Sunday, Jul 5 2020 | Time 13:03 Hrs(IST)
 • ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ,ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ : ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ
 • ದೆಹಲಿಯಲ್ಲಿ ಸೋಂಕಿತರು ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ; ಕೇಜ್ರವಾಲ್
 • ದುಬೈನಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆ
 • ಭಾರತದಲ್ಲಿ 24,850 ಕೋವಿಡ್ ಪ್ರಕರಣಗಳು ವರದಿ, ಗುಣಮುಖರಾದವರ 4 ಲಕ್ಷಕ್ಕೇರಿಕೆ
 • ನ್ಯೂಜಿಲೆಂಡ್‌ನಲ್ಲಿ ಹೊಸದಾಗಿ ಮೂರು ಕೊರೊನಾ ಪ್ರಕರಣ ದೃಢ
 • ಭಾನುವಾರದ ಲಾಕ್‌ಡೌನ್‌ ಬಹುತೇಕ ಯಶಸ್ವಿ: ಜನಜೀವನ ಸ್ತಬ್ಧ
 • ಕಂದಮಾಲ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ: ನಾಲ್ವರು ನಕ್ಸಲರು ಹತ
 • ಭಾರತದಲ್ಲಿ ಒಂದೇ ದಿನ ೨೪,೮೫೦ ಪ್ರಕರಣಗಳು, ೬೧೩ ಸಾವುಗಳು !
 • ಬ್ರೆಜಿಲ್‍ನಲ್ಲಿ ಒಂದೇ ದಿನ 38,000 ಹೊಸ ಕೊವಿಡ್‍ ಪ್ರಕರಣಗಳು ದೃಢ, 1,000ಕ್ಕೂ ಹೆಚ್ಚು ಸೋಂಕಿತರು ಸಾವು
 • ಭಾರತವನ್ನು ಅಮೆರಿಕಾ ಸದಾ ಪ್ರೀತಿಸುತ್ತದೆ; ಡೊನಾಲ್ಡ್ ಟ್ರಂಪ್
 • ಕೋವಿಡ್‌-19: ಹಾಸನದಲ್ಲಿ ಮತ್ತೊಂದು ಸಾವು; ಮೃತರ ಸಂಖ್ಯೆ 8ಕ್ಕೆ ಏರಿಕೆ
 • ಶ್ರೀನಗರ- ಪುಲ್ವಾಮ ರಸ್ತೆಯಲ್ಲಿ ಸ್ಫೋಟ, ಸಿಆರ್ಪಿಎಫ್ ಯೋಧನಿಗೆ ಗಾಯ
 • ಜಪಾನ್‍ ನಲ್ಲಿ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ-ಏಳು ಮಂದಿ ಸಾವು
 • ಸಣ್ಣ ಉದ್ಯಮಗಳಿಗೆ ತುರ್ತು ಸಾಲ, ತಾತ್ಕಾಲಿಕ ವಿಸ್ತರಣೆಗೆ ಟ್ರಂಪ್ ಸಹಿ
 • ಅಮೆರಿಕನ್ನರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ತಣ್ಣಿರು ಹಾಕಿದ ಕರೋನ
Sports Share

ಸೀಮಿತ ಓವರ್ ಗಳಿಗೆ ಅಶ್ವಿನ್ ಆಡಿಸಬೇಕು: ಹರಭಜನ್ ಸಿಂಗ್

ನವದೆಹಲಿ, ನ 20 (ಯುಎನ್‌ಐ) ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸೀಮಿತ ಓವರ್‌ಗಳ ಕ್ರಿಕೆಟ್ ಗೆ ಮರಳಲು ಅರ್ಹರಾಗಿದ್ದಾಾರೆ ಎಂದು ಹಿರಿಯ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯುವ ಐಸಿಸಿ ಟಿ-20 ವಿಶ್ವಕಪ್‌ಗೆ ಭಾರತ ತಂಡ ಪೂರ್ವ ತಯಾರಿ ನಡೆಸುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್ ಕೂಡ ಬಲಿಷ್ಟ ತಂಡ ಕಟ್ಟುವಲ್ಲಿ ತನ್ನ ಚಿತ್ತ ಹರಿಸಿದೆ. ಸ್ಪಿನ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರಾಹುಲ್ ಚಾಹರ್‌ಗೆ ಇದೀಗ ಅವಕಾಶ ನೀಡಿದೆ.
ಮುಂದಿನ ತಿಂಗಳು ವೆಸ್ಟ್‌ ಇಂಡೀಸ್ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಗೆ ತಂಡವನ್ನು ನಾಳೆ ಆಯ್ಕೆ ಮಾಡಲಾಗುತ್ತಿದೆ. ಈ ಹಿನ್ನೆೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂದು ಅಶ್ವಿನ್ ಪರ ಭಜ್ಜಿ ಬ್ಯಾಟ್ ಬೀಸಿದ್ದಾರೆ.
‘‘ಚುಟುಕು ಕ್ರಿಕೆಟ್ ನಲ್ಲಿ ವಾಷಿಂಗ್ಟನ್ ಸುಂದರ್ ತೋರುತ್ತಿರುವ ಪ್ರದರ್ಶನ ಗಮನಿಸುತ್ತಿದ್ದರೆ, ಆರ್. ಅಶ್ವಿನ್ ಅವರಿಗೆ ಮತ್ತೊೊಮ್ಮೆ ಅವಕಾಶ ನೀಡಬಹುದು ಎಂದೆನಿಸುತ್ತಿದೆ. ಇತ್ತೀಚೆಗೆ ಟೆಸ್‌ಟ್‌ ಕ್ರಿಕೆಟ್ ನಲ್ಲಿ ಅಶ್ವಿನ್ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ.’’ ಎಂದು ಹರಭಜನ್ ಸಿಂಗ್ ಸುದ್ದಿಸಂಸ್ಥೆೆಯೊಂದಿಗೆ ತಿಳಿಸಿದ್ದಾರೆ.
‘‘ಅಶ್ವಿನ್ ಮಾಡುವ ಸ್ಪಿನ್ ನಲ್ಲಿ ಹಲವು ವ್ಯತ್ಯಾಸಗಳನ್ನು ಒಳಗೊಂಡಿದೆ. ಸುಂದರ್ ಇನ್ನೂ ಹೆಚ್ಚಿನ ಪರಿಪಕ್ವತೆ ಸಾಧಿಸುವುದು ಅಗತ್ಯವಿದೆ. ಚೆನ್ನೂ ಸ್ಪಿನ್ನರ್ ಇನ್ನೂ ಅತ್ಯುತ್ತಮ ಪ್ರದರ್ಶನ ತೋರಬೇಕು ಎಂಬುದು ನನ್ನ ಅಭಿಪ್ರಾಯ. ಯುವ ಆಟಗಾರರು ಹೆಚ್ಚು ತಂಡದಲ್ಲಿ ಆಡಬೇಕು ಎಂಬುದು ನನ್ನ ಯೋಚನೆ. ಆದರೆ, ಅವರು ಹೆಚ್ಚಿನ ಪರಿಪಕ್ವತೆ ಹಾಗೂ ಗುಣಮಟ್ಟದೊಂದಿಗೆ ಅವರು ತಂಡಕ್ಕೆೆ ಮರಳಬೇಕು.’’ ಎಂಬುದು ನನ್ನ ವಾದ ಎಂದು ಭಜ್ಜಿ ಹೇಳಿದ್ದಾರೆ.
ಯುಎನ್‌ಐ ಆರ್ ಕೆ 2153