೆ.
ಯುಎನ್ಐ ಕೆಎಸ್ಆರ್ 1107