Saturday, Nov 28 2020 | Time 16:09 Hrs(IST)
 • ಬಿಬಿಐಎಲ್‌: ಕೋವ್ಯಾಕ್ಸಿನ್‌ ಪ್ರಗತಿಗೆ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
 • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನಿಗ್ರಹ ಸುಗ್ರೀವಾಜ್ಞೆ ಇಂದಿನಿಂದ ಜಾರಿ
 • ಇಂದು ಪುಣೆ ತಲುಪಲಿರುವ ಪ್ರಧಾನಿ ಮೋದಿ
 • ಪಾಕ್ ನಿಂದ ಕಾಂಬೋಡಿಯಾಗೆ ವಿಮಾನದಲ್ಲಿ 10 ಗಂಟೆ ಪ್ರಯಾಣಿಸಲಿರುವ ಆನೆ !
 • ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ
 • ಬಿ ಐ ಎಸ್ ದೃಢೀಕೃತ ಹೆಲ್ಮಟ್ ಮಾತ್ರ ಧರಿಸಬೇಕು ತಪ್ಪಿದರೆ ಶಿಕ್ಷೆ ನಿಶ್ಚಿತ !
 • ಗುರುಗ್ರಾಮದಲ್ಲಿ ಡಿ 18ಕ್ಕೆ ಬಾಕ್ಸಿಂಗ್ ಸಂಸ್ಥೆಯ ಚುನಾವಣೆ
 • ಹೈದ್ರಾಬಾದ್ ; ‘ಕೋವಾಕ್ಸಿನ್’ ಲಸಿಕೆ ಅಭಿವೃದ್ದಿ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ
 • ಪುಟಿದೇಳುವ ನಿರೀಕ್ಷೆಯಲ್ಲಿ ಒಡಿಶಾ, ಜಮ್ ಶೆಡ್ಪುರ
 • ಮತ್ತೆ ಮಿಂಚುವ ಬಗ್ಗೆ ಭರವಸೆ ನೀಡಿದ ರಾಬ್ಬೀ ಫ್ಲವರ್
 • ಸರಣಿ ಜೀವಂತಕ್ಕೆ ಟೀಮ್ ಇಂಡಿಯಾ ಹಂಬಲ
 • ದೇಶದಲ್ಲಿ ಕೋವಿಡ್‍-19ನ 41,322 ಹೊಸ ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93,51,110ಕ್ಕೆ ಏರಿಕೆ
 • ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
 • ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ
 • ಕೋವಿಡ್ ಸೋಂಕು ನಿಯಂತ್ರಣ: ಪರಿಷ್ಕೃತ ಮಾರ್ಗ ಸೂಚಿ ಹೊರಡಿಸಿದ ರಾಜ್ಯ ಸರ್ಕಾರ
Sports Share

ಸೀಮಿತ ಓವರ್ ಗಳಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಹೆಸರಿಸಿದ ವಸೀಮ್ ಜಾಫರ್‌

ನವದೆಹಲಿ,ಜುಲೈ 3 (ಯುಎನ್ಐ)
ಇಂಗ್ಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭವಾಗಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಆದರೆ, ಭಾರತಕ್ಕೆ ಈ ಸೌಭಾಗ್ಯ ಇನ್ನೂ ಮರಿಚಿಕೆಯಾಗಿದೆ. ಏಕೆಂದರೆ, ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ದಿನೇ ದಿನೇ ಅಪಾಯ ಮಟ್ಟ ದಾಟಿದ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಕ್ರಿಕೆಟ್‌ ಬಗ್ಗೆ ಮಾತನಾಡುವುದು ಕೂಡ ಕಷ್ಟವಾಗಿದೆ.
ಆದರೆ, ಕ್ರಿಕೆಟ್‌ ಅಭಿಮಾನಿಗಳ ದಾಹ ತಣಿಸಲು ಹಾಲಿ ಮಾಜಿ ಕ್ರಿಕೆಟಿಗರೆಲ್ಲ ಇಂದು ಸೋಷಿಯಲ್‌ ಮೀಡಿಯಾಗಳ ಮೂಲಕ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಹಾಗೂ ಯಜ್ವೇಂದ್ರ ಚಹಲ್‌ ಅವರಂತಹ ಕ್ರಿಕೆಟ್‌ ತಾರೆಯರು ಸೋಷಿಯಲ್‌ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಚುರುಕಾಕಿದ್ದಾರೆ. ಇದೀಗ ಈ ಸಾಲಿಗೆ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಸೀಮ್‌ ಜಾಫರ್‌ ಕೂಡ ಸೇರಿಕೊಂಡಿದ್ದಾರೆ.
ಇತ್ತೀಚೆಗೆ ಕ್ರಿಕ್‌ ಟ್ರ್ಯಾಕರ್‌ ವೆಬ್‌ಸೈಟ್‌ನ 'ದಿ ಕ್ರಿಕೆಟ್‌ ಟಾಕ್ಸ್‌' ಕಾರ್ಯಕ್ರಮದಲ್ಲಿ ಮಾತನಾಡಿದ ಜಾಫರ್‌, ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಸೀಮಿತ ಓವರ್‌ಗಳಲ್ಲಿ ಮೂಡಿಬಂದಿರುವ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಯಾರೆಂದು ಹೆಸರಿಸಿದ್ದಾರೆ. ಇದಕ್ಕೆ ಅವರನ್ನು ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು.
ಈ ಪ್ರಶ್ನೆಗೆ ಕಿಂಚಿತ್ತೂ ಸಮಯ ತೆಗೆದುಕೊಳ್ಳದ ಜಾಫರ್‌, ಟೀಮ್‌ ಇಂಡಿಯಾದ ಹಾಲಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ಮತ್ತು ಹಿಟ್‌ಮ್ಯಾನ್‌ ಖ್ಯಾತಿಯ ಸ್ಟಾರ್‌ ಓಪನರ್‌ ರೋಹಿತ್‌ ಅವರಿಗಿಂತಲೂ ಶ್ರೇಷ್ಠ ಎಂದು ಕರೆದಿದ್ದಾರೆ. "ವಿರಾಟ್‌ ಕೊಹ್ಲಿ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಭಾರತ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌," ಎಂದಿದ್ದಾರೆ.
ಸದ್ಯ ಕ್ರಿಕೆಟ್‌ ಆಡುತ್ತಿರುವ ಆಟಗಾರರ ಪೈಕಿ ಒಡಿಐ ಮತ್ತು ಟಿ20-ಐನಲ್ಲಿ ವಿರಾಟ್‌ ಕೊಹ್ಲಿ ಅತ್ಯಧಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್‌ಗಳಿಸಿದವರ ಸಮಗ್ರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ದಿಲ್ಲಿ ಮೂಲದ ಕ್ರಿಕೆಟಿಗ 248 ಒಡಿಐ ಪಂದ್ಯಗಳನ್ನು ಆಡಿದ್ದು, 11,867 ರನ್‌ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ 82 ಪಂದ್ಯಗಳಿಂದ 2794 ರನ್‌ಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ಯುಎನ್ಐಆರ್ ಕೆ 1626