Monday, Aug 3 2020 | Time 23:09 Hrs(IST)
 • ಪೋಖ್ರಿಯಾಲ್ ಅವರಿಂದ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
 • ಕೊವಿಡ್‍:ದೆಹಲಿಯಲ್ಲಿ ಸತತ 2ನೇ ದಿನ 1,000ಕ್ಕೂ ಕಡಿಮೆ ಪ್ರಕರಣಗಳು ವರದಿ, ಚೇತರಿಕೆ ಪ್ರಮಾಣ ಶೇ89 72ಕ್ಕೆ ಏರಿಕೆ
 • 2004ರಲ್ಲಿ ಸುನಾಮಿಯಿಂದ ಪಾರಾದ ಬಗ್ಗೆ ವಿವರಿಸಿದ ಅನಿಲ್‌ ಕುಂಬ್ಳೆ
 • ರಾಮ ಮಂದಿರ ಭೂಮಿ ಪೂಜೆಯಲ್ಲಿ ಸರ್ಕಾರ ಭಾಗವಹಿಸುವಿಕೆ ಸಂವಿಧಾನದ ಉಲ್ಲಂಘನೆ-ಸಿಪಿಎಂ
 • ಮಹೇಂದ್ರ ಸಿಂಗ್‌ ಧೋನಿ ಸಹಾಯವನ್ನು ಸ್ಮರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌
 • 'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್ ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
 • ದ್ರಾವಿಡ್ ಎದುರಿಸಿದ್ದ ಸಮಸ್ಯೆ ಬಹಿರಂಗಪಡಿಸಿದ ದಲ್ಜಿತ್‌ ಸಿಂಗ್‌
 • ಕೌಂಟಿ ಕ್ರಿಕೆಟ್ ತೊರೆದು ಕಾರ್ಗಿಲ್‌ ಯುದ್ಧ ಮಾಡಲು ಮುಂದಾಗಿದ್ದೆ: ಶೊಯೇಬ್ ಅಖ್ತರ್
 • ಕೆಪಿಸಿಸಿಯಿಂದ ನಾಯಕತ್ವ, ಆಡಳಿತ ನಿರ್ವಹಣಾ ಸಮಿತಿ ರಚನೆ
 • ಕಾಸರಗೋಡು: ಯುವಕನಿಂದ ಕುಟುಂಬದ ನಾಲ್ವರ ಬರ್ಬರ ಹತ್ಯೆ
 • ಅಯೋಧ್ಯ ಭೂಮಿ ಪೂಜೆಗೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ:ಸಾವಿನ ಸಂಖ್ಯೆ 12ಕ್ಕೆ ಏರಿಕೆ
 • ಅಯೋಧ್ಯ ಭೂಮಿ ಪೂಜೆಗೆ ಬರುವಂತೆ ಮೊದಲ ಆಹ್ವಾನ ಮುಸ್ಲಿಂ ವ್ಯಕ್ತಿಗೆ !
 • ಲಾಕ್‌ಡೌನ್ ದಿನಗಳನ್ನು ಪರಿಷ್ಕರಿಸಿ ಹೊಸ ದಿನಾಂಕ ಘೋಷಿಸಿದ ಪಶ್ಚಿಮ ಬಂಗಾಳ ಸರ್ಕಾರ
 • 50 ರೂ ತಾವು ಪಡೆದ ಮೊತ್ತ ಮೊದಲ ಸಂಪಾದನೆ ಎಂದ ರೋಹಿತ್‌ ಶರ್ಮಾ
Sports Share

ಸ್ಮಿತ್‌ ಮತ್ತು ಎಬಿಡಿ ಎದುರು ಬೌಲಿಂಗ್‌ ಮಾಡುವುದು ಕಷ್ಟ ಎಂದ ಕುಲ್ದೀಪ್

ನವದೆಹಲಿ, ಜುಲೈ 3 (ಯುಎನ್ಐ)
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಮತ್ತು ದಕ್ಷಿಣ ಆಫ್ರಿಕಾದ ನಿವೃತ್ತ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ'ವಿಲಿಯರ್ಸ್‌ ಎದುರು ಬೌಲಿಂಗ್‌ ಮಾಡುವುದು ಬಲು ಕಷ್ಟ ಎಂದು ಟೀಮ್‌ ಇಂಡಿಯಾದ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಇದೀಗ ಹೇಳಿಕೊಂಡಿದ್ದಾರೆ.
ಟೀಮ್‌ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌, ಏಕದಿನ ಕ್ರಿಕೆಟ್‌ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಎಲ್ಲದರಲ್ಲೂ ಇನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಪಡೆದ ಸಾಧನೆ ಮಾಡಿರುವ ಎಡಗೈ ರಿಸ್ಟ್‌ ಸ್ಪಿನ್ನರ್ 25 ವರ್ಷದ ಕುಲ್ದೀಪ್‌, ಇಎಸ್‌ಪಿಎನ್‌ ಕ್ರಿಕ್‌ಇನ್ಫೋದ 'ಕ್ರಿಕೆಟ್‌ ಬಾಝಿ' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
"ಸ್ಟೀವ್‌ ಸ್ಮಿತ್‌ ನನ್ನ ಬೌಲಿಂಗ್‌ನಲ್ಲಿ ಹೆಚ್ಚು ಬ್ಯಾಕ್‌ಫುಟ್‌ನಲ್ಲಿಯೇ ಆಡುತ್ತಾರೆ. ಅವರು ಬಹಳ ತವಾಗಿ ಚೆಂಡನ್ನು ಎದುರಿಸಿ ಆಡುವ ತಂತ್ರ ಬಳಸುತ್ತಾರೆ. ಹೀಗಾಗಿ ಅವರ ಎದುರು ಬೌಲಿಂಗ್‌ ಮಾಡುವುದು ಬಹಳ ಕಷ್ಟದ ಕೆಲಸ," ಎಂದು ಕುಲ್ದೀಪ್‌ ವಿವರಿಸಿದ್ದಾರೆ.
"ಏಕದಿನ ಕ್ರಿಕೆಟ್‌ನಲ್ಲಿಎಬಿ ಡಿ'ವಿಲಿಯರ್ಸ್‌ ಅತ್ಯುತ್ತಮ ಆಟಗಾರ. ಅವರ ಬ್ಯಾಟಿಂಗ್‌ ಶೈಲಿ ಬಹಳ ಅಪರೂಪದ್ದು. ಅವರೀಗ ನಿವೃತ್ತಿ ಹೊಂದಿದ್ದಾರೆ ಎಂಬುದು ನನಗೆ ಒಳ್ಳೆಯ ಸುದ್ದಿ. ನನ್ನೆದುರು ಹೆಚ್ಚು ರನ್‌ ಗಳಿಸಬಲ್ಲರು ಎಂದು ಅವರಂತೆ ಬೇರೆ ಯಾವ ಬ್ಯಾಟ್ಸ್‌ಮನ್‌ ಕೂಡ ಭಯ ನನ್ನಲ್ಲಿ ಹುಟ್ಟಿಸಿಲ್ಲ," ಕುಲ್ದೀಪ್‌ ದಕ್ಷಿಣ ಆಫ್ರಿಕಾದ ದಿಗ್ಗಜನ ಬ್ಯಾಟಿಂಗ್‌ ಬಗ್ಗೆ ಗುಣಗಾನ ಮಾಡಿದ್ದಾರೆ.
ಇನ್ನು ಕಳೆದ ವರ್ಷ ಕಳಪೆ ಫಾರ್ಮ್‌ ಸಮಸ್ಯೆ ಎದುರಿಸಿದ್ದರ ಬಗ್ಗೆಯೂ ಮಾತನಾಡಿರುವ ಕುಲ್ದೀಪ್‌, ಕೆಲ ತಂತ್ರಗಾರಿಕೆಯಲ್ಲಿ ಕೊರತೆ ಅನುಭವಿಸಿದ್ದನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ತಂಡದಲ್ಲಿ ಸತತ ಅವಕಾಶಗಳು ಲಭ್ಯವಾಗದೇ ಇದ್ದದ್ದು ಕೂಡ ತಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದಿದ್ದಾರೆ.
"2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ತೆರಳುವ ಮುನ್ನ ಉತ್ತಮ ತಯಾರಿ ನಡೆಸಿದ್ದೆ. ಆ ವರ್ಷ ಐಪಿಎಲ್‌ನಲ್ಲಿ ಅನುಭವಿಸಿದ್ದ ವೈಫಲ್ಯವನ್ನು ಮೆಟ್ಟಿನಿಲ್ಲುವ ಪ್ರಯತ್ನ ಮಾಡಿದ್ದೆ. ವಿಶ್ವಕಪ್‌ನಲ್ಲಿ ನನ್ನಿಂದ ಹೆಚ್ಚು ವಿಕೆಟ್‌ ಪಡೆಯಲು ಸಾಧ್ಯವಾಗದೇ ಇದ್ದರೂ ಪ್ರದರ್ಶನ ಮಟ್ಟ ಉತ್ತಮವಾಗಿಯೇ ಇತ್ತು," ಎಂದು ಹೇಳಿಕೊಂಡಿದ್ದಾರೆ.
"ವಿಶ್ವಕಪ್‌ ಬಳಿಕ ನನಗೆ ತಂಡದ ಒಳಗೆ ಹೊರಗೆ ಬೀಳುವ ಪರಿಸ್ಥಿತಿ ಎದುರಾಯಿತು. ಸತತವಾಗಿ ಪಂದ್ಯಗಳನ್ನು ಆಡುತ್ತಿದ್ದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇಲ್ಲವಾದರೆ ಉತ್ತಮ ಪ್ರದರ್ಶನ ನೀಡುವ ಒತ್ತಡ ಸದಾ ನಿಮ್ಮನ್ನು ಆವರಿಸಿರುತ್ತದೆ. ಈ ಸಂದರ್ಭದಲ್ಲಿ ಮಾನಸಿಕವಾಗಿ ಹಿಂದೇಟಾಕಿರುತ್ತೇವೆ. ಬಹುಶಃ ಅಲ್ಲಿ ನನ್ನ ತಂತ್ರಗಾರಿಕೆಯಲ್ಲಿ ಕೊರತೆ ಕಾಣಿಸಿಕೊಂಡಿರಬಹುದು," ಎಂದು ವಿವರಿಸಿದ್ದಾರೆ.
ಯುಎನ್ಐಆರ್ ಕೆ1645