Monday, Jul 13 2020 | Time 04:10 Hrs(IST)
Entertainment Share

ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

ಸ್ವಾಭಿಮಾನದ  ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ
ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ : ಸುಮಲತಾ ಕೃತಜ್ಞತೆ

ಬೆಂಗಳೂರು, ಮೇ 26 (ಯುಎನ್‍ಐ) ಕನ್ನಡದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಾಧಿಸಿದ ಗೆಲುವಿಗೆ ಮೇ 23ಕ್ಕೆ ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಅವರು ನಾಡಿನ ಜನತೆಗೆ ಕೃತಜ್ಞತೆ ಅರ್ಪಿಸಿದ್ದಾರೆ.ಭಾರತೀಯ ರಾಜಕೀಯ ರಂಗದಲ್ಲೇ ಸಂಚಲನ ಮೂಡಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಾವು ನನ್ನನ್ನು ಗೆಲ್ಲಿಸಿ ಮೇ 23ಕ್ಕೆ ಒಂದು ವರ್ಷ ಪೂರೈಸಿದೆ. ಈ ಅಭೂತಪೂರ್ವ ಗೆಲುವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಡ್ಯ ಲೋಕಸಭಾ ಕ್ಷೇತ್ರ ಭಾರಿ ರಣರಂಗಕ್ಕೆ ಕಾರಣವಾಗಿತ್ತು. ಆದರೂ ತಾವು ನಿರಾತಂಕವಾಗಿ ನನ್ನನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಿರಿ. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ನನ್ನನ್ನು ನಿರೀಕ್ಷೆಗೂ ಮೀರಿ ಗೆಲ್ಲಿಸಿದಿರಿ. ಇದು ತಮ್ಮೆಲ್ಲರ ಗೆಲುವು ಎಂದು ಹೇಳಲು ಹೆಮ್ಮೆಯಿದೆ ಎಂದಿದ್ದಾರೆ.ಸಂಸದೆಯಾದ ಬಳಿಕ ಮಂಡ್ಯ ಕ್ಷೇತ್ರಕ್ಕೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆಯಿದೆ ಎಂದು ಸುಮಲತಾ ಅಂಬರೀಷ್ ಹೇಳಿಕೊಂಡಿದ್ದಾರೆ.ಹಾಗೂ ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದ ರೀತಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಮನವಿ ಮಾಡಿದ್ದಾರೆ.ಯುಎನ್‍ಐ ಎಸ್‍ಎ ವಿಎನ್ 1452

More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..