Wednesday, Feb 26 2020 | Time 10:40 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
business economy Share

ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬ್ಯಾಂಕುಗಳಲ್ಲಿ ಗುಣಮಟ್ಟದ ಲಾಕರ್ ಗಳು ಅವಶ್ಯಕ: ರಾಘವೇಂದ್ರ ಔರಾದ್ಕರ್

ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬ್ಯಾಂಕುಗಳಲ್ಲಿ ಗುಣಮಟ್ಟದ ಲಾಕರ್ ಗಳು ಅವಶ್ಯಕ: ರಾಘವೇಂದ್ರ ಔರಾದ್ಕರ್
ಸಾರ್ವಜನಿಕರ ಆಸ್ತಿ ರಕ್ಷಣೆಗೆ ಬ್ಯಾಂಕುಗಳಲ್ಲಿ ಗುಣಮಟ್ಟದ ಲಾಕರ್ ಗಳು ಅವಶ್ಯಕ: ರಾಘವೇಂದ್ರ ಔರಾದ್ಕರ್

ಬೆಂಗಳೂರು, ಜ.23 (ಯುಎನ್ಐ) ಬ್ಯಾಂಕುಗಳು, ದೇವಾಲಯಗಳು, ಆಭರಣ ಮಳಿಗೆಗಳು, ವಸತಿ ಪ್ರದೇಶಗಳಲ್ಲಿರುವ ಸಮುದಾಯ ಕೇಂದ್ರಗಳು ಸಾರ್ವಜನಿಕರ ಆಸ್ತಿ ರಕ್ಷಣೆಗಾಗಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುರಕ್ಷಿತ ಹಾಗೂ ಗುಣಮಟ್ಟದ ಲಾಕರ್ ಗಳನ್ನು ಹೊಂದುವುದು ಇಂದಿನ ದಿನಗಳಲ್ಲಿ ಬಹಳ ಪ್ರಮುಖವಾಗಿದೆ ಎಂದು ಕರ್ನಾಟಕ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.ನಗರದ ಬಸವನಗುಡಿ ಆರ್.ವಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಗುನ್ನೆಬೋ ಇಂಡಿಯಾ ಅನುಭವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಪೊಲೀರಿಗೆ ಇಂದಿನ ದಿನಗಳಲ್ಲಿ ಸಾರ್ವಜನಿಕರ ಆಸ್ತಿ ರಕ್ಷಣೆ ಮಾಡುವುದು ಬಹಳ ಪ್ರಮುಖವಾದ ಕರ್ತವ್ಯವಾಗಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಗುನ್ನೆಬೋ ಇಂಡಿಯಾ ತನ್ನ ನವೀನ ಅತ್ಯಾಧುನಿಕ ಮತ್ತು ಪರಿಣಾಮಕಾರಿ ವ್ಯವಸ್ಥೆಗಳೊಂದಿಗೆ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸುತ್ತಿದೆ. ಮುಖ್ಯವಾಗಿ ಕಳ್ಳರು ಕನ್ನ ಹಾಕಲು ಯತ್ನಿಸಿದರೆ ತಕ್ಷಣವೇ ಹತ್ತಿರದ ಪೋಲಿಸ್ ಠಾಣೆ ಸೇರಿದಂತೆ, ನೋಂದಣಿ ಮಾಡಿದ 10 ಮೊಬೈಲ್ ಗಳಿಗೆ ಸಂದೇಶ ರವಾನೆಯಾಗಲಿದೆ ಎಂದರು.

ದಕ್ಷಿಣ ಭಾರತ ಸೇರಿದಂತೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಇರುವುದರಿಂದ, ಇದು ಭದ್ರತೆಗೆ ಸಂಬಂಧಿಸಿದ ಪ್ರಮುಖ ಮಾರುಕಟ್ಟೆಯನ್ನು ಒದಗಿಸುತ್ತದೆ. ಆರ್‌.ವಿ. ರಸ್ತೆಯಲ್ಲಿರುವ ಈ ರೀತಿಯ ಅನುಭವ ಕೇಂದ್ರವು ವೈಯಕ್ತಿಕ ಮತ್ತು ಸಾಮೂಹಿಕ ಆಧಾರಿತ ವ್ಯವಸ್ಥೆಗಳಿಗೆ ಪ್ರಸ್ತುತ ಅಗತ್ಯವಾಗಿದೆ ಎಂದು ಅವರು ಹೇಳಿದರು.ವಾಣಿಜ್ಯ ಕಂಪನಿಗಳಿಗಳು, ವ್ಯಾಪಾರ ಸ್ಥಳಗಳು, ಸಮಾವೇಶ ಕೇಂದ್ರಗಳು, ಹೋಟೆಲ್‌ಗಳು ಮತ್ತು ವಸತಿ ಪ್ರದೇಶಗಳಲ್ಲಿರುವ ಸಮುದಾಯ ಕೇಂದ್ರಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಇರುವಲ್ಲಿಯೂ ಭದ್ರತೆಯು ಇಂದು ಒಂದು ಪ್ರಮುಖ ಕಾಳಜಿಯಾಗಿದೆ ಎಂದು ಔರಾದ್ಕರ್ ಹೇಳಿದರು.ಗುನ್ನೆಬೊ ಸೇಫ್ ಸ್ಟೊರೇಜ್‌ ನ ಉಪಾಧ್ಯಕ್ಷ ರಾಮ್ ಶ್ರೀನಿವಾಸನ್ ಮಾತನಾಡಿ, ಗುಜಾರಾತ್ ನಲ್ಲಿರುವ ಗುನ್ನೆಬೊ ಇಂಡಿಯಾದ ಹಲೊಲ್ ಘಟಕವು ಸೇಫ್ ಡಿಪಾಸಿಟ್ ಲಾಕರ್ಸ್, ವಾಲ್ಟ್ ಮತ್ತು ಸ್ಟ್ರಾಂಗ್ ರೂಮ್ ಡೋರ್ಸ್, ಫೈರ್ ರೆಸಿಸ್ಟೆಂಟ್ ಸೇಫರ್ ಗಳು (ಅಗ್ನಿ ನಿರೋಧಕ ಲಾಕರ್ ಗಳು), ಫೈಲಿಂಗ್ ಕ್ಯಾಬಿನೆಟ್ ಮತ್ತು ಫೈರ್ ಸೇಫ್ಟಿ ಉತ್ಪನ್ನಗಳನ್ನು ತಯಾರಿಸುತ್ತದೆ. ಈ ಉತ್ಪನ್ನಗಳನ್ನು ಭಾರತದ ದೇಶೀಯ ಮಾರುಕಟ್ಟೆ ಮತ್ತು ಭಾರತದ ಹೊರಗಿನ ಹಲವಾರು ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ ಎಂದು ತಿಳಿಸಿದರು.ಪ್ರಮುಖವಾಗಿ ಗುನ್ನೆಬೋ ಇಂಡಿಯಾವು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಲಾಕರ್ ಮತ್ತು ಸ್ಪ್ರಾಂಗ್ ರೂಮ್ ಗಳನ್ನು ತಯಾರಿಸಿ ಕೊಡುತ್ತದೆ. ಇದರಿಂದಾಗಿ ಸುರಕ್ಷಿತ ಭವಿಷ್ಯವನ್ನು ಕಲ್ಪಿಸಿಕೊಂಡು, ಭಾರತದಲ್ಲಿ ಎಂಟು ದಶಕಗಳ ಅನುಭವವನ್ನು ಹೊಂದಿರುವ ಕಂಪನಿಯು, ಭಾರತದಲ್ಲಿ ಮೊದಲ ಅನುಭವ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಯುಎನ್ಐ ಎಎಚ್ 1340

More News

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..
ಪೆಟ್ರೋಲ್ ದರ ಏರಿಕೆ

ಪೆಟ್ರೋಲ್ ದರ ಏರಿಕೆ

23 Feb 2020 | 8:29 PM

ನವದೆಹಲಿ, ಫೆ 23 (ಯುಎನ್ಐ) ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,860 ರೂ ಇದ್ದು ದೇಶದಲ್ಲಿ ಹಲವು ದಿನಗಳಿಂದ ಇಳಿಕೆ ಕಂಡಿದ್ದ ಪೆಟ್ರೋಲ್‌ ದರ ಭಾನುವಾರ ಕೊಂಚ ಏರಿಕೆಯಾಗಿದೆ.

 Sharesee more..